Udupi ಜಿಲ್ಲೆಯ ಮಣಿಪುರ ಗ್ರಾಮದಲ್ಲಿ ಮದ್ಯದ ಅಮಲಿನಲ್ಲಿ ನಡೆದ ಗಲಾಟೆ ವೃದ್ಧೆಯ ಕೊಲೆಯಲ್ಲಿ ಅಂತ್ಯವಾಗಿದೆ.

Udupi ಜಿಲ್ಲೆಯಲ್ಲಿ ನಡೆದ ಭೀಕರ ಘಟನೆ ಒಂದು ಸ್ಥಳೀಯರಲ್ಲಿ ಆತಂಕ ಉಂಟುಮಾಡಿದೆ. ಸಂಬಂಧವಾಗಿ ಮದ್ಯದ ಅಮಲಿನಲ್ಲಿ ನಡೆದ ಗಲಾಟೆ ವೃದ್ಧೆಯೊಬ್ಬರ ಕೊಲೆಯಲ್ಲಿ ಅಂತ್ಯಗೊಂಡಿದ್ದು, ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಘಟನೆ ಉಡುಪಿ ತಾಲೂಕಿನ ಮಣಿಪುರ ಗ್ರಾಮದ ಕೆನರಾಡಿ ಪ್ರದೇಶದಲ್ಲಿ ಸೋಮವಾರ (ಮಾ.09) ನಡೆದಿದೆ.
ಕೊಲೆಯಾದ ಮಹಿಳೆಯನ್ನು ವನಜಾ ಪೂಜಾರ್ತಿ (60) ಎಂದು ಗುರುತಿಸಲಾಗಿದೆ.
ಮಾಹಿತಿಯ ಪ್ರಕಾರ, ವನಜಾ ಪೂಜಾರ್ತಿ ಅವರು ಆರೋಪಿ ವಲೇರಿಯನ್ ಮೆಂಡೋನ್ಸಾ ಅವರ ಮನೆಯಲ್ಲಿ ಆಗಾಗ್ಗೆ ಮದ್ಯ ಸೇವಿಸುತ್ತಿದ್ದರು.
ಮಾರ್ಚ್ 9ರ ಸಂಜೆದಿಂದ ಮಾರ್ಚ್ 10ರ ಬೆಳಗಿನವರೆಗೂ ಮದ್ಯ ಸೇವಿಸುತ್ತಿದ್ದ ವೇಳೆ ಯಾವುದೋ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಆರಂಭವಾಗಿದೆ.
MUST READ : Bangalore ನಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ ತೇಜಸ್ವಿ ಸೂರ್ಯ ಮಧ್ಯ ಪ್ರವೇಶ..!

ಹರಿತವಾದ ಆಯುಧದಿಂದ ದಾಳಿ
ಕುಡಿದ ಅಮಲಿನಲ್ಲಿ ಗಲಾಟೆ ವಿಕೋಪಕ್ಕೆ ತಿರುಗಿದ್ದು, ಈ ವೇಳೆ ಆರೋಪಿಗಳು ಹರಿತವಾದ ಆಯುಧದಿಂದ ದಾಳಿ ನಡೆಸಿದ್ದಾರೆ.
ದಾಳಿಯ ಪರಿಣಾಮವಾಗಿ ವನಜಾ ಪೂಜಾರ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಪ್ರಕರಣದಲ್ಲಿ ವಲೇರಿಯನ್ ಮೆಂಡೋನ್ಸಾ ಮತ್ತು ಪ್ರವೀಣ್ ಮೆಂಡೋನ್ಸಾ ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
MUST WATCH : ನಿಮ್ಮ ಮನೆ ಸುರಕ್ಷಿತವಾಗಿ ಇರ್ಬೇಕಾ..?- ದೀರ್ಘಕಾಲಿಕ ಬಾಳಿಕೆಗೆ SUNVIK TMT , BARS & BRICKS ಬಳಸಿ




