
ತುಮಕೂರು ಜಿಲ್ಲೆಯ ಹೆಬ್ಬೂರು ಪ್ರಥಮ ದರ್ಜೆ ಕಾಲೇಜಿನಲ್ಲಿ ಕೌಶಲ್ಯ ಪಥ ಯುವ ಸಬಲೀಕರಣ ಕಾರ್ಯಕ್ರಮವನ್ನು ಕೆಪಿಸಿಸಿ ವಕ್ತಾರಾರ ಮುರಳೀಧರ್ ಹಾಲಪ್ಪ ಉದ್ಘಾಟಿಸಿದ್ರು. ಈ ವೇಳೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಿ.ಎಸ್ ಪುರ ಹಾಗೂ ಹೆಬ್ಬೂರು ಸರ್ಕಾರಿ ಪ್ರಥಮ ಕಾಲೇಜು ವಿದ್ಯಾರ್ಥಿಗಳನ್ನು ತುಮಕೂರು ದಸರಾ ಕಾರ್ಯಕ್ರಮಕ್ಕೆ ಭಾಗಿಯಾಗಲು ಆಹ್ವಾನ ನೀಡಲಾಯ್ತು. ಈ ವೇಳೆ ಕೆಪಿಸಿಸಿ ವಕ್ತಾರ ಮುರಳೀಧರ್ ಹಾಲಪ್ಪ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ರು. ಇನ್ನು ಈ ವೇಳೆ ವಿದ್ಯಾರ್ಥಿಗಳಿಗೆ ಚರ್ಚಾ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿದ್ದು, ಚರ್ಚಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯ್ತು.
ಈ ವೇಳೆ ಮಾತನಾಡಿದ ಮುರಳೀಧರ್ ಹಾಲಪ್ಪ, ಹೆಬ್ಬೂರು ಪ್ರಥಮ ದರ್ಜೆ ಕಾಲೇಜಿನಲ್ಲಿ ಇರುವ ಉಪನ್ಯಾಸಕರ ಕೊರತೆಯನ್ನು ಆದಷ್ಟು ಬೇಗ ಪರಿಹರಿಸುತ್ತೇನೆ ಎಂದ್ರು. ಅಲ್ದೇ ತುಮಕೂರು ಹೆಚ್ ಎ ಎಲ್ ಕಾರ್ಖಾನೆಗೆ 5 ಸಾವಿರ ನೌಕರರ ಅಗತ್ಯವಿದೆ. ತುಮಕೂರು ಜಿಲ್ಲೆಯ ಅಭ್ಯರ್ಥಿಗಳಿಗೆ ಮೊದಲ ಆದ್ಯತೆಯನ್ನ ಹೆಚ್ ಎ ಎಲ್ ನೀಡುವುದರಿಂದ ಅಭ್ಯರ್ಥಿಗಳು ಉದ್ಯೋಗ ವಿನಿಮಯ ಕೇಂದ್ರದ ಹೆಸರು ನೋಂದಣಿ ಮಾಡಬಹುದು ಎಂದು ಹೇಳಿದರು.
ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ಸಿ ಎಸ್ ಪುರ ಪ್ರಾಂಶುಪಾಲರು ಮೈಕ್ರೋ ಫೈನಾನ್ಸ್ ಹಾವಳಿಯಿಂದ ಗಂಡು ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಆಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ರು.
ಇನ್ನು ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಪ್ರೊ. ಡಿ ಕೃಷ್ಣ, ಉಪನ್ಯಾಸಕರಾದ ಡಾ. ಎನ್. ಗೋವಿಂದರಾಜು, ಪ್ರೊ. ಮಧುಸೂದನ್, ಪ್ರೊ. ಮೋಹನ್ ಕುಮಾರ್, ಡಾ. ಶಿವರಾಜ್, ಡಾ. ದಿನೇಶ್ ಕುಮಾರ್, ಡಾ. ನಾಗರಾಜ್ ಪ್ರೊ. ಜಗದೀಶ್, ಡಾ. ಅನಂತಕುಮಾರ್ ಸೇರಿ ಹಲವರು ಉಪಸ್ಥಿಯರಿದ್ದರು




