Gadag : ಮಕ್ಕಳಿಗೆ ಕೊಡಬೇಕಿದ್ದ ಹಾಸಿಗೆ,ಬೆಡ್ಶೀಟ್ ಅಧಿಕಾರಿ ಮನೆಯಲ್ಲಿ – ಲೋಕಾಯುಕ್ತ ಶಾಕ್

ಕರ್ನಾಟಕದಲ್ಲಿ ಭ್ರಷ್ಟಾಚಾರ ಆರೋಪದ ಮೇಲೆ ಮೊನ್ನೆ ಅಷ್ಟೇ ಅಧಿಕಾರಿಗಳು ಹಲವು ಜಿಲ್ಲೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಗದಗ, ಧಾರವಾಡ, ಬೆಂಗಳೂರು, ಮೈಸೂರು, ಮಂಡ್ಯ ಸೇರಿದಂತೆ ಹಲವು ಜಿಲ್ಲೆಗಳ ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ದಾಳಿಯಾಗಿದ್ದು, ಅಪಾರ ಪ್ರಮಾಣದ ಆಸ್ತಿ,ಪಾಸ್ತಿ ದಾಖಲೆಗಳು ಪತ್ತೆಯಾಗಿವೆ.

READ THIS : Women’s Day ಏಕೆ ಆಚರಿಸುತ್ತಾರೆ – ಈ ಆಚರಣೆಯ ಇತಿಹಾಸವೇನು?
ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ದಾಳಿಯಾಗಿದ್ದು, ಅಪಾರ ಪ್ರಮಾಣಧ ಆಸ್ತಿ ಪಾಸ್ತಿ ದಾಖಲೆಗಳು ಪತ್ತೆಯಾಗಿವೆ. ಇನ್ನು ಲೋಕಾಯುಕ್ತ ಪೊಲೀಸರ ಶೋಧ ವೇಳೆ Gadag ಜಿಲ್ಲೆಯ ಶಿರಹಟ್ಟಿ ತಾಲ್ಲೂಕು ಬಿಸಿಎಂ ಅಧಿಕಾರಿ ಎಂ.ಕೆ.ಸುರಕೋಡ ಅವರ ಮನೆಯಲ್ಲಿ ಬಿಸಿಎಂ ಇಲಾಖೆಯಿಂದ ಮಕ್ಕಳಿಗೆ ನೀಡಬೇಕಿದ್ದ ಹಾಸಿಗೆ, ಬೆಡ್ ಶೀಟ್, ನೋಟ್ ಪುಸ್ತಕಗಳು ಹಾಗೂ ಹಾಸ್ಟೆಲ್ ನಲ್ಲಿ ಅಡುಗೆಗೆ ಬಳಸುವ ದೊಡ್ಡ ದೊಡ್ಡ ಪಾತ್ರೆಗಳು ಸಿಕ್ಕಿದ್ದು, ಲೋಕಾಯುಕ್ತರೇ ಶಾಕ್ ಆಗಿದ್ದಾರೆ.

ಇನ್ನು ಲೋಕಾ ದಾಳಿಯಲ್ಲಿ ಎಂ.ಕೆ.ಸುರಕೋಡ ಅವರು ಶೇ 227 ರಷ್ಟು ಅಧಿಕ ಆಸ್ತಿ ಹೊಂದಿರುವುದನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

MUST WATCH : ರಸ್ತೆ ಬದಿ ಕಸ ಸುರಿದು ದರ್ಪ ಮೆರೆದಿದ್ದ ವ್ಯಕ್ತಿ – ಆತನನ್ನು ಪತ್ತೆ ಹಚ್ಚಿ ಪೈನ್ ಹಾಕಿದ ಪಾಲಿಕೆ




