ಸ್ಯಾಂಡಲ್ವುಡ್ ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಿದ ಕಾಳಿ; ಮೊದಲ ದಿನ KD ಅಕೌಂಟ್ಗೆ ಬಂದ ಹಣವೆಷ್ಟು?

‘ಆಕ್ಷನ್ ಪ್ರಿನ್ಸ್’ ಧ್ರುವ ಸರ್ಜಾ ಹಾಗೂ ‘ಶೋಮ್ಯಾನ್’ ಪ್ರೇಮ್ ಅವರ ಬಹುನಿರೀಕ್ಷಿತ ಕಾಂಬಿನೇಷನ್ ಸಿನಿಮಾ ಕೆಡಿ: ದಿ ಡೆವಿಲ್ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ.
ಬಹುತೇಕ ಕಡೆ ಹೌಸ್ಫುಲ್
ನೆನ್ನೆ ಅದ್ದೂರಿಯಾಗಿ ಬಿಡುಗಡೆಗೊಂಡ ಈ ಚಿತ್ರ, ಮೊದಲ ದಿನವೇ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಮುಂಜಾನೆ 6 ಗಂಟೆಯಿಂದಲೇ ಶೋಗಳು ಆರಂಭವಾಗಿದ್ದು, ಬಹುತೇಕ ಕಡೆಹೌಸ್ಫುಲ್ ಆಗಿದ್ದವು. ಇದರಿಂದ ಚಿತ್ರಕ್ಕೆ ಉತ್ತಮ ಆರಂಭಿಕ ಗಳಿಕೆ ಸಿಕ್ಕಿದೆ.
READ THIS : ವಾಣಿಜ್ಯ LPG ಸಿಲಿಂಡರ್ ದರ ಏಕಾಏಕಿ ಏರಿಕೆ

ಮೊದಲ ದಿನ ಗಳಿಕೆ ಎಷ್ಟಾಯ್ತು?
ಸ್ಯಾಕ್ನಿಲ್ಕ್ ವರದಿ ಪ್ರಕಾರ, KD ಚಿತ್ರ ಮೊದಲ ದಿನ ದೇಶಾದ್ಯಂತ ಸುಮಾರು ₹4.10 ಕೋಟಿ ಗಳಿಕೆ ಮಾಡಿದೆ. ಒಟ್ಟಾರೆ ಸುಮಾರು 46% ಆಕ್ಯುಪೆನ್ಸಿ ದಾಖಲಾಗಿದ್ದು, ಬೆಳಗಿನ ಪ್ರದರ್ಶನಗಳಿಗಿಂತ ಮಧ್ಯಾಹ್ನ ಹಾಗೂ ರಾತ್ರಿ ಶೋಗಳಿಗೆ ಹೆಚ್ಚು ಪ್ರೇಕ್ಷಕರು ಆಗಮಿಸಿದ್ದಾರೆ. ವಿಶೇಷವಾಗಿ ರಾತ್ರಿ ಪ್ರದರ್ಶನಗಳು ತುಂಬಿ ತುಳುಕುತ್ತಿವೆ.

ಇನ್ನು ಇಂದಿನಿಂದ ವಾರಾಂತ್ಯದ ಮೂರು ರಜೆಗಳಿರುವ ಕಾರಣ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಟ್ರೇಡ್ ಅನಾಲಿಸ್ಟ್ಗಳ ಅಂದಾಜು ಪ್ರಕಾರ, ಮೊದಲ ವಾರಾಂತ್ಯದಲ್ಲೇ ₹20 ಕೋಟಿ ಗಡಿ ತಲುಪುವ ನಿರೀಕ್ಷೆ ಇದೆ.
ಚಿತ್ರಕ್ಕೆ ಆನೆಬಲ
ಇನ್ನು, ಕ್ರೇಜಿ ಸ್ಟಾರ್ ರವಿಚಂದ್ರನ್, ರಮೇಶ್ ಅರವಿಂದ್, ಬಾಲಿವುಡ್ ಸ್ಟಾರ್ಗಳಾದ ಸಂಜಯ್ ದತ್, ಶಿಲ್ಪಾ ಶೆಟ್ಟಿ ಮತ್ತು ನಾಯಕಿ ರೀಷ್ಮಾ ನಾಣಯ್ಯ ಅವರ ನಟನೆ ಚಿತ್ರಕ್ಕೆ ಆನೆಬಲ ತಂದಿದೆ.

MUST WATCH : ಲಾಂಗ್ ಹಿಡಿದು ಪುಡಿರೌಡಿಯ ಹಾವಳಿ – ಪುಡಿರೌಡಿಗಳಿಗೆ ಪೊಲೀಸರ ಭಯವೇ ಇಲ್ವಾ.?




