Karnataka Weather : ಇಂದು ಹಲವು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ

Karnataka Weather : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿರು ಬಿಸಿಲಿನ ಬೇಗೆ ಹೆಚ್ಚಾಗುತ್ತಿದೆ. ಉಷ್ಣಾಂಶ ಅಧಿಕಗೊಳ್ಳುತ್ತಿದ್ದು ಜನರು ಹೈರಾಣಾಗುತ್ತಿದ್ದಾರೆ. ಇತ್ತ ಬೇಸಿಗೆಯ ನಡುವೆ ರಾಜ್ಯದ ಹಲವೆಡೆ ಬಿರುಗಾಳಿ ಸಹಿತ ಭಾರೀ ಮಳೆ ಆಗ್ತಾ ಇದ್ದು, ನಾನಾ ಅವಾಂತರಗಳನ್ನು ಸೃಷ್ಟಿ ಮಾಡ್ತಿದೆ. ಇತ್ತ ತುಮಕೂರಿನಲ್ಲಿ ಬಿಸಿಲಿನ ಜೊತೆ ಮೋಡಕವಿದ ವಾತಾವರಣ ಸೃಷ್ಟಿಯಾಗಿದ್ದು, ತಾಪಾಮಾನ ಹೆಚ್ಚಾಗಿದೆ.
ತರಕಾರಿ ಹಾಗೂ ಬೆಳೆಗಳು ನಾಶ
ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಜೋರಾಗಿದ್ದು, ವಾಡಿಕೆಗಿಂತ ಹೆಚ್ಚಾಗಿದೆ. ಇನ್ನು ಒಂದು ವಾರಗಳ ಕಾಲ ರಾಜ್ಯದಲ್ಲಿ ಭಾರೀ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಳೆದ 15 ರಿಂದ 20 ದಿನಗಳಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಲ್ಲಲ್ಲಿ ಆಲಿಕಲ್ಲು, ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಭಾರೀ ಆಗಾ ಇದ್ದು, ಹಣ್ಣು, ತರಕಾರಿ ಹಾಗೂ ಬೆಳೆಗಳು ನಾಶವಾಗ್ತಾ ಇದ್ದು ಬೆಳೆ ಸಂಕಷ್ಟದಲ್ಲಿ ರೈತನಿದ್ದಾನೆ.
READ THIS : ‘Dhurandhar 2’ ಅಬ್ಬರ – ಭಾರತದಲ್ಲಿ 10 ದಿನಕ್ಕೆ 700 ಕೋಟಿ ಕಲೆಕ್ಷನ್

ಯಾವ್ಯಾವ ಜಿಲ್ಲೆಗಳಲ್ಲಿ ಮಳೆ?
ಬಂಗಾಳಕೊಲ್ಲಿ ಹಾಗೂ ಅರಬ್ಬಿ ಸಮುದ್ರದಲ್ಲಿ ಪ್ರತ್ಯಾವರ್ತ ಮಾರುತಗಳ ಪರಿಣಾಮದಿಂದಾಗಿ ಇಂದು ಸಹ ಕಲಬುರ್ಗಿ, ವಿಜಯಪುರ, ಗದಗ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ಹಾವೇರಿ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ಈ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ.
ತುಮಕೂರಿನಲ್ಲಿ ಮೋಡ ಕವಿದ ವಾತಾವರಣ
ಇತ್ತ ತುಮಕೂರಿನಲ್ಲಿ ನಿನ್ನೆ ರಾತ್ರಿ ಅಲ್ಲಲ್ಲಿ ಮಳೆ ಮುನ್ಸೂಚನೆ ಇತ್ತು, ಅದರೆ ಒಂದೆರಡು ಹನಿ ಮಾತ್ರ ಮಳೆ ಬಂದಿದೆ. ಇಂದು ಬೆಳಗ್ಗೆಯಿಂದಲೂ ತುಮಕೂರು ನಗರ ಸೇರಿದಂತೆ ಜಿಲ್ಲೆಯ ಹಲವು ಭಾಗಗಳಲ್ಲಿಮೋಡ ಕವಿದ ವಾತಾವರಣ ಇದ್ದು, ಮಳೆ ಮುನ್ಸೂಚನೆ ನೀಡಿತ್ತು.

MUST WATCH : ರಾಗಿ ಖರೀದಿ ಕೇಂದ್ರದಲ್ಲಿ ಭಾರೀ ಅಕ್ರಮ ಅಧಿಕಾರಿಗಳ ವಿರುದ್ಧ ರೈತ ಸಂಘ ಆರೋಪ




