
ಅರಸೀಕೆರೆಯ ದಿನೇ ದಿನೇ ಹೆಚ್ಚು ಜನಸಂಖ್ಯೆಯನ್ನು ಹೊಂದುತ್ತಾ, ಬೆಳೆಯುತ್ತಿದೆ. ಇಂತಹ ನಗರದಲ್ಲಿ ಸ್ವಚ್ಚತೆ ಕಾಪಾಡುವುದು ನರಸಭೆಯ ಆದ್ಯ ಕರ್ತವ್ಯ, ಅದ್ಯಾಕೋ ಅಧಿಕಾರಿಗಳು ಸ್ವಚ್ಛತೆಗೆ ಆದ್ಯತೆ ನೀಡುತ್ತಿಲ್ಲ ಅಂತ ಜನರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಇತ್ತಾ ಪ್ರವಾಸಿ ಮಂದಿರದ ಮುಂಭಾಗದಲ್ಲಿರುವ ಬೆಂಗಳೂರು ಕಡೆಗೆ ಹೋಗುವ ರಸ್ತೆಯಲ್ಲಿರುವ ಬಸ್ ನಿಲ್ದಾಣ ಕುಟುಕ ಉಗಿಯುವ ಡಸ್ಟ್ ಬಿನ್ ಆಗಿ ಬದಲಾಗುತ್ತಿದೆ. ಬಸ್ ನಿಲ್ದಾಣದ ಒಳಗಡೆ ಕಸದ ಬಿದ್ದಿದ್ದು, ಗಬ್ಬೆದ್ದು ನಾರುತ್ತಿದೆ.
ಹೌದು.. ಅರಸೀಕೆರೆ ನಗರದ ಬಿಹೆಚ್ ರಸ್ತೆಯಲ್ಲಿರುವ ಪ್ರವಾಸಿ ಮಂದಿರ ಮುಂಭಾಗ ಬೆಂಗಳೂರು ಹೋಗುವ ಬಸ್ ನಿಲ್ದಾಣ ಇದೆ. ಆದ್ರೆ ಪ್ರಯಾಣಿಕರು ಕೂರಲಾಗರದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರಣ ಗುಟ್ಕಾ ತಿಂದು ಉಗಿದು, ಕಸ ಹಾಕಿದ್ದು, ಪ್ರಯಾಣಿಕರು ಆರೋಗ್ಯ ಬಗ್ಗೆ ಆತಂಕ ಶುರುವಾಗಿದೆ.
ಇತ್ತ ಈ ಬಸ್ ನಿಲ್ದಾಣದ ಹಿಂಭಾಗದಲ್ಲಿ ಸರ್ಕಾರಿ ಶಾಲೆಯಿದ್ದು, ಗಬ್ಬೆದ್ದಿರುವ ಬಸ್ ನಿಲ್ದಾಣದಿಂದಾಗಿ ಮಕ್ಕಳಿಗೆ ಕಾಯಿಲೆ ಬರುವ ಸಂಭವ ಹೆಚ್ಚಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮಹರಿಸಬೇಕೆಂದು ಸಾರ್ವಜನಿಕರು ನಗರಸಭೆಯ ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದಾರೆ.
ಒಟ್ಟಿನಲ್ಲಿ ದಿನನಿತ್ಯ ಸಾವಿರಾರು ಜನರು ಬೆಂಗಳೂರಿಗೆ ತೆರಳಲು ಈ ಬಸ್ ನಿಲ್ದಾಣಕ್ಕೆ ಬರುತ್ತಾರೆ. ಆದ್ರೆ ಅಸ್ವಚ್ಛತೆಯಿಂದ ಕೂಡಿರುವ ಈ ಬಸ್ ನಿಲ್ದಾಣದಿಂದಾಗಿ ಜನರು ಕಿರಿಕಿರಿ ಅನುಭವಿಸುವಂತಾಗಿದೆ. ಮುಂದಾದರು ನಗರಸಭೆಯ ಅಧಿಕಾರಿಗಳು ಇತ್ತ ಗಮನಹರಿಸಿ ಸ್ವಚ್ಛತೆಯನ್ನು ಕಾಪಾಡಬೇಕಿದೆ




