
ಚಿಕ್ಕನಾಯಕನಹಳ್ಳಿ ತಾಲೂಕು ತುಮಕೂರು ಜಿಲ್ಲೆಯ ಗಡಿ ತಾಲೂಕು ಹಾಗೂ ಬರದ ತಾಲೂಕಾಗಿದೆ. ಚಿಕ್ಕನಾಯಕನಹಳ್ಳಿ ಜಿಲ್ಲಾ ಕೇಂದ್ರದಿಂದ 100 ಕಿಲೋ ಮೀಟರ್ ದೂರದಲ್ಲಿದ್ದು, ಕ್ರೀಡಾಪಟುಗಳು ತರಭೇತಿಗಾಗಿ ಜಿಲ್ಲೆಗೆ ಬರಲು ಸಾಧ್ಯವಾಗೋದಿಲ್ಲ… ಹೀಗಾಗಿ ಕ್ರೀಡಾಪಟುಗಳಿಗಾಗಿ ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲೇ ಒಂದು ಕ್ರೀಡಾಂಗಣವನ್ನು ಕೂಡ ನಿರ್ಮಾಣ ಮಾಡಲಾಗಿದೆ. ಆದ್ರೆ ಆ ಕ್ರೀಡಾಂಗಣ ಮೂಲಭೂತ ಸೌಕರ್ಯದಿಂದ ವಂಚಿತವಾಗಿದ್ದು, ಕ್ರೀಡಾಪಟುಗಳು ಅಭ್ಯಾಸ ಮಾಡಲು ಸಂಕಷ್ಟ ಎದುರಾಗಿದೆ.

ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿರೋ ತಾಲೂಕು ಕ್ರೀಡಾಂಗಣವು ಮೂಲಭೂತ ಸೌಕರ್ಯದಿಂದ ವಂಚಿತವಾಗಿದೆ. ಈ ಕ್ರೀಡಾಂಗಣದಲ್ಲಿ ಹಲವು ಕಾರ್ಯಕ್ರಮಗಳು ನಡೆಯುತ್ತವೆ. ಜೊತೆಗೆ ಕ್ರೀಡಾಪಟುಗಳು ನಿತ್ಯ ಇಲ್ಲಿ ಅಭ್ಯಾಸ ಮಾಡಲು ಬರ್ತಾರೆ. ಆದ್ರೆ ಈ ಕ್ರೀಡಾಂಗಣದಲ್ಲಿ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರಾಕ್, ಶೌಚಾಲಯ, ಕುಡಿಯುವ ನೀರು, ಪ್ರೇಕ್ಷಕ ಗ್ಯಾಲರಿ, ಲೈಟಿಂಗ್ ವ್ಯವಸ್ಥೆ ಸೇರಿದಂತೆ ಹಲವು ಮೂಲಭೂತಗಳು ಇಲ್ಲವಾಗಿದ್ದು, ಅಭ್ಯಾಸಕ್ಕೆ ಬರುವ ಕ್ರೀಡಾಪಟುಗಳಿಗೆ ಸಾಕಷ್ಟು ತೊಂದ್ರೆ ಆಗ್ತಾ ಇದೆ.

ಇನ್ನು ಈ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡಿದ ಸಾಕಷ್ಟು ಮಂದಿ ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಸಾಧನೆ ಮಾಡಿದ್ದಾರೆ. ಅಂತಹ ಕ್ರೀಡಾಪಟುಗಳು ಅಭ್ಯಾಸ ಮಾಡಿದ ಕ್ರೀಡಾಂಗಣಕ್ಕೆ ಮೂಲಭೂತ ಸೌಕರ್ಯ ಒದಗಿಸಬೇಕಿದೆ. ಕ್ರೀಡಾಂಗಣದ ಸುತ್ತ ಫೆನ್ಸಿಂಗ್ ಇಲ್ಲದಿರೋದ್ರಿಂದ ಕುರಿ, ಮೇಕೆ, ಹಸುಗಳು ಸ್ಟೇಡಿಯಂ ಒಳಗೆ ನುಗ್ಗುತ್ತವೆ. ಇದ್ರಿಂದ ಅಭ್ಯಾಸ ಮಾಡಲು ಕಷ್ಟ ಆಗುತ್ತೆ ಎಂದು ಕ್ರೀಡಾ ತರಬೇತುದಾರರಾದ ಅಭಿಷೇಕ್ ಆಕ್ರೋಶ ಹೊರಹಾಕಿದ್ರು.ಇನ್ನು ಈ ಸ್ಟೇಡಿಯಂನಲ್ಲಿ ವಿದ್ಯಾರ್ಥಿಗಳು ನಿತ್ಯ ರನ್ನಿಂಗ್ ಪ್ರಾಕ್ಟಿಸ್ ಮಾಡ್ತಾ ಇದ್ದು, ರನ್ನಿಂಗ್ ಟ್ರ್ಯಾಕ್ ಇಲ್ಲವಾಗಿದೆ, ಇದ್ರಿಂದ ಮಳೆ ಬಂತು ಅಂದ್ರೆ ರನ್ನಿಂಗ್ ಪ್ರಾಕ್ಟಿಸ್ ಮಾಡಲು ಸಾದ್ಯವಾಗ್ತಾ ಇಲ್ಲ. ಕೂಡಲೇ ಈ ಕ್ರೀಡಾಂಗಣವನ್ನು ಅಭಿವೃದ್ಧಿ ಪಡಿಸಿ ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ರು.
ಒಟ್ನಲ್ಲಿ ಚಿಕ್ಕನಾಯಕನಹಳ್ಳಿ ಸ್ಟೇಡಿಯಂ ಮೂಲಭೂತ ಸೌಕರ್ಯದಿಂದ ವಂಚಿತರಾಗಿದ್ದು, ಕೂಡಲೇ ತಾಲೂಕು ಆಡಳಿತ ಎಚ್ಚೆತ್ತು ಕ್ರೀಡಾಂಗಣಕ್ಕೆ ಮೂಲಭೂತ ಸೌಕರ್ಯ ಒದಗಿಸಿಕೊಡಬೇಕಿದೆ.




