Madhugiri : ಕೌಟುಂಬಿಕ ಕಲಹಕ್ಕೆ ಗೃಹಿಣಿ ಆತ್ಮಹತ್ಯೆ.

ಕೌಟುಂಬಿಕ ಕಲಹ ಹಿನ್ನೆಲೆ ಮಹಿಳೆಯೊಬ್ಬಳು ನೇಣಿಗೆ ಶರಣಾಗಿರೋ ಘಟನೆ Madhugiri ತಾಲೂಕಿನ ಕೊಡಿಗೇನಹಳ್ಳಿಯಲ್ಲಿ ನಡೆದಿದೆ. ಹೌದು ಸಾಂಸಾರಿಕ ಕಲಹಕ್ಕೆ ಬೇಸತ್ತ ಗೃಹಿಣಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ.
ಕೌಟುಂಬಿಕ ಕಲಹಕ್ಕೆ ಬೇಸತ್ತು ಸೂಸೈಡ್ – Madhugiri
ಪವಿತ್ರಾ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿಯಾಗಿದ್ದಾಳೆ. ಗೌರಿಬಿದನೂರು ಮೂಲದ ಪವಿತ್ರಾ ಎಂಬುವವರು 16 ವರ್ಷದ ಹಿಂದೆ ಕೊಡಿಗೇನಹಳ್ಳಿಯ ನಾರಾಯಣಪ್ಪ ಎಂಬುವವರ ಜೊತೆ ವಿವಾಹವಾಗಿತ್ತು. ಕೌಟುಂಬಿಕ ಕಲಹಕ್ಕೆ ಬೇಸತ್ತು ಸೂಸೈಡ್ ಮಾಡಿಕೊಂಡಿದ್ದಾಳೆ.
ಇದನ್ನು ಓದಿ : 100 ಗ್ರಾಂ ನುಗ್ಗೆ ಸೊಪ್ಪಿನಲ್ಲಿದೆ ನೂರೆಂಟು ಬೆನಿಫಿಟ್!
ಗಂಡ- ಹೆಂಡ್ತಿ ಜಗಳ, ಇಬ್ಬರು ಮಕ್ಕಳು ಅನಾಥ
ನಾರಾಯಣಪ್ಪ ಹಾಗೂ ಪವಿತ್ರಾ ದಂಪತಿಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಗು ಇದ್ದು, ಸಂಸಾರದಲ್ಲಿ ಆಗ್ಗಾಗ ಗಲಾಟೆ ಉಂಟಾಗ್ತಾ ಇತ್ತು. ಈ ಬಗ್ಗೆ ಸಾಕಷ್ಟು ಬಾರಿ ನ್ಯಾಯ ಪಂಚಾಯ್ತಿಯನ್ನು ಕೂಡ ಮಾಡಲಾಗಿತ್ತು. ರಾಜಿ ಪಂಚಾಯ್ತಿ ಮಾಡಿದ್ರು ಕೂಡ ಗಂಡ- ಹೆಂಡ್ತಿ ಜಗಳ ಮಾತ್ರ ಕಡಿಮೆ ಆಗಿರಲಿಲ್ಲ.
ಸ್ಥಳಕ್ಕೆ ಸಿಪಿಐ ಭೇಟಿ
ಇದ್ರಿಂದ ಮಾನಸಿಕವಾಗಿ ನೊಂದಿದ್ದ ಗೃಹಿಣಿ ಮಗಳು ಸ್ನಾನಕ್ಕೆ ತೆರಳಿದ್ದ ವೇಳೆ ನೇಣಿಗೆ ಶರಣಾಗದ್ದಾಳೆ. ಮೃತ ಮಹಿಳೆಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮಗುವಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಸಿಪಿಐ ಹನುಮಂತ ರಾಯಪ್ಪ ಎಎಸ್ಐ ರಂಗನಾಥ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಇದನ್ನು ನೋಡಿ : TUMAKURU GILLI FANS | ಎಲ್ಲೆಲ್ಲೂ GILLIದೇ ಹವಾ..! – FULL JOSH | FANS IN CRAZE




