
ಸರ್ಕಾರಿ ಆಸ್ಪತ್ರೆಗಳಲ್ಲಿ ಬಡ ರೋಗಿಗಳಿಗೆ ಸಿಗಬೇಕಾದ ರಾಶಿ ರಾಶಿ ಔಷಧಿಗಳು ಗೋಡೌನ್ನಲ್ಲಿ ಕೊಳೆಯುತ್ತಿದ್ದು, ಬಡವರು ಟ್ರೀಟ್ಮೆಂಟ್ಗಾಗಿ ಅಲೆಯುವಂತಾಗಿದೆ. ಅಲ್ದೇ ಸರ್ಕಾರಿ ಆಸ್ಪತ್ರೆಯಲ್ಲಿ ಔಷದಿಗಳು ಇಲ್ಲದಿರೋದ್ರಿಂದ ಬಡ ರೋಗಿಗಳು ದುಪ್ಪಟ್ಟು ಹಣ ಕೊಟ್ಟು ಖಾಸಗಿ ಆಸ್ಪತ್ರೆಯಲ್ಲಿ ಔಷಧಿ ಪಡೆದುಕೊಳ್ಳುವ ಅನಿವಾರ್ಯತೆ ಎದುರಾಗಿದೆ.
ಪಾವಗಡ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ನಿತ್ಯ ತಾಲೂಕಿನ ಹಲವು ಹಳ್ಳಿಗಳಿಂದ ರೋಗಿಗಳು ಚಿಕಿತ್ಸೆಗೆಂದು ಬರ್ತಾರೆ. ಆದ್ರೆ ಪಾವಗಡ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಬಡವರಿಗೆ ಸೇರಬೇಕಾದ ರಾಶಿ ರಾಶಿ ಔಷಧಿಗಳು ಗೋಡೌನ್ ನಲ್ಲಿ ಕೊಳೆಯುತ್ತಿದ್ದು, ಸರಿಯಾಗಿ ಚಿಕಿತ್ಸೆ ಸಿಗದ ಕಾರಣ ರೋಗಿಗಳು ಅನಿವಾರ್ಯವಾಗಿ ತುಮಕೂರು, ಬೆಂಗಳೂರಿಗೆ ತೆರಳುವ ಅನಿವಾರ್ಯತೆ ಎದುರಾಗಿದೆ.

ಇನ್ನು ಬಡ ರೋಗಿಗಳಿಗೆ ಸರ್ಕಾರ ಕೋಟಿ ಕೋಟಿ ವೆಚ್ಚದಲ್ಲಿ ಔಷಧಿಗಳನ್ನು ಖರೀದಿಸುತ್ತೆ. ಆದ್ರೆ ಬಡ ರೋಗಿಗಳಿಗೆ ಸಿಗಬೇಕಾದ ಔಷಧಿಗಳನ್ನು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಪ್ಯಾಕೇಟ್ ಓಪನ್ ಆಗದೇ ಇರೋ ಔಷಧಿಗಳು ಗೋಡೌನ್ನಲ್ಲಿ ಕೊಳೆಯುವಂತಾಗಿದ್ದು, ಬಡ ರೋಗಿಗಳ ಜೊತೆ ಅಧಿಕಾರಿಗಳು ಚೆಲ್ಲಾಟ ಆಡ್ತಾ ಇದ್ದಾರಾ ಎಂಬ ಪ್ರಶ್ನೆ ಎದ್ದಿದೆ. ಕೂಡಲೇ ಈ ಬಗ್ಗೆ ಉನ್ನತ ಅಧಿಕಾರಿಗಳು ಇತ್ತ ಗಮನ ಹರಿಸಿ, ಗೋಡೌನ್ನಲ್ಲಿ ಕೊಳೆಯುತ್ತಿರೋ ಔಷಧಿಗಳ ಬಗ್ಗೆ ಸಂಪೂರ್ಣ ತನಿಖೆ ಮಾಡಿ ಬಡ ರೋಗಿಗಳಿಗೆ ಔಷಧಿ ಸಿಗುವಂತಾಗಲಿ ಎಂಬುದು ಪ್ರಜಾಶಕ್ತಿ ಟಿವಿಯ ಕಳಕಳಿಯಾಗಿದೆ.




