ಹಳದಿ ಮಾರ್ಗದ Metro ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್ ಸಿಗುತ್ತಿದೆ.

ಬೆಂಗಳೂರು ನಗರದ ಜನತೆಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಯೆಲ್ಲೋ ಮಾರ್ಗದಲ್ಲಿ ಸಂಚರಿಸಲಿರುವ 8ನೇ ಡ್ರೈವರ್ಲೆಸ್ ಮೆಟ್ರೋ ರೈಲು ನಾಳೆ (ಜನವರಿ 19) ರಾತ್ರಿ ಬೆಂಗಳೂರಿಗೆ ತಲುಪಲಿದೆ. ಈ ರೈಲು ಸೇವೆ ಆರಂಭವಾದ ಬಳಿಕ ಯೆಲ್ಲೋ ಮಾರ್ಗದಲ್ಲಿ ಮೆಟ್ರೋ ಸಂಚಾರ ಇನ್ನಷ್ಟು ಸುಗಮವಾಗಲಿದೆ.
ಪ್ರಯಾಣಿಕರಿಗೆ ಹೆಚ್ಚು ಅನುಕೂಲ
ಆಗಸ್ಟ್ 10ರಂದು ಬೆಂಗಳೂರು ಮೆಟ್ರೋ ಯೆಲ್ಲೋ ಮಾರ್ಗದಲ್ಲಿ ರೈಲು ಸಂಚಾರವನ್ನು ಉದ್ಘಾಟಿಸಲಾಗಿತ್ತು. ಇದೀಗ ಮತ್ತೊಂದು ಮಹತ್ವದ ಬೆಳವಣಿಗೆಯಾಗಿ, 8ನೇ ರೈಲು ನಾಳೆ ರಾತ್ರಿ ಹೆಬ್ಬಗೋಡಿ ಡಿಪೋವನ್ನು ತಲುಪಲಿದೆ. ಇದರಿಂದ ಈ ಮಾರ್ಗದಲ್ಲಿ ರೈಲುಗಳ ಸಂಖ್ಯೆ ಹೆಚ್ಚಾಗಲಿದ್ದು, ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ.
ಇದನ್ನು ಓದಿ : ಗಿಲ್ಲಿ ಗೆಲ್ಲೋದು ಫಿಕ್ಸ್ – ಬಿಗ್ ಬಾಸ್ 11 ವಿನ್ನರ್ ಹನುಮಂತು ಭವಿಷ್ಯ

10 ನಿಮಿಷಕ್ಕೊಮ್ಮೆ ಸಂಚಾರ
ಸದ್ಯ ಯೆಲ್ಲೋ ಮಾರ್ಗದಲ್ಲಿ Metro ರೈಲುಗಳು ಪ್ರತಿ 10 ನಿಮಿಷಕ್ಕೊಮ್ಮೆ ಸಂಚರಿಸುತ್ತಿವೆ. 8ನೇ ರೈಲು ಸಂಚಾರ ಆರಂಭವಾದ ನಂತರ ರೈಲುಗಳ ಮಧ್ಯದ ಸಮಯದಲ್ಲಿ ಕಡಿತವಾಗುವ ಸಾಧ್ಯತೆ ಇದೆ. ಇದರಿಂದ ಪೀಕ್ ಅವಧಿಯಲ್ಲಿ ಉಂಟಾಗುವ ಸಮಸ್ಯೆಗೂ ಪರಿಹಾರ ಸಿಗಲಿದೆ.
ಪರೀಕ್ಷಾ ಸಂಚಾರ ಮತ್ತು ತಾಂತ್ರಿಕ ತಪಾಸಣೆ
ಹೆಬ್ಬಗೋಡಿ ಡಿಪೋ ತಲುಪಿದ ನಂತರ ರೈಲಿಗೆ ಅಗತ್ಯವಿರುವ ಪರೀಕ್ಷಾ ಸಂಚಾರ ಮತ್ತು ತಾಂತ್ರಿಕ ತಪಾಸಣೆ ನಡೆಸಲಾಗುತ್ತದೆ. ಎಲ್ಲಾ ಪ್ರಕ್ರಿಯೆಗಳು ಯಶಸ್ವಿಯಾಗಿ ಪೂರ್ಣಗೊಂಡ ಬಳಿಕ, BMRCL ವಾಣಿಜ್ಯ ಸಂಚಾರ ಆರಂಭಿಸುವ ನಿರೀಕ್ಷೆಯಿದೆ.

ಇದನ್ನು ನೋಡಿ : ವಾಮಾಚಾರ ಮಾಡಿದ ಕಿಡಿಗೇಡಿಗಳು ಮಡಿಕೆ, ಕುಡಿಕೆ ಕಂಡು ಬೆಚ್ಚಿಬಿದ್ದ ಕುಟುಂಬ




