
ಶಾಸಕ ಜ್ಯೋತಿಗಣೇಶ್ ಹಾಗೂ ಗೃಹ ಸಚಿವ ಪರಮೇಶ್ವರ್ ಅವರು ನೋಡಲೇ ಬೇಕಾದ ಸ್ಟೋರಿ ಇದು. ತುಮಕೂರು ನಗರ ಸ್ಮಾರ್ಟ್ ಸಿಟಿ, ಶೈಕ್ಷಣಿಕ ನಗರ ಎಂಬೆಲ್ಲ ಖ್ಯಾತಿಗಳಿಸಿದೆ, ಅದ್ರ ಜೊತೆಗೆ ತುಮಕೂರು ನಗರ ಗುಂಡಿಗಳ ನಗರಿ ಎಂಬ ಕುಖ್ಯಾತಿಗೂ ಪಾತ್ರವಾಗ್ತಿದೆ. ಯಾಕಂದ್ರೆ ನಗರದ ಬಹುತೇಕ ಬಡಾವಣೆ, ಮುಖ್ಯ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದು, ವಾಹನ ಸವಾರರು ಜೀವಭಯದಲ್ಲೇ ಓಡಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಇಂತಹ ರಸ್ತೆಯ ಅವ್ಯವಸ್ಥೆಯ ಕುರಿತಾಗಿ ಸಾರ್ವಜನಿಕರು ಸರಿಪಡಿಸುವಂತೆ ಮನವಿ ಮಾಡಿಕೊಂಡ್ರು ಅಧಿಕಾರಿಗಳು ಅದ್ಯಾಕೋ ತಲೆಕೆಡಿಸಿಕೊಳ್ಳುತ್ತಿಲ್ಲವೆ. ಹೀಗಾಗಿ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.

ತುಮಕೂರಿನಿಂದ ಕುಣಿಗಲ್ ಕಡೆಗೆ ಹೋಗುವ ರಸ್ತೆಯು ಗುಂಡಿಮಯವಾಗಿದ್ದು, ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಶಾಲಾ-ಕಾಲೇಜು ಮಕ್ಕಳು ಕೂಡ ಇದೇ ರಸ್ತೆಯಲ್ಲಿ ಹೋಗಲು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಅಲ್ದೇ, ಇದೇ ರಸ್ತೆಯಲ್ಲಿ ದಿನನಿತ್ಯ ಶಾಸಕ ಜ್ಯೋತಿಗಣೇಶ್ ಅವ್ರು ತಮ್ಮ ಮನೆಗೆ ಇದೇ ರಸ್ತೆಯಲ್ಲಿಯೇ ಹೋಗಬೇಕು. ಜೊತೆಗೆ ಗೃಹ ಸಚಿವ ಪರಮೇಶ್ವರ್ ಅವರ ಶಿಕ್ಷಣ ಸಂಸ್ಥೆಗೂ ಇದೇ ರಸ್ತೆಯಲ್ಲೇ ಹೋಗ್ಬೇಕು. ಆದ್ರೆ, ಕಳೆದ 6 ತಿಂಗಳಿನಿಂದ ಇದೇ ಸಮಸ್ಯೆ ಇದ್ರೂ ಶಾಸಕರು ಹಾಗೂ ಗೃಹಸಚಿವರು ಇತ್ತ ಗಮನಹರಿಸದೆ ಜಾಣ ಕುರುಡುತನ ತೋರುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.

ಇನ್ನು ಈ ರಸ್ತೆಯಲ್ಲಿ ನೂರಾರು ಗುಂಡಿಗಳು ಬಿದ್ದಿದ್ದು, ನಿತ್ಯ ಅಪಘಾತಗಳು ಸಂಭವಿಸ್ತಾ ಇದ್ದು, ಸವಾರರು ಗುಂಡಿಗಳಲ್ಲಿ ಎದ್ದು ಬಿದ್ದು ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ. ಅಲ್ದೇ ಈ ರಸ್ತೆಯಲ್ಲಿ ಎಂಪಿ, ಎಂಎಲ್ ಎ ಗಳು ಸೇರಿದಂತೆ ಅಧಿಕಾರಿಗಳು ಇದೇ ರಸ್ತೆಯಲ್ಲಿ ಸಂಚರಿಸ್ತಾರೆ, ಆದ್ರೆ ಯಾರೋಬ್ಬ ಅಧಿಕಾರಿಗಳು ಇದ್ರ ಬಗ್ಗೆ ಗಮನಹರಿಸಲ್ಲ. ಅವ್ರೇನು ಕಣ್ಮುಚ್ಚಿ ಕುಳಿತಿದ್ದಾರೆ. ಮೇಯಿನ್ ಸರ್ಕಲ್ ಅಲ್ಲೇ ಇದೇ ರೀತಿ ಆದ್ರೆ, ಬೇರೆ ಕಡೆ ಇವರು ಏನ್ ಕೆಲ್ಸ ಮಾಡ್ತಾರೆ ಅಂತ ಸಾರ್ವಜನಿಕರೊಬ್ರು ಅಕ್ರೋಶ ವ್ಯಕ್ತಪಡಿಸಿದ್ರು.
ಇನ್ನಾದ್ರೂ ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಗುಂಡಿ ಸಮಸ್ಯೆಗೆ ಮುಕ್ತಿ ನೀಡಬೇಕಾಗಿದೆ. ಇಲ್ಲವಾದಲ್ಲಿ ಮುಂದೆ ಆಗುವ ಅನಾಹುತಗಳಿಗೆ ನೇರ ಹೊಣೆಗಾರರು ನೀವುಗಳೇ ಆಗ್ತಿರಾ




