
Age limit Relaxation For Police Posts : ರಾಜ್ಯದಲ್ಲಿ ಪೊಲೀಸ್ ನೇಮಕಾತಿಗೆ ಸಂಬಂಧಿಸಿದಂತೆ ಉದ್ಯೋಗಕಾಂಕ್ಷಿಗಳ ಬೃಹತ್ ಪ್ರತಿಭಟನೆಗಳ ಬೆನ್ನಲ್ಲೇ, ಕರ್ನಾಟಕ ಸರ್ಕಾರವು ವಯೋಮಿತಿ ಸಡಿಲಿಕೆಯ ವಿಷಯದಲ್ಲಿ ಸ್ಪಷ್ಟ ನಿರ್ಧಾರ ತೆಗೆದುಕೊಂಡಿದೆ. ಪೊಲೀಸ್ ಕಾನ್ಸ್ಟೇಬಲ್ ಮತ್ತು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗಾಗಿ ವಯೋಮಿತಿ ಸಡಿಲಿಕೆಯ ಪ್ರಸ್ತಾವನೆ ಈಗ ಸಿದ್ಧಗೊಂಡಿದೆ.
ಇನ್ನು ಸರ್ಕಾರ ಯಾವ ಯಾವ ಹುದ್ದೆಗಳಲ್ಲಿ ಎಷ್ಟು ವಯೋಮಿತಿ ಸಡಿಲಿಕೆ ನೀಡಲಿದೆ ಎಂಬ ವಿವರಗಳು ಹೀಗಿವೆ:
· ಪೊಲೀಸ್ ಕಾನಸ್ಟೇಬಲ್:
- ಪ್ರಸ್ತುತ ವಯೋಮಿತಿ:
- SC, ST, OBC: 27 ವರ್ಷ
- ಇತರೆ ಅಭ್ಯರ್ಥಿಗಳು: 25 ವರ್ಷ
- ವಯೋಮಿತಿ ಸಡಿಲಿಕೆ ನಂತರ:
- SC, ST, OBC: 30 ವರ್ಷ
- ಇತರೆ ಅಭ್ಯರ್ಥಿಗಳು: 28 ವರ್ಷ
· ಪೊಲೀಸ್ ಸಬ್ ಇನ್ಸ್ಪೆಕ್ಟರ್ (PSI):
- ಪ್ರಸ್ತುತ ವಯೋಮಿತಿ:
- SC, ST, OBC: 30 ವರ್ಷ
- ಇತರೆ ಅಭ್ಯರ್ಥಿಗಳು: 28 ವರ್ಷ
- ವಯೋಮಿತಿ ಸಡಿಲಿಕೆ ನಂತರ:
- SC, ST, OBC: 32 ವರ್ಷ
- ಇತರೆ ಅಭ್ಯರ್ಥಿಗಳು: 30 ವರ್ಷ
ಒಟ್ಟಿನಲ್ಲಿ ಕೊನೆಗೂ ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಹೋರಾಟ ಹಾಗೂ ಪ್ರತಿಭಟನೆಗಳಿಗೆ ಸ್ಪಂದಿಸಿದ್ದು, ತ್ವರಿತವಾಗಿ ಖಾಲಿ ಇರುವ ಹುದ್ದೆಗಳನ್ನು ನೇಮಕಾತಿ ಮಾಡಲು ಈ ವಯೋಮಿತಿ ಸಡಿಲಿಕೆ ಪ್ರಸ್ತಾವನೆಯನ್ನು ಸಿದ್ಧಪಡಿಸಿದೆ. ಹೀಗಾಗಿ, ಪೊಲೀಸ್ ಆಕಾಂಕ್ಷಿಗಳಿಗೆ ಹೊಸ ಅವಕಾಶ ಸಿಗಲಿದೆ.




