Hubballi ಯ ಉದಯನಗರದಲ್ಲಿ ಪ್ರೀ ಫೈರ್ ಗೇಮ್ ಆಡಲು ಮೊಬೈಲ್ ಕೊಡದಿದ್ದ ಕಾರಣ 14 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ನಡೆದಿದೆ.

Hubballi : ವಿಡಿಯೋ ಗೇಮ್ ಆಡಲು ಮೊಬೈಲ್ ಕೊಡದೇ ಇದ್ದಿದ್ದಕ್ಕೆ ಮನನೊಂದ ಬಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಹುಬ್ಬಳ್ಳಿಯ ಉದಯನಗರ ಪ್ರದೇಶದಲ್ಲಿ ನಡೆದಿದೆ. ಈ ಘಟನೆ ಪೋಷಕರು ಮತ್ತು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಮೊಬೈಲ್ನಲ್ಲಿ ಗೇಮ್ಗೆ ಅಡಿಕ್ಟ್ ಆಗಿದ್ದ ಬಾಲಕ
ಮಾಹಿತಿ ಪ್ರಕಾರ, ಉದಯನಗರ ನಿವಾಸಿ ಸಮರ್ಥ (14) ಆತ್ಮಹತ್ಯೆ ಮಾಡಿಕೊಂಡ ಬಾಲಕನಾಗಿದ್ದಾನೆ.
ಅವನು ಮೊಬೈಲ್ನಲ್ಲಿ ಪ್ರೀ ಫೈರ್ (Free Fire) ಗೇಮ್ಗೆ ಹೆಚ್ಚು ಆಕರ್ಷಿತರಾಗಿದ್ದು, ಹೆಚ್ಚಿನ ಸಮಯವನ್ನು ಅದೇ ಗೇಮ್ ಆಡುತ್ತ ಕಳೆಯುತ್ತಿದ್ದನು.
ಇದರಿಂದ, ಅವನ ಗೇಮ್ ಅಭ್ಯಾಸದ ಬಗ್ಗೆ ಪೋಷಕರು ಚಿಂತಿತರಾಗಿದ್ದರು ಎಂದು ತಿಳಿದುಬಂದಿದೆ.
MUST READ : Bengaluru : ಡಿವೈಡರ್ಗೆ ಡಿಕ್ಕಿ ಹೊಡೆದ ಮಾರುತಿ ಇಕೋ ಕಾರು..!!

ತಾಯಿ ಮೊಬೈಲ್ ಕಸಿದುಕೊಂಡ ಹಿನ್ನೆಲೆ ದುರಂತ
ಯಾವಾಗಲೂ ಗೇಮ್ ಆಡುತ್ತಿರುವುದರಿಂದ ಬೇಸತ್ತ ತಾಯಿ, ಅವನಿಂದ ಮೊಬೈಲ್ ಕಸಿದುಕೊಂಡು ಗೇಮ್ ಆಡದಂತೆ ಬುದ್ಧಿವಾದ ಹೇಳಿದ್ದರು.
ಆದರೆ, ತಾಯಿ ಮಾತಿನಿಂದ ಮನನೊಂದ ಬಾಲಕ ಮನೆಯ ಕೋಣೆಗೆ ತೆರಳಿ, ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ.

ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಘಟನೆಯ ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ನಡುವೆ, ಈ ಕುರಿತು ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.
MUST WATCH : ಹಳ್ಳಿಗಳಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ – ಸರ್ಕಾರ ಒಂದು ರೂ. ಅನುದಾನ ಕೊಡ್ತಾ ಇಲ್ಲ




