
ASIA CUP 2025 Field Controversy Case : ಯುಎಇನಲ್ಲಿ ನಡೆಯುತ್ತಿರುವ ಏಷ್ಯಾಕಪ್ 2025 ಟೂರ್ನಿಯಲ್ಲಿ ಶಿಸ್ತಿನ ಉಲಂಘನೆ ನಡೆದಿದ್ದು, ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಹಾಗೂ ಪಾಕಿಸ್ತಾನದ ವೇಗಿ ಹ್ಯಾರಿಸ್ ರೌಫ್ ಪಂದ್ಯದ ವೇಳೆ ಮಾತಿನ ಚಕಮಕಿ ಹಾಗೂ ಆಕ್ರಮಣಶೀಲ ವರ್ತನೆಗಾಗಿ, ಐಸಿಸಿ ನಿಯಮ ಉಲ್ಲಂಘನೆಯಡಿ ಇಬ್ಬರಿಗೂ ಪಂದ್ಯ ಶುಲ್ಕದ ತಲಾ 30% ದಂಡ ವಿಧಿಸಲಾಗಿದೆ.
ಹೌದು.. ಪಾಕ್ ವಿರುದ್ಧ ಭಾರತ ಗೆದ್ದಾಗ ನಾಯಕ ಸೂರ್ಯಕುಮಾರ್ ಯಾದವ್ ಪಂದ್ಯದ ಗೆಲುವನ್ನು ಪಹಲ್ಗಾಮ್ ಸಂತ್ರಸ್ತರು ಹಾಗೂ ಭಾರತೀಯ ಸೇನೆಗೆ ಅರ್ಪಣೆ ಎಂದಿದ್ದರು. ಈ ಹೇಳಿಕೆ ರಾಜಕೀಯ ಪ್ರೇರಿತವಾಗಿದೆ ಎಂದು ಪಿಸಿಬಿ ಐಸಿಸಿಗೆ ದೂರು ಸಲ್ಲಿಸಿತ್ತು. ಈ ಬಗ್ಗೆ ಸೂರ್ಯರನ್ನ ವಿಚಾರಣೆ ನಡೆಸಿದಾಗ ತನ್ನದೇನು ತಪ್ಪಿಲ್ಲವೆಂದು ಒಪ್ಪಿಕೊಂಡರು. ಬಳಿಕ ಐಸಿಸಿ 30% ದಂಡ ವಿಧಿಸಿ ಆದೇಶಿಸಿತು. ಏಷ್ಯಾ ಕಪ್ ಮುಗಿದ ನಂತರವೇ ಐಸಿಸಿಯಿಂದ ಅಧಿಕೃತ ದೃಢೀಕರಣ ಸಿಗಲಿದೆ ಎಂದು ರಿಚರ್ಡ್ಸನ್ ತಿಳಿಸಿದ್ದಾರೆ.
ಇನ್ನು ಇದೇ ವೇಳೆ, ಪಾಕಿಸ್ತಾನದ ಬ್ಯಾಟ್ಸ್ಮನ್ ಸಾಹಿಬ್ಜಾದಾ ಫರ್ಹಾನ್ ಅವರು ‘ಗನ್ ಸೆಲೆಬ್ರೇಷನ್’ ಮೂಲಕ ಸಂಭ್ರಮಿಸಿದ ಘಟನೆ ಕೂಡ ಚರ್ಚೆಗೆ ಗ್ರಾಸವಾಯಿತು. ಆದರೆ ಐಸಿಸಿ ಈ ವಿಚಾರದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳದೆ, ಫರ್ಹಾನ್ಗೆ ಎಚ್ಚರಿಕೆ ನೀಡಿ ಮುಕ್ತಿಸಿದರು.
ಈ ನಡುವೆ, ಎರಡೂ ತಂಡಗಳು ಈಗಾಗಲೇ ಎರಡು ಬಾರಿ ಈ ಟೂರ್ನಿಯಲ್ಲಿ ಮುಖಾಮುಖಿಯಾಗಿದ್ದು, ಈಗ ಎಷ್ಯಾಕಪ್ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನ ಫೈನಲ್ನಲ್ಲಿ ಪರಸ್ಪರ ಸೆಣಸಾಡಲಿವೆ. ಏಷ್ಯಾಕಪ್ನ 41 ವರ್ಷಗಳ ಇತಿಹಾಸದಲ್ಲಿಇದೇ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನ ನಡುವಿನ ಫೈನಲ್ ಪಂದ್ಯ ನಡೆಯುತ್ತಿದೆ ಎಂಬುದು ವಿಶೇಷ.




