Dharmasthala ಕ್ಕೆ ಹೋಗುವ ಭಕ್ತರೇ ಗಮನಿಸಿ: ಏ.22ರವರೆಗೆ ಮಂಜುನಾಥ ಸ್ವಾಮಿ ದರ್ಶನದ ಸಮಯ ಬದಲಾವಣೆ

ವಿಶ್ವಪ್ರಸಿದ್ಧ ಮಂಜುನಾಥ ಸ್ವಾಮಿ ನೆಲೆಸಿರುವ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಇಂದಿನಿಂದ ದರ್ಶನದ ಸಮಯದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಪವಿತ್ರ ವಿಷು ಜಾತ್ರೆಯ ಪ್ರಯುಕ್ತ ಕ್ಷೇತ್ರದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಲಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಭಕ್ತರ ಅನುಕೂಲತೆ ಹಾಗೂ ಪೂಜಾ ವಿಧಿವಿಧಾನಗಳು ಸುಗಮವಾಗಿ ನಡೆಯಲು ಏಪ್ರಿಲ್ 17 ರಿಂದ ಏಪ್ರಿಲ್ 22 ರವರೆಗೆ ಹೊಸ ದರ್ಶನ ವೇಳಾಪಟ್ಟಿ ಜಾರಿಗೆ ಬರಲಿದೆ.
ಬದಲಾದ ದರ್ಶನ ಸಮಯಗಳು
- ಬೆಳಗಿನ ದರ್ಶನ: ಪ್ರತಿದಿನ ಬೆಳಗ್ಗೆ 8:30ರ ನಂತರ ಮಾತ್ರ ಭಕ್ತರಿಗೆ ಪ್ರವೇಶ
- ರಾತ್ರಿ ದರ್ಶನ: ರಾತ್ರಿ 8 ಗಂಟೆಯ ನಂತರ ಗರ್ಭಗುಡಿಯ ನೇರ ದರ್ಶನ ಇರುವುದಿಲ್ಲ
(ಭಕ್ತರು ದೇವಸ್ಥಾನದ ಹೊರಾಂಗಣದಿಂದ ಮಾತ್ರ ದರ್ಶನ ಪಡೆಯಬಹುದು)

READ THIS : ಹಾಡಹಗಲೇ ಮನೆಗೆ ನುಗ್ಗಿದ ಚಿರತೆ..!!
ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಸಾಧ್ಯತೆ
ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿರುವಂತೆ, ವಿಷು ಜಾತ್ರೆಯ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿಭಕ್ತರು ಆಗಮಿಸುವ ಸಾಧ್ಯತೆ ಇರುವುದರಿಂದ ಶಿಸ್ತು ಕಾಪಾಡಲು ಹಾಗೂ ಧಾರ್ಮಿಕ ವಿಧಿಗಳು ಸರಾಗವಾಗಿ ನಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.
Dharmasthala – ಏಪ್ರಿಲ್ 22ರ ನಂತರ ಎಂದಿನಂತೆ ದರ್ಶನ
ದರ್ಶನದ ಸಮಯದಲ್ಲಿ ಉಂಟಾಗುವ ಈ ತಾತ್ಕಾಲಿಕ ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡು ಭಕ್ತರು ತಮ್ಮ ಪ್ರವಾಸವನ್ನು ಯೋಜಿಸಬೇಕೆಂದು ಆಡಳಿತ ಮಂಡಳಿ ವಿನಂತಿಸಿದೆ. ಏಪ್ರಿಲ್ 22ರ ನಂತರ ದರ್ಶನವು ಎಂದಿನ ವೇಳಾಪಟ್ಟಿಯಂತೆ ಮುಂದುವರಿಯಲಿದೆ.

MUST WATCH : ಕಾರು- ಖಾಸಗಿ ಬಸ್ ಮಧ್ಯೆ ಡೆಡ್ಲಿ ಆಕ್ಸಿಡೆಂ* – ಕಾರಿನಲ್ಲಿದ್ದ 6 ಮಂದಿ ಸಜೀವ ದಹನ




