GBA ಚುನಾವಣೆಗೆ ಸಿದ್ಧವಾಯ್ತಾ ವೇದಿಕೆ..?

Bengaluru : ರಾಜಧಾನಿ ಜನರ ಬಹು ನಿರೀಕ್ಷಿತ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಚುನಾವಣೆಗೆ ವೇದಿಕೆ ಸಜ್ಜಾಗಿದ್ದು, ನಗರಾಭಿವೃದ್ಧಿ ಇಲಾಖೆಯು ಐದು ನಗರ ಪಾಲಿಕೆಗಳ ವ್ಯಾಪ್ತಿಯ 369 ವಾರ್ಡ್ಗಳ ಮೀಸಲಾತಿ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಮೀಸಲಾತಿ ಪಟ್ಟಿ ಪ್ರಕಟವಾಗುತ್ತಿದ್ದಂತೆಯೇ ನಗರ ರಾಜಕೀಯ ವಲಯದಲ್ಲಿ ಚಟುವಟಿಕೆಗಳು ಗರಿಗೆದರಿದ್ದು, ಟಿಕೆಟ್ ಆಕಾಂಕ್ಷಿಗಳು ತಮ್ಮ ಲೆಕ್ಕಾಚಾರಗಳನ್ನು ಆರಂಭಿಸಿದ್ದಾರೆ.
176 ವಾರ್ಡ್ಗಳು ಮಹಿಳೆಯರಿಗೆ ಮೀಸಲು
ಪ್ರಕಟಿತ ಮಾಹಿತಿಯ ಪ್ರಕಾರ ಒಟ್ಟು 369 ವಾರ್ಡ್ಗಳಲ್ಲಿ 176 ವಾರ್ಡ್ಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಉಳಿದಂತೆ ವಿವಿಧ ವರ್ಗಗಳಿಗೆ ಮೀಸಲಾತಿ ಹಂಚಿಕೆ ಮಾಡಲಾಗಿದೆ.
ಒಟ್ಟು ಮೀಸಲಾತಿ ವಿವರ
- ಒಟ್ಟು ವಾರ್ಡ್ಗಳು: 369
- ಮಹಿಳೆಯರಿಗೆ ಮೀಸಲು: 176
- ಸಾಮಾನ್ಯ ವರ್ಗ (General): 192
- ಹಿಂದುಳಿದ ವರ್ಗ ‘ಎ’ (BCA): 97
- ಪರಿಶಿಷ್ಟ ಜಾತಿ (SC): 43
- ಹಿಂದುಳಿದ ವರ್ಗ ‘ಬಿ’ (BCB): 24
- ಪರಿಶಿಷ್ಟ ಪಂಗಡ (ST): 7

READ THIS : Dhurandhar 2 ಟ್ರೇಲರ್ ನೋಡಿದ ಬಾಲಿವುಡ್ ಮಂದಿ ರಿಯಾಕ್ಷನ್ ಹೇಗಿದೆ?
ಐದು ನಗರ ಪಾಲಿಕೆಗಳ ವಾರ್ಡ್ವಾರು ಮೀಸಲಾತಿ
1. ಬೆಂಗಳೂರು ನಗರ ಪಾಲಿಕೆ (72 ವಾರ್ಡ್ಗಳು)
ಸಾಮಾನ್ಯ: 40 | ಮಹಿಳೆಯರು: 34 | BCA: 19 | SC: 7 | BCB: 5 | ST: 1
2. ಬೆಂಗಳೂರು ಉತ್ತರ ನಗರ ಪಾಲಿಕೆ (72 ವಾರ್ಡ್ಗಳು)
ಸಾಮಾನ್ಯ: 37 | ಮಹಿಳೆಯರು: 34 | BCA: 19 | SC: 9 | BCB: 5 | ST: 2
3. ಬೆಂಗಳೂರು ಪಶ್ಚಿಮ ನಗರ ಪಾಲಿಕೆ (112 ವಾರ್ಡ್ಗಳು)
ಸಾಮಾನ್ಯ: 64 | ಮಹಿಳೆಯರು: 55 | BCA: 30 | SC: 9 | BCB: 7 | ST: 2
4. ಬೆಂಗಳೂರು ಪೂರ್ವ ನಗರ ಪಾಲಿಕೆ (50 ವಾರ್ಡ್ಗಳು)
ಸಾಮಾನ್ಯ: 25 | ಮಹಿಳೆಯರು: 23 | BCA: 14 | SC: 7 | BCB: 3 | ST: 1
5. ಬೆಂಗಳೂರು ಕೇಂದ್ರ ನಗರ ಪಾಲಿಕೆ (63 ವಾರ್ಡ್ಗಳು)
ಸಾಮಾನ್ಯ: 32 | ಮಹಿಳೆಯರು: 30 | BCA: 15 | SC: 11 | BCB: 4 | ST: 1

ಅಧಿಕೃತವಾಗಿ ಮುಹೂರ್ತ ಫಿಕ್ಸ್?
ಮೀಸಲಾತಿ ಪಟ್ಟಿ ಪ್ರಕಟವಾಗಿರುವುದರಿಂದ ಬಹಳ ದಿನಗಳಿಂದ ನನೆಗುದಿಗೆ ಬಿದ್ದಿದ್ದ ಬಿಬಿಎಂಪಿ/ಜಿಬಿಎ ಚುನಾವಣೆಗೆ ಈಗ ಅಧಿಕೃತವಾಗಿ ಮುಹೂರ್ತ ಫಿಕ್ಸ್ ಆದಂತಾಗಿದೆ.
ವಾರ್ಡ್ವಾರು ಮೀಸಲಾತಿ ಪಟ್ಟಿ ಬಿಡುಗಡೆಯಾಗಿರುವುದರಿಂದ ಸ್ಥಳೀಯ ನಾಯಕರು, ಮಾಜಿ ಕಾರ್ಪೊರೇಟರ್ಗಳು ಹಾಗೂ ಹೊಸ ಆಕಾಂಕ್ಷಿಗಳು ತಮ್ಮ ತಮ್ಮ ವಾರ್ಡ್ಗಳಲ್ಲಿ ಪ್ರಚಾರ ಕಾರ್ಯವನ್ನು ಚುರುಕುಗೊಳಿಸಲು ಸಿದ್ಧತೆ ನಡೆಸಿದ್ದಾರೆ.
ಶೀಘ್ರದಲ್ಲೇ ರಾಜ್ಯ ಚುನಾವಣಾ ಆಯೋಗವು ದಿನಾಂಕವನ್ನು ಘೋಷಿಸುವ ಸಾಧ್ಯತೆಯಿದೆ.
MUST WATCH : ಶಿರಾದಲ್ಲಿ ಮತ್ತೊಂದು ದರೋಡೆ ಪ್ರಕರಣ ಕಾರಿನ ಗಾಜು ಹೊಡೆದು ಹಣ ಕಳ್ಳತನ




