Job Alert : ಕೃಷಿ ಇಲಾಖೆಯಲ್ಲಿ 890 ಹುದ್ದೆಗಳ ನೇಮಕಾತಿ

ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 890 ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅರ್ಜಿ ಆಹ್ವಾನಿಸಿದೆ.
ಅರ್ಜಿ ಸಲ್ಲಿಸಲು ಮೇ10 ಕೊನೆ ದಿನ
ಕಲ್ಯಾಣ ಕರ್ನಾಟಕ ಮತ್ತು ಇತರ ಮೂಲ ವೃಂದ ಸೇರಿ ಎಲ್ಲರಿಗೂ ಅರ್ಜಿ ಸಲ್ಲಿಸಲು ಮೇ10 ಕೊನೆ ದಿನ. ಶುಲ್ಕ ಪಾವತಿಗೆ ಮೇ 12 ಕೊನೆ ದಿನ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
ಇನ್ನು ಈ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕ ಹಾಗೂ ಇತರ ಮೂಲ ವೃಂದಗಳ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದೆ.
READ THIS : ಬೆಂಗಳೂರಲ್ಲಿ ಕಿಲ್ಲರ್ ‘BMTC’ ಗೆ ಮತ್ತೊಂದು ಬಲಿ..!

ಹುದ್ದೆಗಳ ವಿವರ
- ಒಟ್ಟು ಹುದ್ದೆಗಳು: 890
- ಗ್ರೂಪ್–B ಹುದ್ದೆಗಳು: 632
- ಕೃಷಿ ಅಧಿಕಾರಿ: 81
- ಸಹಾಯಕ ಕೃಷಿ ಅಧಿಕಾರಿ: 551
- ಕಲ್ಯಾಣ ಕರ್ನಾಟಕ ವೃಂದ: 258
- ಕೃಷಿ ಅಧಿಕಾರಿ: 40
- ಸಹಾಯಕ ಕೃಷಿ ಅಧಿಕಾರಿ: 218
ಪರೀಕ್ಷಾ ವೇಳಾಪಟ್ಟಿ
- ಕನ್ನಡ ಪರೀಕ್ಷೆ: ಜೂನ್ 6
- ಇತರ ಮೂಲ ವೃಂದದ ಲಿಖಿತ ಪರೀಕ್ಷೆ: ಜೂನ್ 7
- ಕಲ್ಯಾಣ ಕರ್ನಾಟಕ ವೃಂದದ ಲಿಖಿತ ಪರೀಕ್ಷೆ: ಜೂನ್ 14
ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ KEA ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವಂತೆ ಸೂಚಿಸಲಾಗಿದೆ.
MUST WATCH : ವಿದ್ಯುತ್ ಸ್ಥಾವರ ಇದ್ರು ಕೂಡ ಪವರ್ ಸಫ್ಲೈ ಮಾತ್ರ ಇಲ್ಲ..!




