
: ಹೈವೇಲಿ ನೈಟ್ ಟೈಂ ಟ್ರಾವೆಲ್ ಮಾಡ್ತಾ ಇರೋರೇ ಹುಷಾರ್.. ಹುಷಾರ್… ಯಾಕೆಂದ್ರೆ ಸದ್ದಿಲ್ಲದೇ ರಾಬರಿ ಗ್ಯಾಂಗ್ ಆಕ್ಟಿವ್ ಆಗಿದ್ದು, ರಸ್ತೆ ಮಧ್ಯೆ ಗಾಡಿಯನ್ನು ಅಡ್ಡಗಟ್ಟಿ ದೋಚಿ ಎಸ್ಕೇಪ್ ಆಗ್ತಾರೆ… ಅಷ್ಟೇ ಅಲ್ಲದೇ ಮಾರಕಾಸ್ತ್ರದಿಂದ ಹಲ್ಲೆ ಮಾಡಲು ಮುಂದಾಗಿದ್ದಾರೆ.

ದೊಡ್ಡಬಳ್ಳಾಪುರ ಹಾಗೂ ನೆಲಮಂಗಲ ಹೈವೇಯಲ್ಲಿ ಇತ್ತೀಚಿನ ದಿನಗಳಲ್ಲಿ ರಾಬರಿ ಗ್ಯಾಂಗ್ ಆಕ್ಟಿವ್ ಆಗಿದ್ದಾರೆ. ನೆಲಮಂಗಲದ ದಾಸರಯ್ಯನಪುರ ಮಾರುಕಟ್ಟೆಗೆ ಡ್ರೈವರ್ ಮುತ್ತುರಾಜು ತರಕಾರಿ ಸಾಗಿಸುತ್ತಿದ್ದರು. ಈ ವೇಳೆ ತರಕಾರಿ ಸಾಗಿಸ್ತಿದ್ದ ಗಾಡಿಯನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದರು. ಈ ವೇಳೆ ಆಟೋದಲ್ಲಿ ಬಂದ 6 ಜನ ರೌಡಿಗಳ ಗುಂಪು ಮಾರಕಾಸ್ತ್ರಗಳಿಂದ ಮುತ್ತುರಾಜು ಮತ್ತು ವಾಹನ ಸವಾರ ಯಶ್ವಂತ್ ಮೇಲೆ ಹಲ್ಲೆ ನಡೆಸಿ, ಅವರ ಬಳಿ ಇದ್ದ 75 ಸಾವಿರ ಹಣ, ಮೊಬೈಲ್ ದೋಚಿ ಪರಾರಿಯಾಗಿದ್ದಾರೆ.
ಇನ್ನು ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ರೌಡಿಗಳಿಗಾಗಿ ಬಲೆ ಬೀಸಿದ್ದಾರೆ.




