Bengaluru : ವಿದ್ಯಾರಣ್ಯಪುರದ ಇಬ್ಬರು ಪಿಯುಸಿ ವಿದ್ಯಾರ್ಥಿನಿಯರು 75 ದಿನಗಳಿಂದ ನಾಪತ್ತೆಯಾಗಿದ್ದಾರೆ.

ಬೆಂಗಳೂರು ನಗರದ ವಿದ್ಯಾರಣ್ಯಪುರದಲ್ಲಿ ಸೆಕೆಂಡ್ ಪಿಯುಸಿ ಓದುತ್ತಿದ್ದ ತನಿಷ್ಕಾ ಮತ್ತು ಆಕೆಯ ಜ್ಯೂನಿಯರ್ ತೇಜಸ್ವಿನಿ ಎಂಬ ಇಬ್ಬರು ವಿದ್ಯಾರ್ಥಿನಿಯರು ಜನವರಿ 31, 2026ರಂದು ಮನೆ ಬಿಟ್ಟು ಹೋದ ನಂತರ ಬರೋಬ್ಬರಿ 75 ದಿನಗಳು ಕಳೆದಿದ್ದರೂ ಅವರ ಬಗ್ಗೆ ಯಾವುದೇ ಸುಳಿವು ಸಿಗದೆ ಇರುವುದು ಪೊಲೀಸ್ ಮತ್ತು ಕುಟುಂಬಸ್ಥರನ್ನು ತೀವ್ರವಾಗಿ ಕಂಗಾಲುಗೊಳಿಸಿದೆ.
100ಕ್ಕೂ ಹೆಚ್ಚು ನಗರಗಳಲ್ಲಿ ಹುಡುಕಾಟ
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು 10 ಸದಸ್ಯರ ವಿಶೇಷ ತಂಡವನ್ನು ರಚಿಸಿ ದೇಶದ ವಿವಿಧ ಭಾಗಗಳಲ್ಲಿ ತೀವ್ರ ಹುಡುಕಾಟ ನಡೆಸಿದ್ದಾರೆ. ಮುಂಬೈ, ಚೆನ್ನೈ, ಕೊಯಮತ್ತೂರು, ದೆಹಲಿ, ಕಾಶಿ, ಕೇರಳ ಸೇರಿದಂತೆ 100ಕ್ಕೂ ಹೆಚ್ಚು ನಗರಗಳು ಮತ್ತು ಚಾಮರಾಜನಗರ, ಮೈಸೂರು, ಮಲೆಮಹದೇಶ್ವರ ಬೆಟ್ಟ ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆದಿದೆ. ಆದರೂ ಇಂದಿನವರೆಗೆ ಯಾವುದೇ ಖಚಿತ ಸುಳಿವು ಲಭ್ಯವಾಗಿಲ್ಲ.
READ THIS : ಬೆಳಗಾವಿಯಲ್ಲಿ ಮರ್ಯಾದಾ ಹತ್ಯೆ – ವಿಷ ಕುಡಿಸಿ ಯುವತಿಯ Murder

ಹುಡುಕಾಡಿದರೂ ಪತ್ತೆಯಾಗದ ತನಿಷ್ಕಾ-ತೇಜಸ್ವಿನಿ
ತನಿಖೆಯಲ್ಲಿ ಹೊರಬಂದ ಮಾಹಿತಿ ಪ್ರಕಾರ, ಇಬ್ಬರೂ ವಿದ್ಯಾರ್ಥಿನಿಯರು ಮನೆಯಿಂದ ಹೊರಡುವಾಗ ಕೇವಲ ₹3,000 ಮಾತ್ರ ತೆಗೆದುಕೊಂಡು ಹೋಗಿದ್ದು, ಆ ನಂತರ ಯಾವುದೇ ಫೋನ್ ಬಳಕೆ, ಎಟಿಎಂ ಕಾರ್ಡ್ ಉಪಯೋಗ ಅಥವಾ ಕುಟುಂಬ-ಸ್ನೇಹಿತರೊಂದಿಗೆ ಸಂಪರ್ಕ ಹೊಂದಿಲ್ಲ. ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟದವರೆಗೂ ಹೋಗಿದ್ದ ಸುಳಿವು ಸಿಕ್ಕಿತ್ತು, ಆದರೆ ಅಲ್ಲಿಂದ ಮುಂದೆ ಎಲ್ಲಿ ಹೋದರು ಎಂಬುದು ಪತ್ತೆಯಾಗಿಲ್ಲ.
ಪೊಲೀಸರು ಇವರ ಎಲ್ಲಾ ಇಷ್ಟದ ಸ್ಥಳಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಇವರಿಬ್ಬರೂ ಉಚಿತ ಬಸ್ ಸೌಲಭ್ಯ ಬಳಸಿ ಪ್ರಯಾಣಿಸಿರುವ ಸಾಧ್ಯತೆಯೂ ಇದೆ. ಯುಡಿಆರ್ ಆರ್ ಕೇಸ್ ಕೂಡ ದಾಖಲಾಗಿಲ್ಲ.

ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಕೆಯಾದರೂ ಸಿಗದ ಸುಳಿವು
ಇನ್ನೊಂದೆಡೆ, ಮಕ್ಕಳ ಸುರಕ್ಷತೆ ಬಗ್ಗೆ ಆತಂಕಗೊಂಡಿರುವ ಪೋಷಕರು ಹೈಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.
ಹೀಗಾಗಿ ವಿದ್ಯಾರ್ಥಿನಿಯರನ್ನು ಹುಡುಕಲು ಪೊಲೀಸರಿಗೆ ಒಂದು ವಾರದ ಕಾಲಾವಕಾಶ ನೀಡಿದ್ದು ಈ ಗಡುವು ಮುಗಿದು ಒಂದು ತಿಂಗಳೇ ಕಳೆದಿದೆ. ಆದರೂ ಈ ಬಾಲಕಿಯರ ಸುಳಿವು ಸಿಕ್ಕಿಲ್ಲ.
ಪರೀಕ್ಷೆಯ ಭಯದಿಂದಾಗಿ ಅಥವಾ ಬೇರೆ ಯಾವುದೇ ಕಾರಣದಿಂದ ಇಬ್ಬರು ತಲೆಮರೆಸಿಕೊಂಡಿರಬಹುದಾ ಎಂಬ ಅನುಮಾನವೂ ಇದೆ.
MUST WATCH : ರಾಜ್ಯ ರಾಜಕಾರಣಕ್ಕೆ ಹೆಚ್ಡಿಕೆ ಮರಳುತ್ತಾರಾ..?- ಸಿಎಂ ಆಗುವ ಆಸೆ ಬಿಚ್ಚಿಟ್ರಾ ದಳಪತಿ?





