
ಬೆಂಗಳೂರು ಗ್ರಾಮಾಂತರ ದೇವನಹಳ್ಳಿಯ ಕೋರಮಂಗಲ ಪಂಚಾಯ್ತಿ ಎದುರು ನಮಗೆ ಸೂರು ಹೊದಗಿಸುವಂತೆ ಆಗ್ರಹಿಸಿ ದಲಿತ ಕುಟುಂಬಗಳು ಪ್ರತಿಭಟನೆ ನಡೆಸಿ, ಆಕ್ರೋಶ ಹೊರಹಾಕಿದ್ರು.
ಗ್ರಾಮದ 218 ಸರ್ವೇ ನಂಬರ್ ನಲ್ಲಿ 200ಕ್ಕೂ ಹೆಚ್ಚು ಸೈಟುಗಳಿಗೆ ಅನುಮೋದನೆಗೆ ಪ್ಲಾನ್ ಆಗಿದ್ದು, 200 ಸೈಟ್ ಗಳಲ್ಲಿ ಕೇವಲ 9 ಸೈಟ್ ದಲಿತರಿಗೆ ನೀಡಿದಾರೆ ಅಷ್ಟೇ. ಆದ್ರೆ ಆಶ್ರಯ ಯೋಜನೆಯಲ್ಲಿ ಇನ್ನು ಅನೇಕ ಕುಟುಂಬಗಳಿಗೆ ಸೈಟ್ ಸಿಗದೆ, ವಾಸಿಸಲು ಸ್ವಂತ ಮನೆ ಇಲ್ಲದೆ ಪರದಾಡುವಂತಾಗಿದೆ ಎಂದು ಕೋರಮಂಗಲ ಗ್ರಾಮಪಂಚಾಯಿತಿ ಎದುರು ದಲಿತ ಕುಟುಂಬಗಳು ಪ್ರತಿಭಟಿಸಿದರು
ಇದೇ ವೇಳೆ ದಲಿತ ಮುಖಂಡ ನರಸಿಂಹಮೂರ್ತಿ ಮಾತನಾಡಿ, ದಲಿತ ಕುಟುಂಬಗಳ ಜನ ಸಂಖ್ಯೆ ಮತ್ತು ಒಳ ಮೀಸಲಾತಿಯಂತೆ ಸೈಟ್ ಹಂಚಿಕೆ ಮಾಡಿಲ್ಲ. ಸರ್ವೆ ನಂ 218 ರಲ್ಲಿ 8 ಎಕರೆಯಲ್ಲಿ ಆಶ್ರಯ ನಿವೇಶನಕ್ಕೆ ಜಾರಿ ಮಾಡಿದ್ದಾರೆ. ಆದ್ರೆ ಮಾದಿಗ ಸಮುದಾಯಕ್ಕೆ ಸೈಟ್ ಸಿಕ್ಕಿಲ್ಲ. 218 ಸೈಟ್ ಗಳಲ್ಲಿ ಒಂದೊಂದು ಸೈಟ್ ಕೊಡಬೇಕು. ಆದ್ರೆ ನಮ್ಮ ಸಮುದಾಯವನ್ನು ತುಳಿಯುವ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಹಾಗೇ ನಮ್ಮ ಗ್ರಾಮದಲ್ಲಿ ಯಾರಾದ್ರೂ ಸತ್ತರೆ ಊಳಲು ಸಾರ್ವಜನಿಕ ಸ್ಮಶಾನವಿಲ್ಲ. ಖಾತೆಗಳು ಕೂಡ ಮಾಡಿಕೊಡುತ್ತಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕಡೆಗಣಿಸುತ್ತಿದ್ದಾರೆ. ದೇವನಹಳ್ಳಿ ಶಾಸಕ ಕೆ.ಹೆಚ್.ಮುನಿಯಪ್ಪ ಕೂಡಲೇ ಮದ್ಯ ಪ್ರವೇಶಿಸಿ ನಮ್ಮ ಸಮಸ್ಯೆಯನ್ನು ಆಲಿಸಬೇಕೆಂದು ಮನವಿ ಮಾಡಿಕೊಂಡರು.




