Job Alert : ಕರ್ನಾಟಕ ರಾಜ್ಯ ಅಗ್ನಿಶಾಮಕ ಇಲಾಖೆ 1828 ಬೃಹತ್ ನೇಮಕಾತಿ

ನಾಡಿನ ಜನತೆಯ ಜೀವ ಮತ್ತು ಆಸ್ತಿಪಾಸ್ತಿಯ ರಕ್ಷಣೆಯಲ್ಲಿ ಸದಾ ಸನ್ನದ್ಧವಾಗಿರುವ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯು ನಿರುದ್ಯೋಗಿ ಯುವಜನತೆಗೆ ಸಿಹಿಸುದ್ದಿ ನೀಡಿದೆ. ಇಲಾಖೆಯಲ್ಲಿ ಖಾಲಿ ಇರುವ ವಿವಿಧ ವೃಂದದ ಒಟ್ಟು 1,828 ಹುದ್ದೆಗಳ ಭರ್ತಿಗೆ ಅಧಿಕೃತ ಚಾಲನೆ ನೀಡಲಾಗಿದ್ದು, ಸೇವೆ ಮತ್ತು ಸಾಹಸದ ಮನೋಭಾವವುಳ್ಳ ಯುವಕರಿಗೆ ಇದು ಅತ್ಯುತ್ತಮ ಅವಕಾಶವಾಗಿದೆ.
ಯಾವ ಯಾವ ಹುದ್ದೆಗಳು ಲಭ್ಯ?
ಈ ನೇಮಕಾತಿಯಲ್ಲಿ ಪ್ರಮುಖವಾಗಿ ಈ ಮೂರು ಹುದ್ದೆಗಳು ಲಭ್ಯವಿದ್ದು,
ಅಗ್ನಿಶಾಮಕ (Fireman),
ಅಗ್ನಿಶಾಮಕ ಚಾಲಕ (Fireman Driver),
ಮತ್ತು ಚಾಲಕ ಮೆಕ್ಯಾನಿಕ್ (Driver Mechanic) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾರ್ಹತೆ
ಅಗ್ನಿಶಾಮಕ ಹುದ್ದೆಗೆ ಅಭ್ಯರ್ಥಿಗಳು ಎಸ್ಎಸ್ಎಲ್ಸಿ ಉತ್ತೀರ್ಣರಾಗಿರಬೇಕು. ಚಾಲಕ ಹುದ್ದೆಗಳಿಗೆ ಎಸ್ಎಸ್ಎಲ್ಸಿ ಜೊತೆಗೆ ಭಾರೀ ವಾಹನ ಚಾಲನಾ ಪರವಾನಗಿ (HTV License) ಮತ್ತು ಕನಿಷ್ಠ ಎರಡು ವರ್ಷಗಳ ಅನುಭವ ಕಡ್ಡಾಯವಾಗಿದೆ.
READ THIS : ಪೆಟ್ರೋಲ್ ಬಾಂಬ್ ಸ್ಫೋಟಿಸಿ ರೀಲ್ಸ್ – ಸೆಲ್ಫ್ ವಿಡಿಯೋ ಮಾಡಿ ಸ್ಪಷ್ಟನೆ ಕೊಟ್ಟ ರಜತ್
ಆಯ್ಕೆ ವಿಧಾನ
ಆಯ್ಕೆ ಪ್ರಕ್ರಿಯೆ ಮೂರು ಹಂತಗಳಲ್ಲಿ ನಡೆಯಲಿದೆ.
ಮೊದಲು ದೈಹಿಕ ಅಳತೆ ಪರೀಕ್ಷೆ (PST),
ನಂತರ ದೈಹಿಕ ಸಾಮರ್ಥ್ಯ ಪರೀಕ್ಷೆ (PET),
ಕೊನೆಯಲ್ಲಿ ಲಿಖಿತ ಪರೀಕ್ಷೆ.
ಚಾಲಕ ಹುದ್ದೆಗಳಿಗೆ ಹೆಚ್ಚುವರಿಯಾಗಿ ಚಾಲನಾ ಕೌಶಲ್ಯ ಪರೀಕ್ಷೆಯೂ ಇರಲಿದೆ.
ಅರ್ಜಿ ಸಲ್ಲಿಸುವುದೇಗೆ..?
ಆಸಕ್ತ ಅಭ್ಯರ್ಥಿಗಳು ಕರ್ನಾಟಕ ಸರ್ಕಾರದ ಅಧಿಕೃತ ವೆಬ್ಸೈಟ್ KSFES Official Website ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು. ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುವುದು ಕಡ್ಡಾಯ.
ಕೊನೆಯ ದಿನಾಂಕ
ಇನ್ನು ಅರ್ಜಿ ಸಲ್ಲಿಸಲು ಏಪ್ರಿಲ್30 ಕೊನೆಯ ದಿನಾಂಕವಾಗಿದ್ದು, ಕೊನೆಯ ಕ್ಷಣದ ತೊಂದರೆಗಳನ್ನು ತಪ್ಪಿಸಲು ಇಂದೇ ಅರ್ಜಿ ಸಲ್ಲಿಸುವುದು ಒಳಿತು.
ವೇತನ ಮತ್ತು ಭವಿಷ್ಯ
ಆಯ್ಕೆಯಾದ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರದ ನಿಯಮಾನುಸಾರ ಆಕರ್ಷಕ ವೇತನ ಮತ್ತು ಭತ್ಯೆಗಳು ದೊರೆಯಲಿವೆ. ತರಬೇತಿ ಅವಧಿಯಲ್ಲಿಯೂ ಸ್ಟೈಫಂಡ್ ನೀಡಲಾಗುತ್ತದೆ.
MUST WATCH : ಮತ್ತೆ ವಿವಾದದ ಸುಳಿಯಲ್ಲಿ RAJATH – ಪೆಟ್ರೋಲ್ ಬಾಂಬ್ ಸ್ಫೋಟಿಸಿ REELS..!




