Murder : ಕ್ಷುಲ್ಲಕ ವಿಚಾರಕ್ಕೆ ಅಣ್ಣ- ತಮ್ಮನ ನಡುವೆ ಗಲಾಟೆ : ಮಾತಿಗೆ ಮಾತು ಬೆಳೆದು ಹೊಡೆದಾಡಿಕೊಂಡ ಅಣ್ಣ- ತಮ್ಮ

ಕ್ಷುಲ್ಲಕ ವಿಚಾರಕ್ಕೆ ಒಡಹುಟ್ಟಿದವರೇ ಗಲಾಟೆ ಮಾಡಿಕೊಂಡು ಕೊನೆಗೆ Murder ಮಾಡುವ ಹಂತಕ್ಕೂ ಹೋಗುತ್ತಿದ್ದಾರೆ. ಇದೀಗ ತುಮಕೂರು ಜಿಲ್ಲೆಯಲ್ಲಿ ಇಂತಹ ಘಟನೆ ನಡೆದಿದ್ದು, ಅಣ್ಣ ತಮ್ಮನ ನಡುವೆ ಕ್ಷುಲ್ಲಕ ವಿಚಾರಕ್ಕೆ ಆರಂಭವಾದ ಗಲಾಟೆ, ಕೊಲೆಯಲ್ಲಿ ಅಂತ್ಯವಾಗಿದೆ.
ಅಣ್ಣ- ತಮ್ಮನ ನಡುವೆ ಗಲಾಟೆ ಕೊಲೆಯಲ್ಲಿ ಅಂತ್ಯ
ಹೌದು.. ಜಿಲ್ಲೆಯ ಮಧುಗಿರಿ ತಾಲೂಕಿನ ಪುರವರ ಹೋಬಳಿಯ ನಿಟ್ರಹಳ್ಳಿ ಗ್ರಾಮದ ಅಣ್ಣ ನರಸಿಂಹಮೂರ್ತಿ ಹಾಗೂ ತಮ್ಮ ಗಂಗರಾಜು,ಕೂಲಿ ಕೆಲಸ ಮಾಡಿಕೊಂಡು ಜೀವನ ಮಾಡ್ತಾ ಇದ್ರು. ಕೆಲ ದಿನಗಳ ಹಿಂದೆಯಷ್ಟೇ ಸಹೋದರ ಗಂಗರಾಜುಗೆ ಅಪಘಾತವಾಗಿ ಒಂದು ಕಾಲು ಸ್ವಾಧೀನ ಕಳೆದುಕೊಂಡಿತ್ತು. ಆದ್ರು ಹೇಗೋ ಕೂಲಿ ಕೆಲಸ ಮಾಡಿಕೊಂಡು ಜೀವನ ಮಾಡ್ತಾ ಇದ್ದ. ಈ ಮಧ್ಯೆ ಅಣ್ಣ- ತಮ್ಮನ ಮದ್ಯೆ ಆಗಾಗ ಗಲಾಟೆ ನಡೆಯುತ್ತಲೇ ಇತ್ತು. ಅಣ್ಣ ನರಸಿಂಹಮೂರ್ತಿ ನಿನ್ನೆ ಎಣ್ಣೆ ಏಟಲ್ಲಿ ತಮ್ಮ ಗಂಗಾರಾಜು ಜೊತೆ ಗಲಾಟೆ ಮಾಡಿಕೊಂಡಿದ್ದ. ಗಲಾಟೆ ಅತಿರೇಕಕ್ಕೆ ತಿರುಗಿದೆ. ಈ ವೇಳೇ ನರಸಿಂಹಮೂರ್ತಿ ತನ್ನ ತಮ್ಮ ಗಂಗರಾಜು ಮೇಲೆ ಕಲ್ಲಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರ ಪರಿಣಾಮ ಗಂಭೀರವಾಗಿ ಗಾಯಗೊಂಡ ಗಂಗರಾಜು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
READ THIS : ರಾಜ್ಯದ ಅಗ್ನಿಶಾಮಕ ದಳದಲ್ಲಿ ಖಾಲಿ ಇರುವ 1,828 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಸೈಕೋ ಥರಾ ಆಡ್ತಾ ಇರ್ತಾನೆ
ಇನ್ನು ಅಣ್ಣ ನರಸಿಂಹ ಮೂರ್ತಿ ಕುಡಿದ ಬಳಿಕ ತಾನು ಮನುಷ್ಯನಾಗಿರುವುದಿಲ್ಲ. ಸೈಕೋ ಥರಾ ಆಡ್ತಾ ಇರ್ತಾನೆ. ಅವನು ಇಡೀ ಊರಿನವರ ಜೊತೆ ಗಲಾಟೆ ಮಾಡಿಕೊಳ್ಳುತ್ತಿದ್ದ. ಇದೀಗ ತಮ್ಮನ ಜೊತೆ ಗಲಾಟೆ ಮಾಡಿಕೊಂಡು ಸಾಯಿಸಿದ್ದಾನೆ ಎಂದು ಸಂಬಂಧಿಕರು ಆಕ್ರೋಶ ಹೊರಹಾಕಿದ್ರು.
ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ
ಇನ್ನು ಘಟನಾ ಸ್ಥಳಕ್ಕೆ ಎಸ್ಪಿ ಅಶೋಕ್ ಕೆ.ವಿ., ಡಿವೈಎಸ್ಪಿ ಮಂಜುನಾಥ್, ಸಿಪಿಐ ಹನುಮಂತರಾಯಪ್ಪ ಹಾಗೂ ಪಿಎಸ್ಐ ರಾಜೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ತುಮಕೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಣ್ಣ ನರಸಿಂಹಮೂರ್ತಿಯನ್ನು ಅರೆಸ್ಟ್ ಮಾಡಿದ್ದು, ತನಿಖೆ ಮುಂದುವರೆಸಿದ್ದಾರೆ.

MUST WATCH : ಮತ್ತೆ ಹುಚ್ಚಾಟ ಮಾಡಿದ RAJATH – CONTROVERSY VIDEO ಬಗ್ಗೆ ಏನಂದ್ರು..?




