Bengaluru : ತಾಯಿಗೆ ಕೊಟ್ಟ ನಿವೇಶನ ಬೇರೊಬ್ಬನಿಂದ ದುರ್ಬಳಕೆ – ಪ್ರಶ್ನಿಸಿದ್ದಕ್ಕೆ ವ್ಯಕ್ತಿ ಮೇಲೆ ದಂಪತಿಯಿಂದ ಮಾರಾಮಾರಿ.!

ತಾಯಿಗೆ ನೀಡಲಾಗಿದ್ದ ನಿವೇಶನವನ್ನು ಬೇರೋಬ್ಬರು ಬಳಸುತ್ತಿರುವ ವಿಚಾರವನ್ನ ಪ್ರಶ್ನಿಸಿದ್ದಕ್ಕೆ ವ್ಯಕ್ತಿಯೋರ್ವನಿಗೆ ದಂಪತಿ ದೊಣ್ಣೆಯಿಂದ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಕೆ.ಆರ್. ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮನಬಂದಂತೆ ದೊಣ್ಣೆಯಿಂದ ಹಲ್ಲೆ
ಅರಿಶಿನ ಕುಂಕುಮಕ್ಕೆಂದು ತಾಯಿಗೆ ನೀಡಲಾಗಿದ್ದ ನಿವೇಶನವನ್ನು ಇನ್ನೊಬ್ಬರು ಬಳಕೆ ಮಾಡುತ್ತಿದ್ದರು. ಈ ಕುರಿತು ನಿವೇಶನ ಖಾಲಿ ಮಾಡಿ, ತಾಯಿಯದ್ದನ್ನು ವಾಪಸ್ ನೀಡಿ ಎಂದು ವೆಂಕಟೇಶ್ ಎಂಬವರು ಪ್ರಶ್ನಿಸಿದ್ದಾರೆ. ಇದ್ರಿಂದ ರೊಚ್ಚಿಗೆದ್ದ ಶ್ರೀನಿವಾಸ್ ಮತ್ತು ಸರಸ್ವತಿ ಎಂಬ ದಂಪತಿ ರಸ್ತೆಯಲ್ಲೇ ವೆಂಕಟೇಶ್ ಮೇಲೆ ಕಾಲಿನಿಂದ ಒದ್ದು, ಮನಬಂದಂತೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ.
READ THIS : ತುಮಕೂರಿನ ಎಂ.ಜಿ ಸ್ಟೇಡಿಯಂ ಶೌಚಾಲಯದಲ್ಲಿ ಸೂಜಿ, ಸಿರಂಜ್ ಪತ್ತೆ..?

Bengaluru – ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಇನ್ನು ಗಾಯಗೊಂಡ ವೆಂಕಟೇಶ್ ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದ್ದು, ಪ್ರಕರಣ ಸಂಬಂಧ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
MUST WATCH : ತುಮಕೂರಿನಲ್ಲೂ ಶುರುವಾಗುತ್ತಾ ರಾಮಮಂದಿರ ವಿವಾದ- ಜಿಲ್ಲಾಡಳಿತ ಮಾಡಿದ ಯಡವಟ್ಟು ಆದ್ರು ಏನು..?




