
ಬೇಕಾಗುವ ಪದಾರ್ಥಗಳು:
- ಮೊಟ್ಟೆ – 4
- ಈರುಳ್ಳಿ – 1 (ಸಣ್ಣಗೆ ಕತ್ತರಿಸಿದುದು)
- ಕ್ಯಾರೆಟ್ – 1 (ಸಣ್ಣಗೆ ಕತ್ತರಿಸಿದುದು)
- ಬೀನ್ಸ್ – 5 (ಸಣ್ಣಗೆ ಕತ್ತರಿಸಿದುದು)
- ಹಸಿಮೆಣಸಿನಕಾಯಿ – 3
- ಕ್ಯಾಪ್ಸಿಕಂ – ½
- ಕೊತ್ತಂಬರಿ ಸೊಪ್ಪು – ಸ್ವಲ್ಪ
- ಶುಂಠಿ-ಬೆಳ್ಳುಳ್ಳಿ ಪೇಸ್ಟ್ – ಸ್ವಲ್ಪ
- ಅರಿಶಿಣ ಪುಡಿ – ½ ಚಮಚ
- ಕರಿಬೇವಿನ ಸೊಪ್ಪು – ಸ್ವಲ್ಪ
- ಪೆಪ್ಪರ್ ಪುಡಿ – ½ ಚಮಚ
- ಎಣ್ಣೆ – ಸ್ವಲ್ಪ
- ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
1️⃣ ಮೊದಲು ಈರುಳ್ಳಿ, ಕ್ಯಾರೆಟ್, ಬೀನ್ಸ್, ಕ್ಯಾಪ್ಸಿಕಂ, ಕೊತ್ತಂಬರಿ ಸೊಪ್ಪು ಮತ್ತು ಹಸಿಮೆಣಸಿನಕಾಯಿಗಳನ್ನು ಸಣ್ಣಗೆ ಕತ್ತರಿಸಿಕೊಳ್ಳಿ.
2️⃣ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ, ಕಾದ ನಂತರ ಹಸಿಮೆಣಸಿನಕಾಯಿ, ಕರಿಬೇವು, ಕ್ಯಾಪ್ಸಿಕಂ, ಈರುಳ್ಳಿ, ಕ್ಯಾರೆಟ್ ಮತ್ತು ಬೀನ್ಸ್ ಹಾಕಿ ಕೆಂಪಗೆ ಹುರಿದುಕೊಳ್ಳಿ.
3️⃣ ನಂತರ ಕೊತ್ತಂಬರಿ ಸೊಪ್ಪು, ಪೆಪ್ಪರ್ ಪುಡಿ, ಅರಿಶಿಣ ಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಫ್ರೈ ಮಾಡಿ.
4️⃣ ಮಿಶ್ರಣ ತಣ್ಣಗಾದ ನಂತರ ಅದಕ್ಕೆ ಮೊಟ್ಟೆಗಳನ್ನು ಒಡೆದು ಹಾಕಿ, ಉಪ್ಪು ಸೇರಿಸಿ ಚೆನ್ನಾಗಿ ಕಲೆಸಿಕೊಳ್ಳಿ.
5️⃣ ಈಗ ಫ್ರೈ ಪ್ಯಾನ್ನ್ನು ಕಾದು ಎಣ್ಣೆ ಸವರಿ. ಮೊಟ್ಟೆ ಮಿಶ್ರಣವನ್ನು ಹಾಕಿ ದೋಸೆ ರೀತಿ ಹರಡಿ.
6️⃣ ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ ಒಂದು ಬದಿಯನ್ನು ಚೆನ್ನಾಗಿ ಬೇಯಿಸಿ. ನಂತರ ಮಗುಚಿ ಇನ್ನೊಂದು ಬದಿಯನ್ನೂ ಬೇಯಿಸಿ.
👉 ಹೀಗೆ, ರುಚಿಕರವಾದ ವೆಜಿಟೇಬಲ್ ಎಗ್ ಆಮ್ಲೆಟ್ ಸವಿಯಲು ಸಿದ್ಧ! 🍳




