
Cast Census Servey : ಸೆಫ್ಟೆಂಬರ್ 22 ರಿಂದ ರಾಜ್ಯದಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಆರಂಭವಾಗಿದ್ದು, ಸಮೀಕ್ಷೆಗೆ ನೂರೆಂಟು ಗೊಂದಲವುಂಟಾಗಿದ್ದು ಶಿಕ್ಷಕರ ಅಲೆದಾಟ ಮಾತ್ರ ತಪ್ಪುತ್ತಿಲ್ಲ. ಸರ್ಕಾರ ಸಾಮಾಜಿಕ ಹಾಗೂ ಶೈಕ್ಷಣಿಕ ಸರ್ವೇ ಕಾರ್ಯಕ್ಕಾಗಿ ಶಾಲಾ ಶಿಕ್ಷಕರನ್ನು ನೇಮಕ ಮಾಡಿಕೊಂಡು, ಒಂದು ದಿನಗಳ ಕಾಲ ಟ್ರೈನಿಂಗ್ನನ್ನು ಕೂಡ ನೀಡಲಾಗಿತ್ತು. ತುಮಕೂರಿನಲ್ಲಿ ತಡವಾಗಿ ಜಾತಿ ಸಮೀಕ್ಷೆಯನ್ನು ನಡೆಸಲಾಗುತ್ತಿದ್ದು, ಶಿಕ್ಷಕರ ಗೋಳು ಕೇಳುವವರೇ ಇಲ್ಲವಾಗಿದ್ದಾರೆ.
ಸರ್ಕಾರದ ಎಡವಟ್ಟೋ ಜಿಲ್ಲಾಡಳಿತ ಎಡವಟ್ಟೋ. ಒಟ್ನಲ್ಲಿ ಸರ್ವೇ ಕಾರ್ಯದಿಂದ ಗೊಂದಲದಲ್ಲಿ ಅಲೆದಾಟ ನಡೆಸುತ್ತಿರುವವರು ಮಾತ್ರ ಶಿಕ್ಷಕರು.. ಹೌದು ರಾಜ್ಯದಲ್ಲಿ ಸೆಫ್ಟೆಂ ಬರ್ 22 ರಿಂದ ಸರ್ವೇ ಕಾರ್ಯ ಆರಂಭವಾದ್ರೆ, ತುಮಕೂರಿನಲ್ಲಿ ಸೆಫ್ಟೆಂಬರ್ 22 ರಂದು ಸಮೀಕ್ಷೆಗೆ ಕಿಟ್ ಅನ್ನು ನೀಡಲಾಯ್ತು. ಆದ್ರೆ ಜಾತಿ ಸಮೀಕ್ಷೆ ಆಪ್ ದಿನಕ್ಕೊಂದು ಬಾರಿ ಅಪ್ಡೇಟ್ ಮಾಡಲಾಗ್ತಿದ್ದು, ಸರ್ವೇ ಕಾರ್ಯಕ್ಕೆ ಸಾಕಷ್ಟು ತೊಡಕಾಗುತ್ತಿದ್ದು ಶಿಕ್ಷಕರು ಸರ್ಕಾರವನ್ನು ಶಪಿಸುವಂತಾಗಿದೆ.
ಇನ್ನು, ಸಮೀಕ್ಷೆ ಆರಂಭವಾಗಿ ಆರು ದಿನಗಳು ಆಗಿದ್ರು ಕೂಡ ಸರ್ವರ್ ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ. ಒಂದ್ಕಡೆ ಆಪ್ ವರ್ಕ್ ಮಾಡಲು ಕೆಲಸ ಮಾಡುತ್ತಿಲ್ಲ,ಮತ್ತೊಂದ್ಕಡೆ ಒಟಿಪಿ ಬರ್ತಿಲ್ಲ ನಿತ್ಯ ಸರ್ವರ್ ಸಮಸ್ಯೆ ಆಗ್ತಾ ಇದ್ದು, ಶಿಕ್ಷಕರು ಅಲೆಯುತ್ತಿದ್ರೆ, ಅಧಿಕಾರಿಗಳು ಮಾತ್ರ ತಲೆ ಕೆಡಿಸಿಕೊಳ್ಳುತ್ತಲೇ ಇಲ್ಲ. ಇತ್ತ ಜಾತಿ ಸಮೀಕ್ಷೆಗೆ ಹೋದ ಶಿಕ್ಷಕರಿಗೆ ಮನೆಗಳು ಸಿಗದೇ ಅತ್ತಿಂದಿತ್ತ ಅಲೆಯುವುದು ಮಾತ್ರ ತಪ್ಪುತ್ತಿಲ್ಲ. ಯುಎಚ್ಐಡಿ ನಂಬರ್ ಆಧರಿಸಿ ಸರ್ವೇ ಕಾರ್ಯಕ್ಕೆ ಅವಕಾಶ ಕೊಡಲಾಗಿದೆ. ಯುಎಚ್ಐಡಿ ನಂಬರ್ ಆರ್ಡರ್ ಆಗಿ ಕೊಟ್ಟಿಲ್ಲದಿರೋದ್ರಿಂದ ಮನೆ ಮನೆಯನ್ನು ಯುಎಚ್ಐಡಿ ನಂಬರ್ಗಾಗಿ ಅಲೆಯುವಂತಾಗಿದೆ. ಅಲ್ದೇ ಯುಎಚ್ಐಡಿ ನಂಬರ್ ಮನೆ ಎಲ್ಲಿದೆ ಎಂದು ಗೂಗಲ್ ಮ್ಯಾಪ್ನಲ್ಲೂ ಕೂಡ ಕೊಡಲಾಗಿದೆ, ಆದ್ರೆ ಗೂಗಲ್ ಮ್ಯಾಪ್ ಹಾಕಿಕೊಂಡು ಹೋದ್ರೆ ಅಲ್ಲಿ ಮನೆಯೇ ಸಿಗ್ತಾ ಇಲ್ವಂತೆ.. ಇನ್ನು ಈ ಬಗ್ಗೆ ಮೇಲಾಧಿಕಾರಿಗಳನ್ನು ಕೇಳಿದ್ರು ಪರಿಹಾರ ಮಾತ್ರ ಸಿಗ್ತಾ ಇಲ್ವಂತೆ.. ಒಂದೇ ಏರಿಯಾದಲ್ಲಿ ಮನೆಗಳನ್ನು ಕೊಟ್ಟರೆ ಹೇಗೋ ಸರ್ವೇ ಮಾಡಬಹುದು, ಆದ್ರೆ ಒಂದು ಮನೆ ಇಲ್ಲಿ ಇದ್ರೆ, ಮತ್ತೊಂದು ಮನೆ ಮತ್ತೊಂದು ಏರಿಯಾದಲ್ಲಿ ಇದೆ ಹೀಗೆ ಆದ್ರೆ ನಾವೇಗೆ ಸರ್ವೇ ಕಂಪ್ಲೀಟ್ ಮಾಡಲು ಸಾಧ್ಯ ಎಂದು ಶಿಕ್ಷಕರು ಸಮೀಕ್ಷೆ ಸಮಯದಲ್ಲಿ ಆಗುತ್ತಿರೋ ಸಮಸ್ಯೆಗಳನ್ನು ಪ್ರಜಾಶಕ್ತಿ ಕ್ಯಾಮೆರಾ ಮುಂದೆ ಬಿಚ್ಚಿಟ್ಟರು.
ಇನ್ನು ಅಂತೂ ಇಂತು ಮನೆ ಸಿಕ್ತು ಅಂತಾ ಖುಷಿಯಾಗಿ ಮನೆ ಬಳಿ ಹೋಗಿ ಸರ್ವೇ ಕಾರ್ಯ ಆರಂಭಿಸಿದ್ರೆ, ಎಲ್ಲಾ ಫಾರಂ ಫಿಲ್ ಮಾಡಿದ್ರೆ ಕೊನೆಯಲ್ಲಿ ಸರ್ವರ್ ಬ್ಯೂಸಿ ಅಂತಾ ಬರ್ತಾ ಇದೆ. ಇದರಿಂದ ಗಂಟೆ ಗಟ್ಟಲೆ ಸರ್ವೇ ಮಾಡಲು ಟೈಂ ವೇಸ್ಟ್ ಆಗ್ತಾ ಇದ್ದು ಶಿಕ್ಷಕರ ಗೋಳನ್ನು ಮಾತ್ರ ಯಾರು ಕೇಳ್ತಾ ಇಲ್ಲ. ಸರ್ವರ್ ಬ್ಯೂಸಿ ಇಂದ ಶಿಕ್ಷಕರಿಗೂ ಮಾತ್ರವಲ್ಲದೇ ಸರ್ವೇ ಮಾಡುವವರೆಗೂ ಸಾಕಷ್ಟು ತೊಂದ್ರೆ ಆಗ್ತಾ ಇದೆ ಅಂತಾ ಜನರು ಆಕ್ರೋಶ ಹೊರ ಹಾಕಿದರು.
ಸಮೀಕ್ಷೆ ಕಾರ್ಯಕ್ಕಾಗಿ ನಿತ್ಯ ಶಿಕ್ಷಕರು ಅಲೆದಾಡುತ್ತಿದ್ರು ಅಧಿಕಾರಿಗಳು ಮಾತ್ರ ಇದಕ್ಕೂ ನಮಗೂ ಸಂಬಂಧ ಇಲ್ಲ ಅನ್ನುವಂತೆ ಇರೋದು ಮಾತ್ರ ದುರಂತ. ಸರ್ವೇ ಕಾರ್ಯಕ್ಕೆ ಸರ್ಕಾರ ಪೂರ್ವ ತಯಾರಿ ಮಾಡಿಕೊಳ್ಳದೇ ಇರೋದ್ರಿಂದ ಸರ್ವೇ ಕಾರ್ಯಕ್ಕೆ ಸಾಕಷ್ಟು ತೊಡಕಾಗುತ್ತಿದೆ. ಸರ್ಕಾರದ ಸಮೀಕ್ಷಗೆ ಶಿಕ್ಷಕರು ಹಾಗೂ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದು, ಇನ್ನಾದ್ರು ಜಿಲ್ಲಾಡಳಿತ ಎಚ್ಚೆತ್ತು ಸಮೀಕ್ಷೆಗೆ ಆಗ್ತಾ ಇರೋ ಗೊಂದಲವನ್ನು ಸರಿಪಡಿಸುತ್ತಾರಾ ಎಂದು ಕಾದು ನೋಡಬೇಕಿದೆ.




