ಲಾರಿ ಮತ್ತು ಕ್ರೂಸರ್ ನಡುವೆ ಭೀಕರ Accident – ಮೂವರು ಭಕ್ತರು ಸಾವು

ಶ್ರೀಶೈಲ ಮಲ್ಲಿಕಾರ್ಜುನನ ದರ್ಶನ ಪಡೆದು ಊರಿಗೆ ವಾಪಸಾಗುತ್ತಿದ್ದ ಭಕ್ತರ ವಾಹನಕ್ಕೆ ಲಾರಿಯೊಂದು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಭೀಕರ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಮೃತರೆಲ್ಲರೂ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಸಮೀಪದ ಯಕ್ಸಂಬಾ ಗ್ರಾಮದವರು ಎಂದು ತಿಳಿದುಬಂದಿದೆ.
ಭಕ್ತರು ದಾರುಣ ಸಾವು
ಆಂಧ್ರಪ್ರದೇಶದ ಮಾರ್ಕಾಪುರ ಜಿಲ್ಲೆಯ ಕಂಬಳ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ. ಚಿಕ್ಕೋಡಿಯ ಭಕ್ತರ ಪ್ರಯಾಣಿಸುತ್ತಿದ್ದ ಕ್ರೂಸರ್ ವಾಹನ ಮತ್ತು ಲಾರಿ ನಡುವೆ ನಡೆದ ಭೀಕರ ಡಿಕ್ಕಿಯಲ್ಲಿ ಕ್ರೂಸರ್ ಸಂಪೂರ್ಣವಾಗಿ ಜಖಂಗೊಂಡಿದ್ದು, ಸ್ಥಳದಲ್ಲೇ ಮೂವರು ಭಕ್ತರು ಮೃತಪಟ್ಟಿದ್ದಾರೆ. ಮೃತರನ್ನು ಯಕ್ಸಂಬಾ ಗ್ರಾಮದ ಅಜಿತ್ ಸಾತವಾರ (28), ಗೌರವ್ (40) ಮತ್ತು ಅಲಕಾ ಶಿಂಧೆ (60) ಎಂದು ಗುರುತಿಸಲಾಗಿದೆ.
READ THIS : ಅಪ್ಪು ಹುಟ್ಟುಹಬ್ಬಕ್ಕೆ ಶಿವಣ್ಣ ಭಾವುಕ ಪೋಸ್ಟ್
ಶ್ರೀಶೈಲ ಯಾತ್ರೆ ಮುಗಿಸಿ ಮರಳುತ್ತಿದ್ದಾಗ Accident
ಒಟ್ಟು 14 ಜನರ ಭಕ್ತರ ತಂಡವು ಎರಡು ದಿನಗಳ ಹಿಂದೆ ಯಕ್ಸಂಬಾ ಗ್ರಾಮದಿಂದ ಶ್ರೀಶೈಲ ಕ್ಷೇತ್ರಕ್ಕೆ ಯಾತ್ರೆಗೆ ತೆರಳಿದ್ದರು. ದೇವರ ದರ್ಶನ ಮುಗಿಸಿ ಊರಿನತ್ತ ಮರಳುತ್ತಿರುವಾಗ ಮಾರ್ಗಮಧ್ಯೆ ಈ ದುರ್ಘಟನೆ ಸಂಭವಿಸಿದೆ.
11 ಮಂದಿಗೆ ಗಾಯ
ಇನ್ನು Accident ನಲ್ಲಿ ಕ್ರೂಸರ್ ವಾಹನದಲ್ಲಿದ್ದ ಇನ್ನುಳಿದ 11 ಜನರಿಗೆ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಮೃತರ ಶವಗಳನ್ನು ಇಂದು ಸ್ವಗ್ರಾಮಕ್ಕೆ ತರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
MUST WATCH : ಮಧುಗಿರಿಯಲ್ಲಿ ಜನ ಸಂಪರ್ಕ ಸಭೆ ಅಧಿಕಾರಿಗಳಿಗೆ ಡಿಸಿ ಖಡಕ್ ವಾರ್ನಿಂಗ್




