
TUMKUR DASARA CELEBRATIONS : ತುಮಕೂರಿನಲ್ಲಿ ನಾಡ ಹಬ್ಬ ದಸರಾ ಹಬ್ಬ ದಿನದಿಂದ ದಿನಕ್ಕೆ ರಂಗು ಪಡೆದುಕೊಳ್ಳುತ್ತಿದೆ. ಕಳೆದ ಐದು ದಿನಗಳಿಂದಲೂ ಚಾಮುಂಡೇಶ್ವರಿ ದೇವಿಗೆ ನಾನಾ ಪೂಜಾ ಕೈಂಕರ್ಯಗಳನ್ನು ನಡೆಸಲಾಗ್ತಿದೆ. ಒಂದೊಂದು ದಿನವೂ ವಿಭಿನ್ನವಾಗಿ ದಸರಾ ಹಬ್ಬದ ಅಂಗವಾಗಿ ವಿಶೇಷ ಪೂಜೆ ನೆರವೇರಿಸಲಾಗ್ತಿದೆ. ತುಮಕೂರು ನಗರದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ದಸರಾ ಮಂಟಪವನ್ನು ನಿರ್ಮಾಣ ಮಾಡಲಾಗಿದ್ದು, ಆ ಮಂಟಪದಲ್ಲಿ ಚಾಮುಂಡೇಶ್ವರಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಚಾಮುಂಡೇಶ್ವರಿ ದೇವಿಗೆ ನಿತ್ಯ ಒಂದೊಂದು ಅಲಂಕಾರ ಮಾಡಲಾಗಿದ್ದು, ಇಂದು ದೇವಿಗೆ ಕಾತ್ಯಾಯಿನಿ ಅಲಂಕಾರ ಮಾಡಲಾಗಿದ್ದು, ದೇವಿಯ ಅಲಂಕಾರಕ್ಕೆ ಜನರು ಮನಸೋತರು.
ಇನ್ನು, ದಸರಾ ಮಂಟಪದಲ್ಲಿ ಪ್ರತಿಷ್ಠಾಪನೆ ಮಾಡಲಾಗಿರೋ ದೇವಿಗೆ ಇಂದು ಅಪರ ಜಿಲ್ಲಾಧಿಕಾರಿ ತಿಪ್ಪೇಸ್ವಾಮಿ ಕುಟುಂಬ, ತಹಶೀಲ್ದಾರ್ ಹಾಗೂ ಅಧಿಕಾರಿಗಳ ವತಿಯಿಂದ ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆಯಿಂದಲೂ ವಿಶೇಷ ಪೂಜೆ ಮಾಡಗಾಗಿದ್ದು, ಸುಭೀಕ್ಷ ನಾಡಿಗಾಗಿ ಪ್ರಾರ್ಥನೆ ಸಲ್ಲಿಸಿದರು.

ಇನ್ನು ದಸರಾ ಅಂಗವಾಗಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಫಲಪುಷ್ಪ ಪ್ರದರ್ಶನ ಹಾಗೂ ವಸ್ತುಪ್ರದರ್ಶನವನ್ನು ಆಯೋಜನೆ ಮಾಡಲಾಗಿತ್ತು. ವಸ್ತು ಪ್ರದರ್ಶನವನ್ನು ಗೃಹ ಸಚಿವ ಪರಮೇಶ್ವರ್ ಉದ್ಘಾಟನೆ ಮಾಡಿದ್ರು. ಇನ್ನು ಫಲಪುಷ್ಪ ಪ್ರದರ್ಶನದಲ್ಲಿ ಹೂಗಳಿಂದ ವಿಶೇಷವಾಗಿ ಅರಳಗುಪ್ಪೆ ದೇವಸ್ಥಾನವನ್ನು ಹಾಗೂ ವಿವಿಧ ಕಲಾಕೃತಿಗಳನ್ನು ನಿರ್ಮಾಣ ಮಾಡಲಾಗಿದ್ದು, ಜನರು ಫಲಪುಷ್ಪ ಪ್ರದರ್ಶನ ನೋಡಲು ಮುಗಿಬಿದ್ದರು. ಅಲ್ದೇ ವಸ್ತು ಪ್ರದರ್ಶನದಲ್ಲಿ ವಿಶೇಷ ಮೀನುಗಳು, ಚಿಟ್ಟೆಗಳನ್ನು ತೋಟಗಾರಿಕಾ ಇಲಾಖೆ ವತಿಯಿಂದ ಪ್ರದರ್ಶನಕ್ಕೆ ಇಡಲಾಗಿತ್ತು.

ಇನ್ನು ದಸರಾ ಅಂಗವಾಗಿ ಇಂದು ಮಹಿಳಾ ಬೈಕ್ ರೈಡ್ ಆಯೋಜನೆ ಮಾಡಲಾಗಿದ್ದು, ಮಹಿಳಾ ಬೈಕ್ ರೈಡ್ಗೆ ಚಾಲನೆ ನೀಡಲಾಯ್ತು. ಬೈಕ್ ರೈಡ್ನಲ್ಲಿ ನೂರಾರು ಮಂದಿ ಮಹಿಳೆಯರು ಭಾಗಿಯಾಗಿದ್ದು, ನಾರಿಯರು ಸೀರೆಯುಟ್ಟು ಬುಲೇಟ್ ಏರಿ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ರೈಡ್ ಮಾಡಿದ್ರು. ಮಹಿಳೆಯರು ರೈಡ್ಗೆ ಮುಂದಾಗ್ತಾ ಇದ್ದಂತೆ ಜನರು ಶಿಳ್ಳೆ ಹಾಕಿ ಹುರಿದುಂಬಿಸಿದರು.
ಇತ್ತ ದಸರಾ ಅಂಗವಾಗಿ ತುಮಕೂರು ನಗರದ್ಯಂತ ವಿದ್ಯುತ್ ಅಲಂಕಾರದಿಂದ ಝಗಮಗ ಅಂತಿದ್ದು, ನಗರದಾದ್ಯಂತ ದಸರಾ ಹಬ್ಬದ ಸಂಭ್ರಮ ಕಳೆಗಟ್ಟಿತ್ತು. ಇತ್ತ ದಸರಾ ಲೈಟಿಂಗ್ಸ್ ವೀಕ್ಷಣೆ ಮಾಡಲು ಜಿಲ್ಲಾಡಳಿತ ಅಂಬಾರಿ ವ್ಯವಸ್ಥೆ ಮಾಡಲಾಗಿದ್ದು ಜನರು ನಾ ಮುಂದು ತಾ ಮುಂದು ಅಂತಾ ಅಂಬಾರಿ ಬಸ್ ಏರಲು ಮುಗಿಬಿದ್ದರು. ಅಂಬಾರಿ ಬಸ್ನಲ್ಲಿ ಲೈಟಿಂಗ್ಸ್ ವೀಕ್ಷಿಸಿ ಫುಲ್ ಎಂಜಾಯ್ ಮಾಡಿದರು.




