
BIGG BOSS SEASON 12 : ಕನ್ನಡದ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಆರಂಭಕ್ಕೆ ಇನ್ನು ಕೆಲವೇ ಗಂಟೆಗಳಷ್ಟೇ ಬಾಕಿಯಿದೆ. ಇಂದು ಸಂಜೆ 6 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಇದರ ಗ್ರ್ಯಾಂಡ್ ಓಪನಿಂಗ್ ಪ್ರಸಾರವಾಗಲಿದೆ. ಪ್ರೇಕ್ಷಕರು ಈ ಕಾರ್ಯಕ್ರಮವನ್ನು ಜಿಯೋಸಿನೆಮಾ ಅಥವಾ ಹಾಟ್ಸ್ಟಾರ್ ಆಪ್ ಮೂಲಕ ಆನ್ಲೈನ್ನಲ್ಲೂ ವೀಕ್ಷಿಸಬಹುದು.
ಈ ಬಾರಿ 17 ಅಥವಾ 18 ಸ್ಪರ್ಧಿಗಳು ಬಿಗ್ ಬಾಸ್ ಮನೆಯಲ್ಲಿ ಪ್ರವೇಶಿಸಲಿದ್ದಾರೆ. ಈಗಾಗಲೇ ಕಾರ್ಯಕ್ರಮದ ಮೊದಲ ಹಂತದ ಶೂಟಿಂಗ್ ಮುಕ್ತಾಯಗೊಂಡಿದ್ದು, ನಿನ್ನೆ ತಡರಾತ್ರಿ ಮುಗಿದ ಶೂಟಿಂಗ್ ಮಾಡಲಾಗಿದೆ. ಈ ಕುರಿತು ಕಿಚ್ಚ ಸುದೀಪ್ ಇಂದು ಬೆಳಗ್ಗೆ ಟ್ವೀಟ್ ಮಾಡಿ ವಿಶೇಷ ಮಾಹಿತಿ ಹಂಚಿಕೊಂಡಿದ್ದಾರೆ.
“ಈ ದಿನ ತುಂಬ ದೀರ್ಘವಾಗಿತ್ತು. ಎಲ್ಲ ಸ್ಪರ್ಧಿಗಳು ಇಂಟರೆಸ್ಟಿಂಗ್ ಆಗಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 12 ಆರಂಭ ಆಗಿದೆ. ಇಡೀ ತಂಡಕ್ಕೆ ಮತ್ತು ಎಲ್ಲ ಸ್ಪರ್ಧಿಗಳಿಗೆ ಶುಭವಾಗಲಿ” ಎಂದು ಪೋಸ್ಟ್ ಮಾಡಿದ್ದಾರೆ.
ಇನ್ನು ಕಲರ್ಸ್ ಕನ್ನಡ ವಾಹಿನಿಯ ಮತ್ತೊಂದು ಜನಪ್ರಿಯ ರಿಯಾಲಿಟಿ ಶೋ ಕ್ವಾಟ್ಲೆ ಕಿಚನ್ನ ಫಿನಾಲೆ ನಿನ್ನೆ ನಡೆದಿದ್ದು, ಅದರಲ್ಲಿ ಬಿಗ್ ಬಾಸ್ನ ಮೂವರು ಸ್ಪರ್ಧಿಗಳ ಹೆಸರು ರಿವೀಲ್ ಮಾಡಲಾಗಿದೆ. ಕಾಕ್ರೋಚ್ ಸುಧಿ, ಮಂಜು ಭಾಷಿಣಿ ಮತ್ತು ಮಲ್ಲಮ್ಮ ಅವರ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗಿದೆ.




