ರಣವೀರ್ ಸಿಂಗ್ ನಟನೆಯ ʻDhurandhar 2ʼ ಸಿನಿಮಾವು ಬಾಕ್ಸ್ ಆಫೀಸ್ನಲ್ಲಿ ಚಿನ್ನದ ಮಳೆ ಸುರಿಸುತ್ತಿರುವುದು ಗೊತ್ತೇ ಇದೆ.

ಬಾಲಿವುಡ್ನಲ್ಲಿ ಭಾರೀ ಸಂಚಲನ ಮೂಡಿಸಿರುವ ದುರಂಧರ್ 2 ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಅಬ್ಬರ ಮುಂದುವರಿಸಿದೆ. ರಣವೀರ್ ಸಿಂಗ್ ಅಭಿನಯ ಮತ್ತು ಆದಿತ್ಯ ಧಾರ್ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರ ಕೇವಲ 10 ದಿನಗಳಲ್ಲಿ ದಾಖಲೆಗಳ ಸುರಿಮಳೆಯನ್ನೇ ಸುರಿಸಿದೆ.
9 ದಿನಗಳಲ್ಲಿ 700 ಕೋಟಿ ಕ್ಲಬ್
ಮಾರ್ಚ್ 19ರಂದು ಬಿಡುಗಡೆಯಾದ ಈ ಚಿತ್ರ, 9 ದಿನಗಳಲ್ಲಿ 700 ಕೋಟಿ ಕ್ಲಬ್ ಸೇರಿ ದೊಡ್ಡ ಸಾಧನೆ ಮಾಡಿತ್ತು. ಈಗ 10ನೇ ದಿನಕ್ಕೆ (ಮಾರ್ಚ್ 28) 62.85 ಕೋಟಿ ರೂ. ಗಳಿಸುವ ಮೂಲಕ ಹೊಸ ಮೈಲುಗಲ್ಲು ನಿರ್ಮಿಸಿದೆ. ಭಾರತದಲ್ಲಿ ಒಟ್ಟು ಕಲೆಕ್ಷನ್ 784 ಕೋಟಿ ರೂಪಾಯಿಗೆ ಏರಿಕೆಯಾಗಿದೆ.
ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ
ಈ ಸಾಧನೆಯೊಂದಿಗೆ ಹಿಂದಿ ಚಿತ್ರರಂಗದ ಇತಿಹಾಸದಲ್ಲೇ ಎರಡನೇ ಶನಿವಾರ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾವಾಗಿ ಹೊರಹೊಮ್ಮಿದೆ. ಇದೇ ವೇಳೆ ಮೊದಲ ಭಾಗವಾದ ದುರಂಧರ್ ಚಿತ್ರದ ದಾಖಲೆಯನ್ನೂ ಮುರಿದಿದೆ.
ಪುಷ್ಪ 2, ಬಾಹುಬಲಿ 2, ಛಾವಾ, ಗದರ್ 2, ಸ್ತ್ರೀ 2 ಮತ್ತು ದಂಗಲ್ ಅಂತಹ ಬ್ಲಾಕ್ಬಸ್ಟರ್ ಚಿತ್ರಗಳ 10ನೇ ದಿನದ ಗಳಿಕೆಯನ್ನು ಮೀರಿಸಿದೆ.

READ THSI : SIRA : ಸಾಲಬಾಧೆ ತಾಳಲಾರದೇ ರೈತ ಆತ್ಮಹತ್ಯೆ!
ಜಾಗತಿಕ ಮಟ್ಟದಲ್ಲೂ Dhurandhar 2 ಅಬ್ಬರ
ಇನ್ನು ಜಾಗತಿಕ ಮಟ್ಟದಲ್ಲೂ ಈ ಚಿತ್ರ ಅಬ್ಬರಿಸುತ್ತಿದ್ದು, ಒಟ್ಟು ಕಲೆಕ್ಷನ್ ಈಗಾಗಲೇ 1,151 ಕೋಟಿ ರೂ. ದಾಟಿದೆ. ವಿದೇಶಿ ಮಾರುಕಟ್ಟೆಯಿಂದ ಮಾತ್ರವೇ 296 ಕೋಟಿ ರೂ. ಗಳಿಕೆ ಬಂದಿದೆ.
ಸುಮಾರು 250–300 ಕೋಟಿ ರೂ. ಬಜೆಟ್ನಲ್ಲಿ ನಿರ್ಮಾಣವಾದ ಈ ಚಿತ್ರ ಈಗಾಗಲೇ ಭಾರೀ ಲಾಭ ತಂದುಕೊಟ್ಟು ಅಧಿಕೃತವಾಗಿ ಬ್ಲಾಕ್ಬಸ್ಟರ್ ಆಗಿದೆ.
ಬಲಿಷ್ಠ ತಾರಾಗಣ
Dhurandhar 2 ಚಿತ್ರದಲ್ಲಿ ಸಂಜಯ್ ದತ್, ಅರ್ಜುನ್ ರಾಮ್ಪಾಲ್ ಮತ್ತು ಆರ್. ಮಾಧವನ್ ಸೇರಿದಂತೆ ಬಲಿಷ್ಠ ತಾರಾಗಣವಿದ್ದು, 800 ಕೋಟಿ ಗಡಿ ದಾಟುವ ನಿರೀಕ್ಷೆ ಇದೆ.

ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ
ಈ ಸಿನಿಮಾ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಚರ್ಚೆ ಆಗುತ್ತಿದೆ. ರಜನಿಕಾಂತ್, ಅಲ್ಲು ಅರ್ಜುನ್, ರಿಷಬ್ ಶೆಟ್ಟಿ, ಶಿವರಾಜ್ಕುಮಾರ್ ಮುಂತಾದ ಸೆಲೆಬ್ರಿಟಿಗಳು ‘ಧುರಂಧರ್ 2’ ಸಿನಿಮಾವನ್ನು ಹೊಗಳಿದ್ದಾರೆ.
MUST WATCH : ವಿದ್ಯಾರ್ಥಿಗೆ LOVE YOU ಎಂದಿದ್ದ ಪ್ರೊಫೆಸರ್ – ಪೋಲಿ ಲೆಕ್ಚರರ್ ಒಬ್ಬ ಸೈಕೋ ಅಂತೆ..!




