Tumakuru : ಗಂಡ ಹೃದಯಾಘಾತದಿಂದ ಸಾವನ್ನಪ್ಪಿದ ಕೇಸ್ಗೆ ಟ್ವಿಸ್ಟ್ – ಅಸಲಿ ಕಹಾನಿ ಒಂದೊಂದೆ ರಿವೀಲ್.

Tumakuru : ಹೆಬ್ಬೂರು ಬಳಿಯ ದಾಸರಹಳ್ಳಿಯಲ್ಲಿ ಗಂಡ ಸತ್ತು ಕೇವಲ 16ನೇ ದಿನಕ್ಕೆ ಹೆಂಡ್ತಿ ಮತ್ತೊಂದು ಮದುವೆ ಆಗಿದ್ದದ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ತಾಟಗಿತ್ತಿ ಹೆಂಡ್ತಿಯ ಅಸಲಿ ಕಹಾನಿ ಒಂದೊಂದೆ ರಿವೀಲ್ ಆಗ್ತಾ ಇದೆ.
ಗಂಡನ ಪ್ರಾಣ ತೆಗೆದು ಹೃದಯಾಘಾತ ಎಂದಿದ್ದ ಹೆಂಡತಿ ನಾಟಕ ಬಯಲು!
ತನ್ನ ಗಂಡ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಅಂತಾ ಗಂಡ ಸತ್ತಿರೋ ದಿನ ಬಾಯಿ ಬಾಯಿ ಬಡಿದಾಡಿಕೊಂಡಿದ್ದ ಐನಾತಿ, ತರಾತಾರಿಯಲ್ಲಿ ಅಂತ್ಯಸಂಸ್ಕಾರ ಮುಗಿಸೇ ಬಿಟ್ಟಿದ್ದಳು. ಪಾಪ ಗಂಡ ಸತ್ತಿರುವವಳು ಅಂತಾ ಸಂಬಂಧಿಕರು, ಗ್ರಾಮಸ್ಥರು ಅಯ್ಯೋ ಅಂತಾ ಕರುಣೆ ತೋರಿಸಿ, ಕುಟುಂಬಕ್ಕೆ ನೆರವಾಗಲು ನಿರ್ಧರಿಸಿದ್ರೆ ಆದ್ರೆ ಈ ಸುಪನಾತಿಯ ಕಥೆ ಒಂದಲ್ಲಾ. ಎರಡಲ್ಲಾ. ಪೊಲೀಸರೇ ಈ ಚಾಲಕಿಯ ಕಥೆ ಕೇಳಿ ಕನ್ಫ್ಯೂಸ್ ಆಗಿದ್ದಾರೆ. ಈ ಒಂದು ಘಟನೆ ಸಿನಿಮಾ ಕಥೆಯನ್ನೇ ಮೀರಿಸುವಂತಾಗಿದ್ದು, ಇದು ಒಂದು ಕೊಲೆಯಲ್ಲ. ಮದುವೆಯ ಆಸೆ. ಎರಡು ಹತ್ಯೆ ಮತ್ತು ಮಾಸ್ಟರ್ ಪ್ಲಾನ್ಗಳ ಕಥೆ ಆಗಿದೆ. ಅಷ್ಟಕ್ಕೂ ಈ ಚಾಲಕಿ ಹೆಂಡ್ತಿಯ ಕಥೆ ಎಳೆ ಎಳೆಯಾಗಿ ಬಿಚ್ಚಿಡ್ತಿವಿ ನೋಡಿ.
ಕೊಲೆಯ ರಹಸ್ಯ ಪೊಲೀಸರ ತನಿಖೆಯಲ್ಲಿ ಬಯಲು
ಕಳೆದ ಜನವರಿ 30 ರಂದು ಹೆಬ್ಬೂರು ಹೋಬಳಿಯ ದಾಸರಹಳ್ಳಿಯಲ್ಲಿ ಹೆಂಡ್ತಿ ಮಕ್ಕಳ ಜೊತೆ ವಾಸವಾಗಿದ್ದ ಪರಮೇಶ್ನನ್ನು ಆತನ ಹೆಂಡ್ತಿ ಆಶಾ ಹಾಗೂ ಆಕೆಯ ಲವ್ವರ್ ಚಂದ್ರಪ್ಪ ಸೇರಿಕೊಂಡು ಕೊಂದಿದ್ದರು. ಕೊಲೆಯ ರಹಸ್ಯ ಪೊಲೀಸರ ತನಿಖೆಯಲ್ಲಿ ಬಯಲಾಗಿತ್ತು. ಅಲ್ದೇ ಈ ಕೊಲೆಯ ಹಿಂದಿನ ಕಾರಣವೇ ಆಶಾ ಹಾಗೂ ಚಂದ್ರಪ್ಪ ಅವರ ಮದುವೆಯ ಆಸೆ, ಮದುವೆಗಾಗಿಯೇ ಗಂಡ ಪರಮೇಶ್ವರ್ನನ್ನು ಕೊಲೆ ಮಾಡಲಾಗಿದ್ದು, ತನಿಖೆ ವೇಳೆ ಪೊಲೀಸರೇ ಶಾಕ್ಗೆ ಒಳಗಾಗಿದ್ದರು. ಇದಷ್ಟೇ ಅಲ್ಲದೇ ಇನ್ನೂ ಈ ಕಥೆಯಲ್ಲಿ ಮತ್ತಷ್ಟು ರಹಸ್ಯಗಳಿದೆ ಇದೀಗ ಹೊರಬಂದಿದೆ.

RAED THIS : GBA ಚುನಾವಣೆಗೆ ವೇದಿಕೆ ಸಜ್ಜು – 369 ವಾರ್ಡ್ಗಳ ಮೀಸಲಾತಿ ಪಟ್ಟಿ ಪ್ರಕಟ
ಮರ್ಡರ್ ಕೇಸ್ನ ಅಸಲಿ ಕಹಾನಿ ಒಂದೊಂದೆ ರಿವೀಲ್
ಹೆಬ್ಬೂರಿನ ದಾಸರಹಳ್ಳಿಯ ನಿವಾಸಿಯಾಗಿರುವ ಪರಮೇಶ್ನನ್ನು, ಆಶಾ ಎರಡನೇ ಮದುವೆಯಾಗಿದ್ದಳು. ಆಶಾಳ ಮೊದಲ ಪತಿ ಮೃತಪಟ್ಟ ನಂತರ ಪರಮೇಶ್ ಅವರೊಂದಿಗೆ ಮದುವೆಯಾಗಿದ್ದಳು. ಇವರ ದಾಂಪತ್ಯಕ್ಕೆ ಇಬ್ಬರು ಮಕ್ಕಳು ಕೂಡ ಇದ್ದರು. ಪರಮೇಶ್ ಜೊತೆ 10 ವರ್ಷ ಸಂಸಾರ ಮಾಡಿದ ಆಶಾಗೆ ಅದ್ಯಾಗೋ ಚಂದ್ರಪ್ಪನ ಪರಿಚಯ ಆಗಿತ್ತು. ಅಡುಗೆ ಭಟ್ಟನಾಗಿ ಕೆಲಸ ಮಾಡ್ತಾ ಇದ್ದ ಚಂದ್ರಪ್ಪ, ಹಾಗೂ ಆಶಾ ನಡುವೆ ಅಕ್ರಮ ಸಂಬಂಧ ಬೆಳೆದಿತ್ತು. ಇದಾದ ನಂತರ ಆಶಾ ಮೂರನೇ ಮದುವೆಯ ಕನಸು ಕಂಡಳು. ಅಲ್ಲದೇ ಚಂದ್ರಪ್ಪನಿಗೂ ಕೂಡ ಇದು ಎರಡನೇ ಮದುವೆಯಾಗಬೇಕಿತ್ತು. ಆದರೆ ಇದಕ್ಕೆ ಅಡ್ಡಿ ಇದ್ದಿದ್ದು ಮಾತ್ರ ಪರಮೇಶ್ ಹೀಗಾಗಿ ಗಂಡನನ್ನೇ ಆಶಾ ಮುಗಿಸಿ ಬಿಟ್ಟಿದ್ದಳು.
ಗಂಡ ಸತ್ತ 20 ದಿನಕ್ಕೆ ಮತ್ತೊಂದು ಮದುವೆಯಾಗಿದ್ದಹೆಂಡತಿಆಶಾ!
ಇನ್ನು ಗಂಡ ಸತ್ತು ಕೇವಲ 15 ರಿಂದ 16ನೇ ದಿನಕ್ಕೆ ಆಶಾ, ಗಂಡ ಸತ್ತಿರುವ ದುಃಖ ಇಲ್ಲದೇ ಸದ್ದಿಲ್ಲದೇ ಮತ್ತೊಂದು ಮದುವೆ ಆಗಿದ್ದಳು. ಅದ್ಯಾವಾಗ ಮತ್ತೊಂದು ಮದುವೆ ಆದಳೋ ಅನುಮಾನ ಶುರುವಾಗಿದ್ದು, ಈ ಬಗ್ಗೆ ಪರಮೇಶ್ ಸಹೋದರಿ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ತನಿಖೆ ಆರಂಭಿಸಿ, ಹೂತ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದರು. ಪರೀಕ್ಷೆಯಲ್ಲಿ ಸಾವು ಹೃದಯಾಘಾತದಿಂದಲ್ಲ, ಉಸಿರುಗಟ್ಟಿಸಿ ನಡೆದ ಕೊಲೆ ಎಂದು ದೃಢಪಟ್ಟಿತು. ಇದಾದ ನಂತರ ತನಿಖೆಯಲ್ಲಿ ಆಶಾ ಮತ್ತು ಚಂದ್ರಪ್ಪನನ್ನು ವಿಚಾರಣೆಗೆ ಒಳಪಡಿಸಿದಾಗ ಅವರ ಅಕ್ರಮ ಸಂಬಂಧ ಮದುವೆ ಆಸೆ ಎಲ್ಲಾ ಬಯಲಾಗಿದೆ.

ಇಬ್ಬರ ಆಸೆಗೆ ಪರಮೇಶ್ ಬಲಿ
ಇನ್ನು ಅಸಲಿಗೆ ಚಂದ್ರಪ್ಪ ಏನು ಸಾಚಾ ಅಲ್ಲ, ಚಂದ್ರಪ್ಪನಿಗೂ ಇದು ಎರಡನೇ ಮದುವೆ. ಅವನ ಮೊದಲ ಪತ್ನಿ ವರದಕ್ಷಿಣೆ ಕಿರುಕುಳದ ಆರೋಪದಲ್ಲಿ 2017ರಲ್ಲಿ ನೇಣಿಗೆ ಶರಣಾಗಿದ್ದಳು. ಆ ಪ್ರಕರಣದಲ್ಲಿ ಚಂದ್ರಪ್ಪನ ವಿರುದ್ಧ ಕುಣಿಗಲ್ನಲ್ಲಿ ಪೊಲೀಸ್ ಪ್ರಕರಣ ದಾಖಲಾಗಿತ್ತು. ಅವನು ಜೈಲುವಾಸ ಅನುಭವಿಸಿದ್ದ. ಇದು ಮುಗಿಸಿಕೊಂಡ ಹೊರಬಂದ ನಂತರ ಆಶಾಳ ಪರಿಚಯವಾಗಿದ್ದು, ಇಬ್ಬರ ಆಸೆಗೆ ಪರಮೇಶ್ ಬಲಿಯಾಗಿದ್ದಾನೆ.
ಗಂಡನ ಕಥೆ ಫಿನಿಶ್
ಅದೇನೆ ಆಗಲಿ ಮೋಹಕ್ಕೆ ಒಳಗಾದ ಆಶಾ, ತನ್ನ ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಮುಗಿಸಿದ್ದು, ತನ್ನ ಗಂಡನನ್ನು ಪರಲೋಕಕ್ಕೆ ಕಳುಹಿಸಿದ್ರೆ, ತಾನು ಜೈಲುಪಾಲಾಗಿ ಮುದ್ದೆ ಮುರಿಯುವಂತಾಗಿದೆ. ಇತ್ತ ಐನಾತಿ ಮಾಡಿರೋ ಕೆಲಸಕ್ಕೆ ಮಕ್ಕಳು ಅನಾಥರಾಗಿದ್ದು ಮಾತ್ರ ದುರಂತವೇ ಸರಿ.

MUST WATCH : ತಿಂಗಳ ಬಳಿಕ ಕೊಲೆ ರಹಸ್ಯ ಬಟಾಬಯಲು- ಗಂಡನನ್ನು ಕೊಂದಿದ್ದಾದರೂ ಯಾಕೆ ಗೊತ್ತಾ?




