Karnataka Weather : ಆಚೆ ಬರುವ ಮುನ್ನ ಹುಷಾರ್ – ಇನ್ನಷ್ಟು ಹೆಚ್ಚಾಗಲಿದೆ ಬಿಸಿಲಿನ ಝಳ.

Karnataka Weather : ರಾಜ್ಯದಲ್ಲಿ ವಾತಾವರಣ ಸಂಪೂರ್ಣ ಬದಲಾಗಿದೆ. ಬೇಸಿಗೆಯಲ್ಲೂ ಮಳೆಗಾಲದಂತಹ ಅನುಭವ ಆಗಿತ್ತು. ಇದೀಗ ಗರಿಷ್ಠ ತಾಪಮಾನದಲಿ ಏರಿಕೆ ಆಗಿದ್ದು, ರಾಜ್ಯಾದ್ಯಂತ ಉರಿಬಿಸಿಲಿನ ಅನುಭವವಾಗುತ್ತಿದೆ. ಅಲ್ದೇ ಇಂದಿನಿಂದ ಭಾರೀ ಬಿಸಿಗಾಳಿಯ ಎಚ್ಚರಿಕೆ ನೀಡಲಾಗಿದ್ದು, ಮುಂದಿನ ಐಧು ದಿನಗಳ ಕಾಲ ರಾಜ್ಯದ 12 ಜಿಲ್ಲೆಗಳಿಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಒಂದೇ ದಿನಕ್ಕೆ 4.1 ಡಿಗ್ರಿ ಸೆಲ್ಸಿಯಸ್ ತಾಪಮಾನ ಏರಿಕೆ
ರಾಜ್ಯದಲ್ಲಿ ಈ ವರ್ಷ ತೀವ್ರ ಚಳಿಗೆ ತತ್ತರಿಸಿದ್ದ ಜನರಿಗೆ ಇದೀಗ ಬಿಸಿಲು ಕೂಡ ಶಾಕ್ ನೀಡ್ತಿದೆ. ಒಂದೇ ದಿನದಲ್ಲಿ ಸಾಮಾನ್ಯಕ್ಕಿಂತ 4.1 ಡಿಗ್ರಿ ಸೆಲ್ಸಿಯಸ್ ಹೆಚ್ಚಿನ ಉಷ್ಣಾಂಶ ಏರಿಕೆ ಆಗಿದ್ದು, ರಾಜ್ಯಾದ್ಯಂತ ಬಿಸಿಲಿನ ತಾಪ, ಸೆಕೆ ಕಂಡು ಬರಲಿದ್ದು, ಐಎಂಡಿ ಹೀಟ್ ವೇವ್ ಎಚ್ಚರಿಕೆ ನೀಡಿದೆ. ಈ ಹಿನ್ನಲೆ ರಾಜ್ಯದ 12 ಜಿಲ್ಲೆಗಳಾದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಗದಗ. ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಿದೆ.
READ THIS : ನಿಗೂಢ ನಾಪತ್ತೆ: 100ಕ್ಕೂ ಹೆಚ್ಚು ನಗರಗಳಲ್ಲಿ ಹುಡುಕಾಡಿದರೂ ಪತ್ತೆಯಾಗದ ತನಿಷ್ಕಾ-ತೇಜಸ್ವಿನಿ

ಬಿಸಿಗಾಳಿಗೆ ತತ್ತರಿಸಿ ಹೋಗ್ತಿರುವ ರಾಜ್ಯದ ಜನರು
ಇನ್ನು ಉತ್ತರ ಕರ್ನಾಟಕ ಭಾಗದಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗಿದ್ದು, ವಿಶೇಷವಾಗಿ ಕಲಬುರಗಿಯಲ್ಲಿ 42 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಈ ಅವಧಿಯಲ್ಲಿನ ಅತ್ಯಧಿಕ ತಾಪಮಾನವಾಗಿದೆ. ಈಗಾಗಲೇ ಜನರು ತೀವ್ರ ಬಿಸಿಲಿನಿಂದ ತತ್ತರಿಸಿ ಹೋಗಿದ್ದು, ಮಧ್ಯಾಹ್ನ ಸಮಯದಲ್ಲಿ ಹೊರಗೆ ಬರಲು ಹೆದರುತ್ತಿದ್ದಾರೆಇನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ತಾಪಮಾನ ಏರಿಕೆಯಾಗುತ್ತಿದ್ದು, ಜನರು ತತ್ತರಿಸಿ ಹೋಗ್ತಿದ್ದಾರೆ.
ಆರೋಗ್ಯದ ಮೇಲೆ ನಿಗಾ ವಹಿಸುವಂತೆ ವೈದ್ಯರು ಸಲಹೆ
ಇನ್ನು ಬೆಳ್ಳಂಬೆಳಗ್ಗೆಯೇ ಬಿಸಿಲು ನೆತ್ತಿ ಸುಡುತ್ತಿದ್ದು, ಬಿಸಿಗಾಳಿಯ ಪರಿಣಾಮವಾಗಿ ಜನರು ಆರೋಗ್ಯದ ಮೇಲೆ ನಿಗಾ ವಹಿಸುವಂತೆ ವೈದ್ಯರು ಸಲಹೆ ನೀಡ್ತಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಲು ಸೂಚಿಸಿದ್ದಾರೆ.
MUST WATCH : ಸಿದ್ದು ಅಂಡ್ ಟೀಂನ ಟಾರ್ಗೆಟ್ ಮಾಡ್ತಿದ್ದಾರಾ ಮಾಜಿ ಸಚಿವ ರಾಜಣ್ಣ ಹೀಗ್ಯಾಕಂದ್ರು?





