ಬೆಂಗಳೂರು ಹೆಬ್ಬಾಳದಲ್ಲಿ ಷೇರು ಮಾರುಕಟ್ಟೆಯಲ್ಲಿ ನಷ್ಟವಾದ ಕಾರಣ ಮನನೊಂದು 50 ವರ್ಷದ ವ್ಯಕ್ತಿ ರೈಲ್ವೆ ಟ್ರ್ಯಾಕ್ಗೆ ತಲೆಕೊಟ್ಟು Suicide ಮಾಡಿಕೊಂಡ ಘಟನೆ ನಡೆದಿದೆ…

ಬೆಂಗಳೂರು ನಗರದಲ್ಲಿ ದುಃಖದ ಘಟನೆ ನಡೆದಿದೆ. ಪ್ರಕರಣದಲ್ಲಿ ಷೇರು ಮಾರುಕಟ್ಟೆಯಲ್ಲಿ ನಷ್ಟವಾಗಿದ್ದರಿಂದ ಮನನೊಂದು ವ್ಯಕ್ತಿಯೊಬ್ಬರು ರೈಲಿಗೆ ತಲೆಕೊಟ್ಟು suicide ಮಾಡಿಕೊಂಡಿದ್ದಾರೆ.
ಈ ಘಟನೆ ಬೆಂಗಳೂರು ನಗರದ ಹೆಬ್ಬಾಳ ಪ್ರದೇಶದ ರೈಲ್ವೆ ಟ್ರ್ಯಾಕ್ ಬಳಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ವೆಂಕಟೇಶ್ (50) ಎಂದು ಗುರುತಿಸಲಾಗಿದೆ.
MUST READ : Bidar ನಲ್ಲಿ ಟ್ರ್ಯಾಕ್ಟರ್ ಪಲ್ಟಿ – 13 ವರ್ಷದ ಬಾಲಕ ಸಾವು..!!

ಆತ್ಮಹತ್ಯೆಗೆ ಕಾರಣವೇನು?
ಮಾಹಿತಿ ಪ್ರಕಾರ, ವೆಂಕಟೇಶ್ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ಇದಕ್ಕೆ ಜೊತೆಗೆ ಅವರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದು, ಅದರಲ್ಲಿ ಭಾರೀ ನಷ್ಟ ಅನುಭವಿಸಿದ್ದರು. ಅಲ್ಲದೆ ಸಾಲಗಾರರ ಕಾಟವೂ ಹೆಚ್ಚಾಗಿತ್ತು.
ಈ ಎಲ್ಲಾ ಸಮಸ್ಯೆಗಳಿಂದ ಮನನೊಂದು ಅವರು ಹೆಬ್ಬಾಳದ ಸಮೀಪದ ರೈಲ್ವೆ ಟ್ರ್ಯಾಕ್ಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಘಟನೆ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸದ್ಯ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.
MUST WATCH : ನಿಮ್ಮ ಮನೆ ಸುರಕ್ಷಿತವಾಗಿ ಇರ್ಬೇಕಾ..?- ದೀರ್ಘಕಾಲಿಕ ಬಾಳಿಕೆಗೆ SUNVIK TMT , BARS & BRICKS ಬಳಸಿ




