Bengaluru : ‘BMTC’ ಗೆ ಮತ್ತೊಂದು ಬಲಿ – ವೃದ್ಧ ಸಾವು, ಬಸ್ ಸಮೇತ ಚಾಲಕ ಪೊಲೀಸ್ ವಶಕ್ಕೆ!

ಬೆಂಗಳೂರಲ್ಲಿ ಕಿಲ್ಲರ್ ‘BMTC’ ಗೆ ಮತ್ತೊಂದು ಬಲಿಯಾಗಿದ್ದು, ಬೈಕ್ ಸವಾರನೋರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರಿನ ಉತ್ತರ ಹೆಸರಘಟ್ಟದ ಬೆನಕ ಚೌಟ್ರಿ ಬಳಿ ನಡೆದಿದೆ. ಮೃತರನ್ನು ಕಾಮಾಕ್ಷಿಪಾಳ್ಯ ನಿವಾಸಿ 60 ವರ್ಷದನಾಗರಾಜ್ ಎಂದು ಗುರುತಿಸಲಾಗಿದೆ.
‘BMTC’ ಗೆ ಮತ್ತೊಂದು ಬಲಿ!
ನೆಲಮಂಗಲದಿಂದ ಹೆಸರಘಟ್ಟ ಮಾರ್ಗವಾಗಿ ಯಲಹಂಕದತ್ತ ತೆರಳುತ್ತಿದ್ದ ಬಿಎಂಟಿಸಿ ಬಸ್, ಎದುರಿಗೆ ಬರುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಯಿಂದ ಬೈಕ್ ಸವಾರ ನಾಗರಾಜ್ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಸ್ಥಳೀಯರು ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ, ಮಾರ್ಗಮಧ್ಯದಲ್ಲೇ ಅವರು ಸಾವನ್ನಪ್ಪಿದ್ದಾರೆ.
READ THIS : ಆಭರಣ ಪ್ರಿಯರಿಗೆ ಗುಡ್ನ್ಯೂಸ್ – ಚಿನ್ನದ ಬೆಲೆಯಲ್ಲಿಂದು ಕೊಂಚ ಇಳಿಕೆ

ಪೊಲೀಸರು ಭೇಟಿ, ಪರಿಶೀಲನೆ
ಘಟನೆ ಬಳಿಕ ಸೋಲದೇವನಹಳ್ಳಿ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಿಎಂಟಿಸಿ ಬಸ್ ಮತ್ತು ಚಾಲಕ ನರಸಿಂಹಮೂರ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
MUST WATCH : ಗೋಮಾಳ ಜಮೀನು ಒತ್ತುವರಿ ಆರೋಪ ಹಸು ಕುರಿಗಳೊಂದಿಗೆ ದಲಿತರ ವಿನೂತನ ಪ್ರೊಟೆಸ್ಟ್





