ಮತ್ತೆ ವಿವಾದದ ಸುಳಿಯಲ್ಲಿ Rajath – ಪೆಟ್ರೋಲ್ ಬಾಂಬ್ ಸ್ಫೋಟಿಸಿ ರೀಲ್ಸ್..!

ದೊಡ್ಮನೆ ಆನೆ ವಿನಯ್ ಗೌಡ ಜೊತೆ ಲಾಂಗ್ ಹಿಡಿದು ರೀಲ್ಸ್ ಮಾಡಿ ಸಮಸ್ಯೆ ತಂದುಕೊಂಡಿದ್ದ ಬಿಗ್ಬಾಸ್ ಮಾಜಿ ಸ್ಪರ್ಧಿ ರಜತ್ ಇದೀಗ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ನಡು ರಸ್ತೆಯಲ್ಲೇ ರಜತ್ ಪೆಟ್ರೋಲ್ ಬಾಂಬ್ ಮಾದರಿ ಸ್ಫೋಟಿಸಿ ರೀಲ್ಸ್ ಶೂಟ್ ಮಾಡಿದ್ದು, ಮತ್ತೆ ಸಮಸ್ಯೆಗೆ ಸಿಲುಕಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್
ಹೌದು, ರಜತ್ ಪ್ಲಾಸ್ಟಿಕ್ ಕವರ್ ಒಂದರಲ್ಲಿ ಪೆಟ್ರೋಲ್ ತುಂಬಿಸಿ ಅದನ್ನು ರಸ್ತೆಯ ಮೇಲೆ ಬಾಂಬ್ ಮಾದರಿಯಲ್ಲಿ ಸ್ಪೋಟಿಸಿದ್ದಾರೆ. ಯಾವುದೇ ಮುಂಜಾಗ್ರತೆ ಕ್ರಮಗಳಿಲ್ಲದೇ ಸಾರ್ವಜನಿಕ ಪ್ರದೇಶದಲ್ಲಿ ಇಂತಹ ಅಪಾಯಕಾರಿ ಪ್ರಯೋಗ ಮಾಡಿ ಅದನ್ನು ವಿಡಿಯೋ ಚಿತ್ರೀಕರಿಸಿದ್ದಾರೆ. ಸದ್ಯ ಈ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಖಂಡನೆ ವ್ಯಕ್ತವಾಗಿದೆ.
READ THIS : DC ವಿರುದ್ಧದ ಗೆಲುವಿನೊಂದಿಗೆ ಪ್ಲೇಆಫ್ಗೆ ಹತ್ತಿರವಾದ RCB ಇನ್ನೆಷ್ಟು ಪಂದ್ಯ ಗೆಲ್ಲಬೇಕು?

ಈ ರೀಲ್ಸ್ ಶೂಟ್ ನಡೆದಿದ್ದೆಲ್ಲಿ..?
ಇನ್ನು ಈ ರೀಲ್ಸ್ ಶೂಟ್ ನಡೆದಿದ್ದೆಲ್ಲಿ? ಅನ್ನೋ ಮಾಹಿತಿ ಸದ್ಯ ರಿವೀಲ್ ಆಗಿಲ್ಲ.. ಆದ್ರೆ, ಲೈಕ್ಸ್ ಮತ್ತು ವೀವ್ಸ್ಗಾಗಿ ಇಂತಹ ಅಪಾಯಕಾರಿ ಪ್ರಯೋಗಗಳಿಗೆ ಮುಂದಾಗುತ್ತಿರೋದು ಮತ್ತೇ ಚರ್ಚೆಗೆ ಕಾರಣವಾಗಿದ್ದು, ಈ ಘಟನೆ ಸಂಬಂಧಿಸಿದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
ಇದೊಂದು ಪ್ರಮೋಷನ್ ವಿಡಿಯೋ ಅಷ್ಟೆ – Rajath
ಇನ್ನು ಪ್ರಕರಣದ ಕುರಿತು ಸ್ಪಷ್ಟನೆ ನೀಡಿರುವ ರಜತ್ ಕಿಶನ್, ಇದು ಯಾರಿಗೂ ನೋವು ಮಾಡುವ ಉದ್ದೇಶದಿಂದ ಮಾಡಿದ ವಿಡಿಯೋ ಅಲ್ಲ. ಇದೊಂದು ಪ್ರಮೋಷನ್ ವಿಡಿಯೋ ಅಷ್ಟೆ. ಒಬ್ಬ ನಟನಾಗಿ ಅವರು ನನಗೆ ಯಾವ ರೀತಿ ಆಕ್ಟ್ ಮಾಡಲು ಹೇಳಿದ್ದರೋ ಹಾಗೇ ಮಾಡಿದ್ದೇನೆ. ನಟನೆಯನ್ನು ಹೊರತುಪಡಿಸಿದರೆ ಬೇರೆ ಯಾವುದೇ ಉದ್ದೇಶವಿರಲಿಲ್ಲ ಎಂದು ಹೇಳಿದ್ದಾರೆ.

MUST WATCH : MAY 15ಕ್ಕೆ DKS CM ಆಗೋದು FIX – MINISTER IKBAL HUSSAIN ಸ್ಪೋಟಕ ಹೇಳಿಕೆ..!

