Madhugiri : ವಿದ್ಯುತ್ ತಂತಿ ಸ್ಪರ್ಷಿಸಿ ಕೂಲಿ ಕಾರ್ಮಿಕ ಸಾವು.

ಜಿಂಕೆ ಹಾವಳಿ ತಪ್ಪಿಸಲು ಹೊಲದ ಸುತ್ತ ಅಳವಡಿಸಿದ್ದ ಮುಳ್ಳು ತಂತಿ ಮುಟ್ಟಿದ್ದರಿಂದ ವಿದ್ಯುತ್ ಸ್ಪರ್ಷಿಸಿ ಕೂಲಿ ಕಾರ್ಮಿಕನೋರ್ವ ಸಾವನ್ನಪ್ಪಿರೋ ಘಟನೆ Madhugiri ತಾಲೂಕಿನ ಐ.ಡಿ ಹಳ್ಳಿ ಹೋಬಳಿಯ ಮಾಲಗೊಂಡನಹಳ್ಳಿಯಲ್ಲಿ ನಡೆದಿದೆ. ಮಾಲಗೊಂಡನಹಳ್ಳಿ ಗ್ರಾಮದ ಕೂಲಿ ಕಾರ್ಮಿಕ ಶ್ರೀನಿವಾಸ್ ಮೃತ ದುರ್ದೈವಿಯಾಗಿದ್ದಾನೆ.
ಇದನ್ನು ನೋಡಿ : RCBಗೆ ಮೋಸ ಮಾಡಿದ ಎಲೀಸ್ ಪೆರ್ರಿ! ಪೆರ್ರಿ, ಪೆರ್ರಿ ಬೇರೆಡೆಗೆ ಪೇರಿ..!
Madhugiriಯ ಮಾಲಗೊಂಡನಹಳ್ಳಿಯಲ್ಲಿ ಘಟನೆ
ಕೊಡಿಗೇನಹಳ್ಳಿ ಸುತ್ತಾಮುತ್ತ ಹಲವು ದಿನಗಳಿಂದ ಜಿಂಕೆ ಹಾವಳಿ ಹೆಚ್ಚಾಗಿದ್ದು, ಜಿಂಕೆ ಹಾವಳಿಯನ್ನು ತಪ್ಪಿಸಲು ಪುಲಮಾಚಿಯ ಸರ್ವೇ ನಂ 13/1 ರಲ್ಲಿ ಇರೋ ತಿಮ್ಮಕ್ಕ ಎಂಬುವವರ ಜಮೀನಿನಲ್ಲಿ ಬೆಳೆದಿದ್ದು ಕಡಲೆ ಕಾಯಿ ರಕ್ಷಣೆಗೆ ಮುಳ್ಳು ತಂತಿ ಬೇಲಿ ಅಳವಡಿಸಲಾಗಿತ್ತು.
ಸದರಿ ಜಮೀನಿನಲ್ಲಿ ಕೂಲಿ ಕೆಲಸ ಮಾಡುತಿದ್ದ ವೇಳೆ ಬಲಗೈಗೆ ವಿದ್ಯುತ್ ಸ್ಪರ್ಶಿಸಿದ ಪರಿಣಾಮ ಶ್ರೀನಿವಾಸ್ ಸ್ಥಳದಲ್ಲೇ ಸಾವನಪ್ಪಿದ್ದಾನೆ. ಘಟನೆ ನಡೆದ ಬಳಿಕ ಮೃತ ದೇಹವನನ್ನು ಪಕ್ಕದ ಜಮೀನಿಗೆ ತಳ್ಳಲಾಗಿದೆ ಕುಟುಂಬಸ್ಥರು ಆರೋಪಿಸಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ – Madhugiri
ಸದ್ಯ ಈ ಸಂಬಂಧ ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪಿಎಸೈ ರವೀಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.
ಇದನ್ನು ಓದಿ : ಗಣರಾಜ್ಯೋತ್ಸವದ ದಿನವೇ ತುಮಕೂರಿನಲ್ಲಿ ಭೀಕರ Accident




