UDUPI BOAT ACCIDENT : ಉಡುಪಿಯ ಮಲ್ಪೆ ಬಂದರಿನಲ್ಲಿ (Malpe Port) ಸಂಭವಿಸಿದ ದುರಂತ ಘಟನೆಯಲ್ಲಿ ತಮಿಳುನಾಡಿನ ಮೂಲದ ಹಿರಿಯ ಮೀನುಗಾರರೊಬ್ಬರು ಬೋಟಿನಿಂದ ಅಕಸ್ಮಿಕವಾಗಿ ನೀರಿಗೆ ಬಿದ್ದು ಸಾವನ್ನಪ್ಪಿದ್ದಾರೆ.
ಮೃತ ವ್ಯಕ್ತಿಯನ್ನು ತಮಿಳುನಾಡಿನ ತುತಿಕೋಡಿ ಜಿಲ್ಲೆ ತಿರುಮಂದುರ್ನ ನಿವಾಸಿ ಅಂತೋನಿರಾಜ್ (Antoniraj) ಎಂದು ಗುರುತಿಸಲಾಗಿದೆ. ಅವರು ಮಲ್ಪೆಯಲ್ಲಿ ಸರಿನಾ ಎಂಬುವರ ಮಾಲಕತ್ವದ ‘ಮೇಲಿಸಾ’ ಬೋಟಿನಲ್ಲಿ ಮೀನುಗಾರಿಕಾ ಕಾರ್ಯ ನಿರ್ವಹಿಸುತ್ತಿದ್ದರು.
ಮೇಲಿಸಾ ಎಂಬ ಬೋಟಿನಲ್ಲಿ ಮೀನುಗಾರಿಕಾ ಕೆಲಸ ಮಾಡುತಿದ್ದ ಅಂತೋನಿರಾಜ್, ಬೋಟಿಗೆ ಐಸ್ ತುಂಬಲು ಬಾಪುತೋಟದ ಬಳಿ ನಿಲ್ಲಿಸಿದ್ದ ಬೋಟನ್ನು ಮುಂದೆ ತರಲು ಪ್ರಯತ್ನಿಸಿದಾಗ ಅಕಸ್ಮಿಕವಾಗಿ ಬೋಟಿನಿಂದ ಧಕ್ಕೆಯ ನೀರಿಗೆ ಬಿದ್ದರು ಎನ್ನಲಾಗಿದೆ. ಇನ್ನು ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.