Nelamangala : ಪಾಠ ಕಲಿಯುವ ಜಾಗದಲ್ಲಿ ಹೆಣ್ಣು ಮಕ್ಕಳಿಗೆ ಸೇಫ್ಟಿ ಇಲ್ವಾ..? ಕ್ಲಾಸ್ ರೂಂನಲ್ಲೇ ವಿದ್ಯಾರ್ಥಿನಿಗೆ ಪ್ರಪೋಸ್ ಮಾಡಿದ ಲೆಕ್ಚರರ್.

ಗುರು ದೇವೋ ಭವ ಅಂತಾರೆ. ಆದ್ರೆ ಪಾಠ ಹೇಳಿಕೊಡುವ ಉಪನ್ಯಾಸಕರೇ ವಿದ್ಯಾರ್ಥಿಗಳ ಜೊತೆ ಅಸಭ್ಯವಾಗಿ ವರ್ತನೆ ಮಾಡ್ತಾ ಇದ್ದು ಸಮಾಜವೇ ತಲೆ ತಗ್ಗಿಸುವಂತಾಗಿದೆ. ಅಲ್ದೇ ಶಾಲಾ- ಕಾಲೇಜುಗಳಲ್ಲಿಯೇ ಹೆಣ್ಣು ಮಕ್ಕಳಿಗೆ ಸೇಫ್ಟಿನೇ ಇಲ್ವಾ ಅನ್ನೋ ಪ್ರಶ್ನೆ ಎದ್ದಿದೆ.
ಪ್ರಪೋಸ್ ಮಾಡಿದ ಲೆಕ್ಚರರ್ಗೆ ಬಿತ್ತು ಗೂಸ!
ಹೌದು, ಕ್ಲಾಸ್ ರೂಮ್ ನಲ್ಲಿಯೇ ವಿದ್ಯಾರ್ಥಿನಿಗೆ ಪ್ರಾಧ್ಯಾಪಕರೊಬ್ಬರು ಪ್ರಪೋಸ್ ಮಾಡಿದ್ದು, ರೊಚ್ಚಿಗೆದ್ದ ವಿದ್ಯಾರ್ಥಿಗಳು ಲೆಕಚ್ಚರ್ಗೆ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಸಿದ್ಧಾರ್ಥ ಮೆಡಿಕಲ್ ಕಾಲೇಜಿನಲ್ಲಿ ಬೆಳಕಿಗೆ ಬಂದಿದೆ.
ಚಾಕೊಲೇಟ್ ಕೊಟ್ಟು ವಿದ್ಯಾರ್ಥಿನಿಗೆ ಪ್ರಪೋಸ್
Nelamangala ತಾಲೂಕಿನ ಟಿ.ಬೇಗೂರು ಬಳಿ ಇರುವ ಸಿದ್ದಾರ್ಥ ಮೆಡಿಕಲ್ ಕಾಲೇಜಿನಲ್ಲಿ ಪ್ರಾಧ್ಯಾಪಕ ಅಬ್ದುಲ್ ಎಂಬುವವರು, ಕ್ಲಾಸ್ ರೂಂನಲ್ಲೇ ವಿದ್ಯಾರ್ಥಿಯೊಬ್ಬರಿಗೆ ಚಾಕಲೇಟ್ ಕೊಟ್ಟು ಪ್ರಪೋಸ್ ಮಾಡಿದ್ದಾರೆ. ಲೆಕ್ಚರರ್ನ ನಡೆಗೆ ಆತಂಕಗೊಂಡ ವಿದ್ಯಾರ್ಥಿನಿ, ಪ್ರಾಧ್ಯಾಪಕರ ನಡೆಯನ್ನು ಖಂಡಿಸಿದ್ದಾರೆ. ಪ್ರಾಧ್ಯಾಪಕರ ಪ್ರಪೋಸ್ನನ್ನು ತಿರಸ್ಕರಿಸಿದ್ದು, ಆತನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ರು.

READ THIS : ಕೇರಳಿಗರಿಗೆ ಕರ್ನಾಟಕದಿಂದ ಮತ್ತೇ ಅನುದಾನ – ವಿಪಕ್ಷಗಳು ಕಿಡಿ
ಕ್ಯಾಪಂಸ್ನಲ್ಲೇ ಅಟ್ಟಾಡಿಸಿ ಹೊಡೆದ ಸ್ಟೂಡೆಂಟ್ಸ್
ಇನ್ನು ಈ ಘಟನೆಯಿಂದ ವಿದ್ಯಾರ್ಥಿಗಳು ರೊಚ್ಚಿಗೆದ್ದಿದ್ದು, ಕಾರಿನ ಬಳಿ ಬಂದು ಮೆಡಿಕಲ್ ಕಾಲೇಜು ಕ್ಯಾಂಪಸ್ ನಲ್ಲಿ ಪ್ರಾಧ್ಯಾಪಕನನ್ನು ಅಟ್ಟಾಡಿಸಿ ಹಿಗ್ಗಾಮುಗ್ಗ ಥಳಿಸಿದ್ದಾರೆ. ವಿದ್ಯಾರ್ಥಿನಿ ಚಪ್ಪಲಿಯಿಂದ ಥಳಿಸಿದ್ರೆ, ವಿದ್ಯಾರ್ಥಿಗಳು ಕಾಲಿನಿಂದ ಪ್ರಾಧ್ಯಾಪಕರಿಗೆ ಒದ್ದು ಆಕ್ರೋಶ ಹೊರಹಾಕಿದ್ದಾರೆ.
ಸೋಶಿಯಲ್ ಮಿಡಿಯಾದಲ್ಲಿ ವೈರಲ್
ಇನ್ನು ವಿದ್ಯಾರ್ಥಿಗಳಿಂದ ಥಳಿತಕ್ಕೆ ಒಳಗಾದ ಪ್ರಾಧ್ಯಾಪಕ ಸ್ಥಳದಿಂದ ಓಡಿ ಹೋಗಲು ಯತ್ನಿಸಿದ್ರು. ಸದ್ಯ ವಿದ್ಯಾರ್ಥಿಗಳಿಂದ ಪ್ರಾಧ್ಯಾಪಕರ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು, ಪೊಲೀಸರು ಕ್ರಮಕ್ಕೆ ಮುಂದಾಗ್ತಾರಾ ಅಂತಾ ಕಾದುನೋಡಬೇಕಿದೆ.

MUST WATCH : MICROFINANCEನಿಂದ ನಿರಂತರ ಟಾರ್ಚರ್ – ಮನನೊಂದು ಆತ್ಮಹ*ಗೆ ಶರಣಾದ ರೈತ




