ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯಿಂದ SSLC ಫಲಿತಾಂಶ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದೆ.

ಕರ್ನಾಟಕದ ಲಕ್ಷಾಂತರ 10ನೇ ತರಗತಿ (SSLC) ವಿದ್ಯಾರ್ಥಿಗಳ ತಿಂಗಳುಗಳ ಕಾಯುವಿಕೆ ಈಗ ಅಂತಿಮ ಹಂತಕ್ಕೆ ತಲುಪಿದೆ. ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾತರದಿಂದ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಶಿಕ್ಷಣ ಇಲಾಖೆಯಿಂದ ಶೀಘ್ರದಲ್ಲೇ ಸಿಹಿ ಸುದ್ದಿ ಸಿಗುವ ಲಕ್ಷಣಗಳು ಕಾಣಿಸುತ್ತಿವೆ.
ಫಲಿತಾಂಶ ಯಾವಾಗ?
ಎಸ್ಎಸ್ಎಲ್ಸಿ ಫಲಿತಾಂಶವು ಏಪ್ರಿಲ್ 23 ಅಥವಾ 24ರಂದು ಪ್ರಕಟವಾಗುವ ಸಾಧ್ಯತೆ ಇದೆ ಎಂಬ ಊಹೆಗಳು ಕೇಳಿಬರುತ್ತಿವೆ. ಆದರೆ ಕಳೆದ ಎರಡು ವರ್ಷಗಳ ಪ್ರವೃತ್ತಿಯನ್ನು ಗಮನಿಸಿದರೆ ಫಲಿತಾಂಶವು ಮೇ ಮೊದಲ ವಾರದಲ್ಲಿ, ವಿಶೇಷವಾಗಿ ಮೇ 9ರ ಸುತ್ತಮುತ್ತ ಪ್ರಕಟವಾಗಿರುವುದರಿಂದ, ಈ ವರ್ಷವೂ ಮೇ ಆರಂಭದಲ್ಲಿ ಫಲಿತಾಂಶ ಹೊರಬೀಳಬಹುದು ಎಂಬ ನಿರೀಕ್ಷೆ ಇದೆ.
ಶಿಕ್ಷಣ ಇಲಾಖೆ ಇನ್ನೂ ಅಧಿಕೃತ ದಿನಾಂಕವನ್ನು ಘೋಷಿಸಿಲ್ಲ. ಆದಾಗ್ಯೂ, ಏಪ್ರಿಲ್ ಅಂತ್ಯ ಅಥವಾ ಮೇ ಆರಂಭದಲ್ಲಿ ಫಲಿತಾಂಶ ಪ್ರಕಟವಾಗುವುದು ಬಹುತೇಕ ಖಚಿತವಾಗಿದೆ ಎಂದು ಹೇಳಲಾಗುತ್ತಿದೆ.
READ THIS : ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ – ನಟಿ Ranya Rao ಗೆ ಜಾಮೀನು

ರಿಸಲ್ಟ್ ಪರಿಶೀಲಿಸುವ ವಿಧಾನ
ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಆನ್ಲೈನ್ನಲ್ಲಿ ಸುಲಭವಾಗಿ ಪರಿಶೀಲಿಸಬಹುದು.
- ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ: karresults.nic.in ಅಥವಾ kseab.karnataka.gov.in
- ‘SSLC Result 2026’ ಲಿಂಕ್ ಮೇಲೆ ಕ್ಲಿಕ್ ಮಾಡಿ
- ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕ ನಮೂದಿಸಿ
- ‘Submit’ ಬಟನ್ ಒತ್ತಿ
- ಅಂಕಪಟ್ಟಿ ಪರದೆಯ ಮೇಲೆ ಕಾಣಿಸಿಕೊಳ್ಳುತ್ತದೆ – ಅದನ್ನು ಡೌನ್ಲೋಡ್ ಹಾಗೂ ಪ್ರಿಂಟ್ ಮಾಡಿಕೊಳ್ಳಬಹುದು
ಇದರ ಜೊತೆಗೆ ವಿದ್ಯಾರ್ಥಿಗಳು DigiLocker ಮತ್ತು KarnatakaOne ಆಪ್ ಮೂಲಕವೂ ಫಲಿತಾಂಶ ಪಡೆಯಬಹುದು.
ತೃತೀಯ ಭಾಷೆ ಅಂಕಗಳ ಕುರಿತು ವಿವಾದ
ಈ ಬಾರಿ ತೃತೀಯ ಭಾಷೆ (ವಿಶೇಷವಾಗಿ ಹಿಂದಿ) ವಿಷಯದಲ್ಲಿ ಗ್ರೇಡ್ ಬದಲು ಅಂಕ ನೀಡುವ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಈ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್ಗೆ ಪ್ರಕರಣ ಹೋಗಿತ್ತು. ವಿಚಾರಣೆ ಬಳಿಕ, ಮುಂದಿನ ವರ್ಷದಿಂದ (2025-26) ಈ ಬದಲಾವಣೆ ಜಾರಿಯಾಗಬೇಕು ಎಂದು ಕೋರ್ಟ್ ಸೂಚಿಸಿದೆ.
ಈ ಬಾರಿಯ ಫಲಿತಾಂಶ ಪ್ರಕ್ರಿಯೆಗೆ ಸಂಬಂಧಿಸಿದಂತೆ ಯಾವುದೇ ತಡೆ ಇಲ್ಲ ಎಂದು ತಿಳಿಸಲಾಗಿದೆ.

ಶಿಕ್ಷಣ ಸಚಿವರ ಸ್ಪಷ್ಟನೆ
ಫಲಿತಾಂಶ ವಿಳಂಬವಾಗಬಹುದು ಎಂಬ ಆತಂಕದ ನಡುವೆ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸ್ಪಷ್ಟನೆ ನೀಡಿದ್ದಾರೆ. “ಫಲಿತಾಂಶ ಪ್ರಕಟಣೆಗೆ ಯಾವುದೇ ತಾಂತ್ರಿಕ ಅಡ್ಡಿಯಿಲ್ಲ. ನಿಗದಿತ ವೇಳೆಯಲ್ಲೇ ಫಲಿತಾಂಶ ಪ್ರಕಟವಾಗಲಿದೆ” ಎಂದು ತಿಳಿಸಿದ್ದಾರೆ.
MUST WATCH : E.D ದಾಳಿ ಬಗ್ಗೆ ಸಚಿವ ಜಮೀರ್ ಅಹಮದ್ ಹೀಗ್ಯಾಂದ್ರು..?




