Madhugiri : ಪೊಲೀಸ್ ಕಟ್ಟಡ ನಿರ್ಮಾಣದ ಕಾರ್ಮಿಕ ಸಾವು – ದಿಢೀರ್ ಕುಸಿದು ಬಿದ್ದು ಸಾವನ್ನಪ್ಪಿದ್ದು ಯಾಕೆ?

Madhugiri ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯಲ್ಲಿ ನೂತನ ಪೊಲೀಸ್ ಠಾಣೆಯ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ಕಟ್ಟಡ ಕಾಮಗಾರಿಗಾಗಿ ಬಂದಿದ್ದ ಬಿಹಾರ ಮೂಲದ ವ್ಯಕ್ತಿ ಸಾವನ್ನಪ್ಪಿದ್ದಾನೆ.
ಮದ್ಯಪಾನ ಮಾಡಿ ಸುತ್ತಾಡುತ್ತಿದ್ದ ವ್ಯಕ್ತಿ ಕುಸಿದು ಬಿದ್ದು ಸಾವು
ಕಳೆದ ನಾಲ್ಕು ದಿನಗಳ ಹಿಂದೆಯಷ್ಟೇ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯ ಕಾಮಗಾರಿಗೆಂದು ಬಂದಿದ್ದು, ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಮದ್ಯಪಾನ ಮಾಡಿಕೊಂಡು ಸುತ್ತಾಡುತ್ತಿದ್ದ.ಈ ವೇಳೆ ಕೊಡಿಗೇನಹಳ್ಳಿಯ ಜಪಾನ್ ಕಾಂಡಿಮೆಂಡ್ಸ್ ಬಳಿ ಬೆಳಗ್ಗೆ ಸುಮಾರು 11 ಗಂಟೆ ಸುಮಾರಿಗೆ ಬಿಹಾರ ಮೂಲದ ವಾಲ್ಮಿಕಿ ಸಹನ್ ಎಂಬಾತ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿದ್ದಾನೆ.
ಇದನ್ನು ನೋಡಿ : ಹೆಚ್.ಡಿ.ಕೆ ಬಗ್ಗೆ ಅವಹೇಳನಕಾರಿ ಹೇಳಿಕೆ ಡಿ.ಕೆ.ಸುರೇಶ್ ಗೆ ಜೆಡಿಎಸ್ ಖಡಕ್ ಎಚ್ಚರಿಕೆ
ಮೃತ ಕಾರ್ಮಿಕ ಯಾರು..?
ಇನ್ನು ಗುತ್ತಿಗೆದಾರ ಮಾಹಿತಿ ಇಲ್ಲದೆ ಕಟ್ಟಡ ಕೆಲಸಕ್ಕೆ ಕಾರ್ಮಿಕರನ್ನು ಕರೆದುಕೊಂಡಿದ್ದ ಪರಿಣಾಮ, ಮೃತ ಕಾರ್ಮಿಕ ಯಾರು..? ಆತನ ವಿಳಾಸ ಹುಡುಕಲು ಪೊಲೀಸರು ಪರದಾಡಿದ್ರು. ಬಳಿಕ ಮೃತ ಕಾರ್ಮಿಕ ಬಿಹಾರ ಮೂಲದ ಪಲ್ಯ ಜಿಲ್ಲೆಯ ವಾಲ್ಮೀಕಿ ಸಹನ್ ಎಂದು ಗುರುತಿಸಲಾಗಿತ್ತು.
ಪ್ರಕರಣ ದಾಖಲು
ಸ್ಥಳಕ್ಕೆ ಸಿಪಿಐ ಹನುಮಂತರಾಯಪ್ಪ, ಎಎಸ್ಐ ರಂಗನಾಥ್ ಭೇಟಿ ನೀಡಿ, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಮೃತ ಕಾರ್ಮಿಕನ ಶವವನ್ನು ಮರಣೋತ್ತರ ಪರೀಕ್ಷೆಗೆ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಪರೀಕ್ಷೆ ಬಳಿಕ ಕಾರ್ಮಿಕನ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ.
ಇದನ್ನು ಓದಿ : Metro ಪ್ರಯಾಣಿಕರಿಗೆ ಗುಡ್ನ್ಯೂಸ್ – ಹಳದಿ ಮಾರ್ಗಕ್ಕೆ ಮತ್ತೊಂದು ರೈಲು




