Dhurandhar 2 ಸಿನಿಮಾದ ಟ್ರೈಲರ್ ಇಂದು ರಿಲೀಸ್ ಆಗಿದೆ.

ಸ್ಟಾರ್ ನಿರ್ದೇಶಕ ಆದಿತ್ಯ ಧರ್ ಅವರ ಬಹುನಿರೀಕ್ಷಿತ ‘ಧುರಂಧರ್ 2’ ಸಿನಿಮಾದ ಟ್ರೈಲರ್ ಇಂದು ಬಿಡುಗಡೆಯಾಗಿದ್ದು, ಈಗಾಗಲೇ ಸಿನಿಪ್ರೇಮಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಆ್ಯಕ್ಷನ್ ಮತ್ತು ಥ್ರಿಲ್ಲರ್ ಮಿಶ್ರಿತ ಈ ಚಿತ್ರ ಮಾರ್ಚ್ 19ರಂದು ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರದ ಮುಂಗಡ ಬುಕ್ಕಿಂಗ್ ಆರಂಭವಾಗಿದೆ.
ಪ್ರಮುಖ ಪಾತ್ರದಲ್ಲಿ ಹಲವು ಖ್ಯಾತ ಕಲಾವಿದರು
ಚಿತ್ರದಲ್ಲಿ ರಣವೀರ್ ಸಿಂಗ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಆ್ಯಕ್ಷನ್ ಅವತಾರ ಟ್ರೈಲರ್ನಲ್ಲೇ ಗಮನ ಸೆಳೆದಿದೆ.
ಚಿತ್ರದಲ್ಲಿ ಅರ್ಜುನ್ ರಾಂಪಾಲ್, ಸಂಜಯ್ ದತ್, ಸಾರಾ ಅರ್ಜುನ್, ರಾಕೇಶ್ ಬೇಡಿ ಮತ್ತು ಆರ್ ಮಾಧವನ್ ಸೇರಿದಂತೆ ಹಲವು ಖ್ಯಾತ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

READ THIS : Gadag|ಮಕ್ಕಳ ಹಾಸಿಗೆ, ಬೆಡ್ಶೀಟ್ ಅಧಿಕಾರಿ ಮನೆಯಲ್ಲಿ ಪತ್ತೆ
ಟ್ರೇಲರ್ ನೋಡಿ ಬಾಲಿವುಡ್ ಮಂದಿ ರಿಯಾಕ್ಷನ್ ಹೇಗಿದೆ?
ಸುಮಾರು 3 ಗಂಟೆ 40 ನಿಮಿಷಗಳ ಅವಧಿಯ Dhurandhar 2 ಚಿತ್ರ ಈಗಾಗಲೇ ಟ್ರೈಲರ್ ಮೂಲಕವೇ ಸಿನಿಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಟ್ರೈಲರ್ ವೀಕ್ಷಿಸಿದ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರತಂಡವನ್ನು ಪ್ರಶಂಸಿಸುತ್ತಿದ್ದಾರೆ.
ಟ್ರೈಲರ್ ಹಂಚಿಕೊಂಡು ಚಿತ್ರತಂಡಕ್ಕೆ ಶುಭ
ಬಾಲಿವುಡ್ ನಟ ವಿಕ್ಕಿ ಕೌಶಲ್ ತಮ್ಮ ಇನ್ಸ್ಟಾಗ್ರಾಮ್ ಕಥೆಗಳಲ್ಲಿ ಟ್ರೈಲರ್ ಹಂಚಿಕೊಂಡು ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಇತ್ತ ರಣವೀರ್ ಸಿಂಗ್ ಅವರ ಪತ್ನಿ ದೀಪಿಕಾ ಪಡುಕೋಣೆ ಕೂಡ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಟ್ರೈಲರ್ ಹಂಚಿಕೊಂಡು ಬೆಂಬಲ ವ್ಯಕ್ತಪಡಿಸಿದ್ದಾರೆ.

3.9 ಮಿಲಿಯನ್ ವೀಕ್ಷಣೆ
ಇನ್ನು ಬಿಡುಗಡೆಯಾದ ಕೇವಲ ಎರಡು ಗಂಟೆಗಳಲ್ಲಿ ‘ಧುರಂಧರ್: ದಿ ರಿವೆಂಜ್’ ಟ್ರೈಲರ್ ಯೂಟ್ಯೂಬ್ನಲ್ಲಿ ಈಗಾಗಲೇ 3.9 ಮಿಲಿಯನ್ ವೀಕ್ಷಣೆಗಳನ್ನು ದಾಟಿದೆ. ಕಳೆದ ಬಾರಿ ಈ ಚಿತ್ರ ಹಿಂದಿಯಲ್ಲಿ ಮಾತ್ರ ಬಿಡುಗಡೆಯಾಗಿತ್ತು.
ಆದರೆ ಈ ಬಾರಿ ಹಿಂದಿ ಜೊತೆಗೆ ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲೂ ಬಿಡುಗಡೆಯಾಗಲಿದ್ದು, ಹೆಚ್ಚಿನ ಪ್ರೇಕ್ಷಕರನ್ನು ತಲುಪುವ ನಿರೀಕ್ಷೆ ಇದೆ.
MUST WATCH : WAR EFFECTS | 5 ದಿನ ಆದ್ರು ಕಡಿಮೆ ಆಗ್ತಿಲ್ಲ ಭೀಕರ ಯುದ್ಧ- ಭಾರತಕ್ಕೂ ತಟ್ಟಿದ ಯುದ್ಧದ ಎಫೆಕ್ಟ್




