
ಬೆಂಗಳೂರಿನಿಂದ ಕೂಗಳತೆ ದೂರದಲ್ಲಿರುವ ತುಮಕೂರು ದಿನದಿಂದ ದಿನಕ್ಕೆ ಅಭಿವೃದ್ಧಿಯತ್ತ ಸಾಗುತ್ತಿದೆ.. ಅದೇ ರೀತಿ ಜನರ ಓಡಾಟ ಕೂಡಾ ಹೆಚ್ಚಾಗ್ತಿದ್ದು, ಪ್ರತಿ ನಿತ್ಯ ತುಮಕೂರಿನಿಂದ ಬೆಂಗಳೂರಿಗೆ ಲಕ್ಷಾಂತರ ಜನ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಹೀಗಾಗಲೇ ತುಮಕೂರು-ಬೆಂಗಳೂರಿಗೆ ರೈಲುಗಳ ಕೊರತೆ ಇಲ್ಲದೆ ಆಗೆ ನೋಡಿಕೊಂಡಿದೆ ರೈಲ್ವೆಇಲಾಖೆ. ಅತ್ತ ಕೇಂದ್ರ ಸಚಿವ ವಿ.ಸೋಮಣ್ಣ ಕೂಡ ಹಲವು ರೈಲ್ವೆ ಯೋಜೆನೆಗಳನ್ನು ರೂಪಿಸುತ್ತಿದ್ದಾರೆ. ತುಮಕೂರಿನಿಂದ ಬೆಂಗಳೂರಿಗೆ ಓಡಾಟ ನಡೆಸುವ ರೈಲ್ವೆ ಪ್ರಯಾಣಿಕರಿಗೆ ಮತ್ತೊಂದುಗುಡ್ ನ್ಯೂಸ್ ಸಿಕ್ಕಿದೆ.

ಹೌದು.. ತುಮಕೂರು ದಿನದಿಂದ ದಿನಕ್ಕೆ ಅಭಿವೃದ್ಧಿಯತ್ತ ಸಾಗುತ್ತಿದ್ದು, ಅದೇ ರೀತಿ ಜನಸಂಖ್ಯೆ ಕೂಡಾ ಹೆಚ್ಚಾಗ್ತಿದೆ.. ತುಮಕೂರು ಜಿಲ್ಲೆಯಲ್ಲಿ ತುಮಕೂರು ಟು ರಾಯದುರ್ಗ, ತುಮಕೂರು ಟು ದಾವಣಗೆರೆ ರೈಲ್ವೆ ಯೋಜನೆಗಳು ಹತ್ತಾರು ವರ್ಷಗಳಿಂದ ನೆನಗುದಿಗೆ ಬಿದಿದ್ದ ರೈಲ್ವೆ ಕಾಮಗಾರಿಗಳಿಗೆ ವಿ.ಸೋಮಣ್ಣ ಕೇಂದ್ರ ಸಚಿವರಾದ ಮೇಲೆ ಕಾಮಗಾರಿಗಳು ಚುರುಕುಗೊಂಡಿವೆ. ಅಲ್ಲದೇ ಹತ್ತಾರು ರೈಲ್ವೆ ಲೈನ್ ಕ್ರಾಸ್ ಗಳಿಗೆ ಬ್ರಿಡ್ಜ್, ಅಂಡರ್ ಪಾಸ್ ಗಳನ್ನ ಕೂಡಾ ಶರವೇಗದಲ್ಲಿ ಮಾಡಲಾಗ್ತಿದೆ.

ತುಮಕೂರು ಟು ಬೆಂಗಳೂರಿಗೆ ಪ್ರತಿದಿನ ಸುಮಾರು 80 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಓಡಾಟ ನಡೆಸುತ್ತಿದ್ದು.. ರೈಲ್ವೆ ಪ್ರಯಾಣಿಕರ ಸಮಯವನ್ನ ಕಡಿಮೆ ಮಾಡಲು, ತುಮಕೂರು ಟು ಬೆಂಗಳೂರು ನಡುವೆ ಎರಡು ಪಥ ಇದ್ದ ರೈಲ್ವೆ ಮಾರ್ಗವನ್ನ ಇದೀಗ ನಾಲ್ಕು ಪಥ ಮಾಡಲು ಮುಂದಾಗಿದೆ. ಈಗಾಗಲೇ ಕೇಂದ್ರ ಸರ್ಕಾರದಿಂದ ಮೊದಲ ಹಂತದಲ್ಲಿ 90 ಕೋಟಿ ಹಣ ಕೂಡ ಮಂಜೂರಾಗಿದೆ.
ಇನ್ನು ತುಮಕೂರು ಟು ಬೆಂಗಳೂರಿಗೆ ನಾಲ್ಕು ಪಥದ ರೈಲ್ವೆ ಮಾರ್ಗ ಮಾಡುವುದರಿಂದ ರೈಲ್ವೆ ಪ್ರಯಾಣಿಕರ ಸಮಯ ಉಳಿತಾಯವಾಗಲಿದ್ದು, ಕೇವಲ ಅರ್ಧ ಗಂಟೆಯಲ್ಲಿ ಪ್ರಯಾಣ ಮುಗಿಯಲಿದೆ.




