SSLC ಪರೀಕ್ಷೆ ಪಾಸ್ ಆದ ಖುಷಿಯಲ್ಲಿ ಈಜಲು ಹೋದ ವಿದ್ಯಾರ್ಥಿ ನೀರುಪಾಲು.

ರಾಜ್ಯದಲ್ಲಿ ಈಜಲು ಹೋಗಿ ನೀರುಪಾಲಾಗುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಮೊನ್ನೆಯಷ್ಟೇ ವಿದ್ಯಾರ್ಥಿನಿಯರು ತಲಕಾಡು ಬಳಿ ನೀರುಪಾಲಾದ ಘಟನೆ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಕೋಲಾರದಲ್ಲಿಯೂ SSLC ಪರೀಕ್ಷೆ ಪಾಸ್ ಆದ ಖುಷಿಯಲ್ಲಿದ್ದ ಬಾಲಕನೋರ್ವ ಈಜಲು ಹೋಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಪಾಸ್ ಆದ ಖುಷಿಯಲ್ಲಿ ಈಜಲು ಹೋದ ವಿದ್ಯಾರ್ಥಿ ಸಾವು
ಕಿರಣ್(15) ನೀರಿನಲ್ಲಿ ಮುಳುಗಿ ಮೃತಪಟ್ಟ ಬಾಲಕ. ರಘುಪತಿ ಎಂಬವರ ಪುತ್ರ ಕಿರಣ್, ಇಂದು SSLC ಫಲಿತಾಂಶ ಬಂದ ಖುಷಿಯಲ್ಲಿದ್ದ. 625ಕ್ಕೆ 239 ಅಂಕಗಳನ್ನು ಪಡೆದು ಪಾಸ್ ಆಗಿದ್ದ.
READ THIS : Tumkur ನಲ್ಲಿ ನವಿಲುಗಳ ಸರಣಿ ಸಾವು – ಪಕ್ಷಿಗಳು ಸಾವನ್ನಪ್ಪುತ್ತಿರೋದು ಯಾಕೆ?

ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ
ಪರೀಕ್ಷೆ ಪಾಸಾದೆ ಎಂದು ಸಂತಸಪಟ್ಟಿದ್ದ. ನಂತರ ಈಜಲು ತೆರಳಿದ್ದ ಕಿರಣ್ ಸ್ಮಿಮ್ಮಿಂಗ್ ಬಾರದ ಕಾರಣ ಬಾವಿಯ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

MUST WATCH : ಗಂಡ- ಮಕ್ಕಳಿಗೆ ನಿದ್ದೆ ಮಾತ್ರೆ ಹಾಕಿ ಕಿಲಾಡಿ ಹೆಂಡ್ತಿ ಲವ್ವರ್ ಜೊತೆ ಎಸ್ಕೆಪ್..!




