Chikkamagaluru : ಸ್ನೇಹಿತನ ಮದುವೆಗೆ ಬಂದಿದ್ದ ಯುವಕ ಭದ್ರಾ ನದಿಯಲ್ಲಿ ಮುಳುಗಿ ಸಾವು.

ಸ್ನೇಹಿತನ ಮದುವೆಗೆ ಬಂದಿದ್ದ ಯುವಕನೊಬ್ಬ ಭದ್ರಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ದುರ್ಘಟನೆ Chikkamagaluru ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬನ್ನೂರು ಗ್ರಾಮದಲ್ಲಿ ನಡೆದಿದೆ. ಮೃತನನ್ನು ಗದಗ ಮೂಲದ 27 ವರ್ಷದ ಅಭಿಷೇಕ್ ಎಂದು ಗುರುತಿಸಲಾಗಿದೆ. ಬನ್ನೂರು ಸಮೀಪದ ಭದ್ರಾ ರೆಸಾರ್ಟ್ನಲ್ಲಿ ಆತ ತಂಗಿದ್ದ.
ಅಭಿಷೇಕ್ ಮೃತದೇಹ ಪತ್ತೆ
ನದಿಯಲ್ಲಿ ಈಜುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಅಭಿಷೇಕ್ ನಾಪತ್ತೆಯಾಗಿದ್ದರು. ಅಭಿಷೇಕ್ ನೀರಿನಲ್ಲಿ ಮುಳುಗಿ ನಾಪತ್ತೆಯಾದ ಬಗ್ಗೆ ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ್ರು. ತಕ್ಷಣ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಅಭಿಷೇಕ್ಗಾಗಿ ಹುಡುಕಾಟ ನಡೆಸಿದ್ರು. ಗಂಟೆಗಳ ಕಾಲ ಶೋಧ ಕಾರ್ಯಾಚರಣೆಯ ನಂತರ, ಬನ್ನೂರು ಗ್ರಾಮದ ಸಮೀಪದ ನದಿಯಲ್ಲಿ ಅಭಿಷೇಕ್ ಮೃತದೇಹ ಪತ್ತೆಯಾಗಿದೆ.
READ THIS : ಕಾವೇರಿದ ಬಾಗಲಕೋಟೆ ಉಪ ಚುನಾವಣೆ ಪ್ರಚಾರ – ಬೊಮ್ಮಾಯಿ & ಕಾಂಗ್ರೆಸ್ ನಡುವೆ ವಾಗ್ವಾದ

ಪ್ರಕರಣ ದಾಖಲು
ಈ ಘಟನೆ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ. ಇನ್ನು ಮದುವೆ ಸಂಭ್ರಮದಲ್ಲಿದ್ದ ಸ್ನೇಹಿತರು ಅಭಿಷೇಕ್ ಮೃತದೇಹ ಕಂಡು ಕಣ್ಣೀರು ಹಾಕಿದ್ದಾರೆ.

MUST WATCH : TUMAKURU | AUTO ಚಾಲಕರೇ ಇಲ್ನೋಡಿ ಆಟೋಗಳಿಗೆ ಎಷ್ಟು ಗ್ಯಾಸ್ ಕೊಡ್ತಾ ಇದ್ದಾರೆ




