
MADHUGIRI THEFT : ಮದ್ಯರಾತ್ರಿ ಆಗಿತ್ತು… ಇಡೀ ಗ್ರಾಮದ ಎಲ್ಲರೂ ಗಾಢ ನಿದ್ರೆಗೆ ಜಾರಿದ್ರು… ಇದನ್ನು ಅರಿತ ಖತರ್ನಾಕ್ ಕಳ್ಳರ ಗ್ಯಾಂಗ್ ಏಕಕಾಲದಲ್ಲಿ ಗ್ರಾಮದ ಎರಡು ದೇವಸ್ಥಾನಗಳಿಗೆ ಕನ್ನ ಹಾಕಲು ಯತ್ನಿಸಿ ವಿಫಲವಾಗಿರೋ ಘಟನೆ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮೈದನಹಳ್ಳಿ ನಡೆದಿದೆ.
ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿಯ ಹೋಬಳಿಯ ಮೈದನಹಳ್ಳಿ ಗ್ರಾಮದಲ್ಲಿರೋ ಸಾಯಿಬಾಬ ಮಂದಿರ ಹಾಗೂ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಕಳ್ಳರ ಗ್ಯಾಂಗ್ ಕೈಚಳಕ ತೋರಿಸಿದ್ದಾರೆ. ಮಧ್ಯರಾತ್ರಿ ಎರಡೂವರೆ ಗಂಟೆ ಸುಮಾರಿಗೆ ಆಂಜನೇಯ ದೇಗುಲದ ಬಾಗಿಲು ಮುರಿದು, ದೇವಸ್ಥಾನದಲ್ಲಿದ್ದ ಹುಂಡಿಯಲ್ಲಿದ್ದ ದುಡ್ಡನ್ನ ದೋಚಿದ್ದಾರೆ. ಬಳಿಕ ಆಂಜನೇಯ ಸ್ವಾಮಿ ದೇಗುಲದ ಪಕ್ಕದ ಸಾಯಿಬಾಬ ಮಂದಿರದ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿದ್ದಾರೆ. ದೇಗುಲದ ಬೋಲ್ಟ್ಗಳನ್ನು ಬಿಚ್ಚಲು ಕಳ್ಳರು ಯತ್ನಿಸಿದ್ದು, ದೇವಸ್ಥಾನದ ಮುಂಭಾಗದಲ್ಲಿದ್ದ ಮನೆಯ ರಾಮಂಜಪ್ಪ ದೇವಸ್ಥಾನದ ಬಳಿ ಸದ್ದು ಕೇಳಿ ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಜನರು ದೌಡಾಯಿಸ್ತಾ ಇದ್ದಂತೆ ಕಳ್ಳರು ಕಾಲ್ಕಿತ್ತಿದ್ದಾರೆ. ಗ್ರಾಮದಲ್ಲಿ ಕಳ್ಳತನ ಪ್ರಕರಣದಿಂದ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಇನ್ನು ಸ್ಥಳಕ್ಕೆ ಪಿಎಸೈ ಶ್ರೀನಿವಾಸ್ ಪ್ರಸಾದ್ ಭೇಟಿ ನೀಟಿ ಪರಿಶೀಲನೆ ನಡೆಸಿದ್ದಾರೆ. ಕಳ್ಳರ ಎರಡು ಜೊತೆ ಚಪ್ಪಲಿ ಸಿಕ್ಕಿದ್ದು, ಸಿಸಿ ಕ್ಯಾಮೆರಾ ದೃಶ್ಯಾವಳಿಯನ್ನು ಆಧರಿಸಿ ಕಳ್ಳರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.





