
ಅದ್ಯಾಕೋ ಕಾಲ ಕೆಟ್ಟು ಹೋಗಿದೆ ಕಂಡ್ರಿ… ಮದುವೆ ಆಗಿ ಮನೆಯಲ್ಲಿ ಸಂಗಾತಿ ಇದ್ರು ಕೂಡ ಅಕ್ರಮ ಸಂಬಂಧವನ್ನು ಇಟ್ಟುಕೊಳ್ಳುತ್ತಿದ್ದಾರೆ.. ಕಟ್ಟಿಕೊಂಡವರಿಗಿಂತಲೂ ಅವರಿಗೆ ಇಟ್ಟುಕೊಂಡವರೇ ಹೆಚ್ಚಾಗಿ ಹೋಗಿಬಿಟ್ಟಿದ್ದಾರೆ. ಮದುವೆ ಆಗಿ ಸಾಕಷ್ಟು ವರ್ಷ ಸಂಸಾರ ಮಾಡಿ, ವಯಸ್ಸಾದ ಕಾಲದಲ್ಲಿ ಮತ್ತೊಬ್ಬರ ಮೋಹಕ್ಕೆ ಬೀಳುತ್ತಿದ್ದಾರೆ. ಮನೆಯವರಿಗಿಂತಲೂ ಅಕ್ರಮ ಸಂಬಂಧ ಇಟ್ಟುಕೊಂಡವರೇ ಹೆಚ್ಚಾಗಿದ್ದು, ಇಟ್ಟುಕೊಂಡವರಿಗಾಗಿ ಯಾವ ಮಟ್ಟಕ್ಕೆ ಬೇಕಾದ್ರು ಹೋಗ್ತಾ ಇದ್ದಾರೆ. ಹೌದು ಗಂಡ ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿ ಆಗ್ತಾನೆ ಅಂತಾ ಪ್ರಿಯಕರನ ಜೊತೆ ಸೇರಿಕೊಂಡು ಖತರ್ನಾಕ್ ಪ್ಲಾನ್ ಮಾಡಿ ಗಂಡನನ್ನೇ ಮುಗಿಸಿದ್ದು, ಗಂಡ ಕಾಣೆ ಆಗಿದ್ದಾನೆ ಎಂದು ಕಥೆ ಕಟ್ಟಿದ್ದ ಕಿಲಾಡಿ ಲೇಡಿ ಅಂದರ್ ಆಗಿದ್ದಾಳೆ.
ಮಣ್ಣಲ್ಲಿ ಹೂತಿಟ್ಟ ಹೆಣದ ಸ್ಪಾಟ್ ತನಿಖೆ ಮಾಡ್ತಿರೋ ಪೊಲೀಸರು. ಮತ್ತೊಂದು ಕಡೆ ಆರೋಪಿಗಳ ಸ್ಥಳ ಮಹಜರು ನಡೆಸುತ್ತಿರೋ ಖಾಕಿ. ಇನ್ನೊಂದು ಏನೋ ನಡೆಯ ಬಾರದ್ದು ನಡೆದಿದೆ ಅಂತ ಆತಂಕದಲ್ಲೇ ನೋಡ್ತಾ ಇರೋ ಜನರು. ಈ ದೃಶ್ಯಗಳು ಕಂಡು ಬಂದಿದ್ದು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಆಂದ್ರ ಗಡಿಯಂಚಿನ ಮದ್ದಿಹಳ್ಳಿ ಗೊಲ್ಲರಹಟ್ಟಿ ಗ್ರಾಮದಲ್ಲಿ. ಹೀಗೆ ಅಮಾಯಕರಂತೆ ಫೋಸ್ ಕೊಡ್ತಾ ಇರೋರ ಹೆಸರು ಮೂರ್ತಿ ಹಾಗೂ ಮಮತ ಅಂತಾ… ಇಬ್ಬರು ಅಕ್ರಮ ಸಂಬಂಧದಲ್ಲಿ ಇದ್ದು, ಅಕ್ರಮ ಸಂಬಂಧಕ್ಕೆ ಗಂಡ ಅಡ್ಡಿ ಆಗ್ತಾನೆ ಅಂತಾ ಗಂಡನಿಗೆ ಚಟ್ಟ ಕಟ್ಟಲು ಮೂಹೂರ್ತ ಇಟ್ಟಿದ್ದು, ಪ್ರಿಯಕರನ ಜೊತೆ ಸೇರಿ ಕೊನೆಗೆ ಕೊಲೆಯೇ ಮಾಡಿ, ಗಂಡ ಮಿಸ್ಸಿಂಗ್ ಆಗಿದ್ದಾನೆ ಅಂತಾ ಐನಾತಿ ಹೆಂಡ್ತಿ ಕಥೆ ಕಟ್ಟಿದ್ಳು.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಮದ್ದಿಹಳ್ಳು ಗೊಲ್ಲರಹಟ್ಟಿ ಗ್ರಾಮದವರಾದ ಬಾಲಣ್ಣ ಎಂಬುವವರು ಮಮತಾ ಮದುವೆ ಆಗಿ, ಸುಂದರ ಸಂಸಾರ ಮಾಡ್ತಾ ಇದ್ರು. ಇವರಿಬ್ಬರಿಗೂ ಮಕ್ಕಳು ಕೂಡ ಇದ್ದು, ಅದ್ಯಾಕೋ ಮಮತಾಗೆ ಆಂದ್ರದ ಸತ್ಯಸಾಯಿ ಜಿಲ್ಲೆಯ ಹಿರೇತಿರುಪೆ ಗ್ರಾಮದ ಮೂರ್ತಿ ಮೇಲೆ ಲವ್ ಆಗಿದ್ದು, ಇಬ್ಬರು ಸುಮಾರು 8 ವರ್ಷದಿಂದ ಅಕ್ರಮ ಸಂಬಂಧದಲ್ಲಿ ಇರ್ತಾರೆ. ಇವರಿಬ್ಬರ ಅಕ್ರಮ ಸಂಬಂಧ ವಿಚಾರವಾಗಿ ಗಂಡ- ಹೆಂಡ್ತಿ ಮದ್ಯೆ ಕಳೆದ ಒಂದು ತಿಂಗಳ ಹಿಂದಷ್ಟೆ ಗಲಾಟೆಯೂ ಆಗ್ತಾ ಇತ್ತಂತೆ.,ಕೊನೆಗೆ ಅಕ್ರಮ ಸಂಬಂಧಕ್ಕೆ ಗಂಡ ಅಡ್ಡ ಆಗ್ತಾನೆ ಅಂತಾ ಯೋಚಿಸಿದ ಪತ್ನಿ ಮಮತಾ, ಗಂಡ ಬಾಲಣ್ಣನ ಕೊಲೆಗೆ ಮುಹೂರ್ತ ಇಟ್ಟೇ ಬಿಟ್ಟಿದ್ಲು. ಕಳೆದ ಶನಿವಾರ ಮಧ್ಯರಾತ್ರಿ ಬಾಲಣ್ಣ ಮನೆ ಮುಂದೆ ಚಾಪೆ ಮೇಲೆ ಮಲಗಿದ್ದ. ಗಂಡನ ಕೊಲೆಗೆ ಸಂಚು ಹಾಕಿ ಕೂತಿದ್ದ ಪತ್ನಿ ಮಮತಾ ಹಾಗೂ ಪ್ರಿಯಕರ ಮೂರ್ತಿ ಅದೇ ರಾತ್ರಿ ಬಾಲಣ್ಣ ಮೇಲೆ ಏಕಾಏಕಿ ಕಬ್ಬಿಣದ ರಾಡ್ನಿಂದ ಹೊಡೆದು ಹತ್ಯೆ ಮಾಡಿದ್ದಾರೆ. ಅಲ್ದೇ ಅಲ್ದೆ ಅಂದೇ ರಾತ್ರಿ ತನ್ನದೇ ತೋಟದಲ್ಲಿ ಗುಂಡಿ ತೋಡಿ ಮಣ್ಣಾಕಿ ಮುಚ್ಚಿ ಬಿಟ್ಟಿದ್ರು.
ಪ್ರಿಯಕರನ ಜೊತೆ ಸೇರಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ ಹೆಂಡ್ತಿ ಬೆಳಗ್ಗೆ ಗಂಡ ಮಿಸ್ಸಿಂಗ್ ಆಗಿದ್ದಾನೆ ಅಂತಾ ಊರ್ ತುಂಬಾ ಪುಕಾರು ಎಬ್ಬಿಸಿಬಿಟ್ಳು… ಅಷ್ಟೇ ಅಲ್ದೆ ಬಾವಿ ಕೆರೆ ಕಟ್ಟೆ ಅಂತ ಹುಡುಕಿಸೋಕೆ ಶುರು ಮಾಡಿದ್ಲು. ಇತ್ತ ಸಂಬಂಧಿಕರ ಜೊತೆ ಸೇರಿ ಅಬ್ಬಿನಹೊಳೆ ಠಾಣೆಯಲ್ಲಿ ಖುದ್ದ ಪತ್ನಿ ಮಮತ ಹೋಗಿ ಮಿಸ್ಸಿಂಗ್ ಅಂತ ಕಂಪ್ಲೇಂಟ್ ಕೂಡ ಕೊಟ್ಟಿದಳು. ಮಿಸ್ಸಿಂಗ್ ಕೇಸ್ ದಾಖಲಿಸಿಕೊಂಡ ಪೊಲೀಸರು, ತಮ್ಮದೇ ಸ್ಟೈಲ್ ನಲ್ಲಿ ತನಿಖೆ ಶುರು ಮಾಡಿದ್ದು, ಕೊಲೆ ರಹಸ್ಯ ಒಂದೊಂದಾಗಿ ಐನಾತಿ ಪತ್ನಿ ಮಮತಾ ಬಾಯ್ಬಿಟ್ಟಿದ್ದಾಳೆ.
ಇನ್ನೂ ಸ್ಥಳಕ್ಕೆ ಸುಕೋ ಟೀಂ ಕೂಡಾ ಭೇಟಿ ನೀಡಿ, ಸಾಕ್ಷ್ಯ ಕಲೆ ಹಾಕಿದ್ದು, ಈ ಸಂಬಂಧ ಅಬ್ಬಿನಹೊಳೆ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಒಟ್ಟಾರೆ ಇಟ್ಕೊಂಡವನ ಪ್ರೀತಿಗಾಗಿ ತಾಳಿ ಕಟ್ಟಿದ ಗಂಡನನ್ನೇ ಹತ್ಯೆ ಮಾಡಿ, ಚಟ್ಟ ಕಟ್ಟಿದ್ದ ಖತನಾರ್ಕ್ ಲೇಡಿಯ ಬಣ್ಣ ಬಟಾ ಬಯಲಾಗಿದೆ. ಆದರೆ ಇತ್ತ ಅಪ್ಪ ಮಣ್ಣು ಸೇರಿದ್ದು, ತಾಯಿ ಜೈಲು ಸೇರಿದ್ದು ಮಕ್ಕಳು ಮಾತ್ರ ಅನಾಥವಾಗಿದ್ದು ಮಾತ್ರ ದುರಂತವೇ ಸರಿ.




