ವಾಣಿಜ್ಯ LPG ಸಿಲಿಂಡರ್ ದರ ಭರ್ಜರಿ ಏರಿಕೆ – ಏಕಾಏಕಿ 993 ರೂ. ಹೆಚ್ಚಳ : ಹೋಟೆಲ್ ಗೆ ನೇರ ಬಿಸಿ.

ಮಧ್ಯಪ್ರಾಚ್ಯ ದೇಶಗಳ ಯುದ್ಧದ ಎಫೆಕ್ಟ್ನಿಂದಾಗಿ ದೇಶದಲ್ಲಿ ಗ್ಯಾಸ್ ಸಿಲಿಂಡರ್ ಭಿಕ್ಕಟ್ಟು ಮುಂದುವರೆದಿದ್ದು, ಇದೀಗ ಏಕಾಏಕಿ ವಾಣಿಜ್ಯ ಸಿಲಿಂಡರ್ ದರವನ್ನು ಕೇಂದ್ರ ಸರ್ಕಾರ ಏರಿಕೆ ಮಾಡಿದೆ. LPG ಸಿಲಿಂಡರ್ ದರ ಏರಿಕೆಯಿಂದಾಗಿ ಜನರನ್ನು ಕಂಗಾಲಾಗುವಂತೆ ಮಾಡಿದೆ.
ಗ್ರಾಹಕರು, ಹೋಟೆಲ್ ಮಾಲೀಕರು ಕಂಗಾಲು
ಯುದ್ಧದ ಎಫೆಕ್ಟ್ನಿಂದಾಗಿ ಗ್ಯಾಸ್ ಸಿಲಿಂಡರ್ ಅಭಾವ ಹೆಚ್ಚಾಗಿತ್ತು. ಗ್ಯಾಸ್ ಸಿಗದೇ ಅದೆಷ್ಟೋ ಹೋಟೆಲ್ ಗಳು, ಟೀ ಅಂಗಡಿಗಳು ಬಂದ್ ಆಗಿದ್ದವು. ಇದೀಗ ಸಿಲಿಂಡರ್ ದರವನ್ನೇ ಏರಿಕೆ ಮಾಡಲಾಗಿದ್ದು, ಗ್ರಾಹಕರು ಹಾಗೂ ಹೋಟೆಲ್ ಮಾಲೀಕರನ್ನು ಕಂಗಾಲಾಗುವಂತೆ ಮಾಡಿದೆ.
READ THIS : ಧುರಂಧರ್ ಚಿತ್ರತಂಡಕ್ಕೆ ಹೈಕೋರ್ಟ್ ಬಿಗ್ ರಿಲೀಫ್

ಏಕಾಏಕಿ 993 ರೂ. ಹೆಚ್ಚಳ
ವಾಣಿಜ್ಯ ಸಿಲಿಂಡರ್ ದರದಲ್ಲಿ ಭಾರೀ ಏರಿಕೆಯಾಗಿದ್ದು, ಇಂದಿನಿಂದ ಬರೋಬ್ಬರಿ 993 ರೂಪಾಯಿ ಹೆಚ್ಚಳ ಮಾಡಲಾಗಿದೆ. ಆದ್ರೆ ಗೃಹ ಬಳಕೆಯ ಸಿಲಿಂಡರ್ ದರದಲ್ಲಿ ಯಾವುದೇ ಏರಿಕೆ ಮಾಡಲಾಗಿಲ್ಲ. ಜಾಗತಿಕ ಇಂಧನ ಬೆಲೆಗಳ ಏರಿಕೆ ಮತ್ತು ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆಯಿಂದಾಗಿ ಸಿಲಿಡಂರ್ ದರ ಪರಿಷ್ಕರಣೆ ಮಾಡಲಾಗಿದೆ. ಬೆಂಗಳೂರಿನಲ್ಲಿ 19 ಕೆ.ಜಿ ಸಿಲಿಂಡರ್ಗೆ 3 ಸಾವಿರದ 152 ರೂಪಾಯಿ ಆಗಿದ್ರೆ, 14.2 ಕೆ.ಜಿಯ ಗೃಹ ಬಳಕೆಯ ಸಿಲಿಂಡರ್ ದರ 915.50 ರೂಪಾಯಿ ಆಗಿದೆ.

LPG – ತಿಂಡಿಗಳ ಬೆಲೆಯಲ್ಲಿ ಭಾರೀ ಏರಿಕೆ ಆಗುವ ಸಾಧ್ಯತೆ
ಇನ್ನು ವಾಣಿಜ್ಯ ಸಿಲಿಂಡರ್ ದರ ಏರಿಕೆಯಿಂದಾಗಿ ಹೋಟೆಲ್, ರೆಸ್ಟೋರೆಂಟ್ ಮತ್ತು ಸಣ್ಣ ವ್ಯಾಪಾರಿಗಳ ಮೇಲೆ ತುಂಬಾ ಪರಿಣಾಮ ಬೀರಲಿದೆ. ಇನ್ಮುಂದೆ ಹೋಟೆಲ್ಗಳಲ್ಲಿ ಕಾಫಿ, ಟೀ, ತಿಂಡಿಗಳ ಬೆಲೆಯಲ್ಲಿ ಭಾರೀ ಏರಿಕೆ ಆಗುವ ಸಾಧ್ಯತೆ ಹೆಚ್ಚಾಗಿದ್ದು, ಪರೋಕ್ಷವಾಗಿ ಜನರ ಮೇಲೆ ಹೊರೆ ಏಳೆದಂತಾಗಿದೆ.
MUST WATCH : ಹಸು ಮೈ ತೊಳೆಯಲು ಹೋಗಿ ದುರಂತ..! – ನೀರಿಗೆ ಬಿದ್ದು ರೈತನ ದಾರುಣ ಸಾ*




