ಪ್ರತಿ ವರ್ಷ ಮಾರ್ಚ್ 8ರಂದು ಅಂತಾರಾಷ್ಟ್ರೀಯ Women’s Day ಆಚರಿಸಲಾಗುತ್ತದೆ.

ಸ್ತ್ರೀ ಎಂದರೆ ಕೇವಲ ಒಂದು ಪದವಲ್ಲ, ಅದು ಜೀವನದ ಅನೇಕ ರೂಪಗಳ ಸಂಕಲನ. ಆಕೆ ಮನೆಯ ಮಗಳಾಗಿ ಹುಟ್ಟಿ, ತಾಯಿಯಾಗಿ, ತಂಗಿಯಾಗಿ, ಅಕ್ಕನಾಗಿ, ಮಡದಿಯಾಗಿ ಕುಟುಂಬವನ್ನು ಕಟ್ಟಿಹಾಕುವ ಶಕ್ತಿಯಾಗಿದೆ. ಒಂದು ಮನೆಯಲ್ಲಿ ಮಗಳಾಗಿ ಬೆಳೆಯುವ ಆಕೆ, ಮತ್ತೊಂದು ಮನೆಗೆ ಬೆಳಕಾಗಿ ಹೋಗುತ್ತಾಳೆ. ಹೊಸ ಜೀವಕ್ಕೆ ಜೀವ ನೀಡುವ ಶಕ್ತಿ ಹೊಂದಿರುವಳು. ಬದುಕಿನಿಡೀ ಗಂಧದಂತೆ ತೇಯುತ್ತಾ, ದೀಪದಂತೆ ಉರಿಯುತ್ತಾ ಕುಟುಂಬ ಹಾಗೂ ಸಮಾಜಕ್ಕೆ ಬೆಳಕಾಗುತ್ತಾಳೆ.
ಮಾರ್ಚ್ 8 ರಂದೇ ಯಾಕೆ ಆಚರಿಸುತ್ತಾರೆ Women’s Day
ಪ್ರತಿ ದಿನವೂ ಕುಟುಂಬ ಹಾಗೂ ಸಮಾಜಕ್ಕಾಗಿ ಶ್ರಮಿಸುವ ಮಹಿಳೆಯರ ಸಾಧನೆ, ತ್ಯಾಗ ಮತ್ತು ಕೊಡುಗೆಯನ್ನು ಗೌರವಿಸುವ ಸಲುವಾಗಿ ಪ್ರತಿವರ್ಷ ಮಾರ್ಚ್ 8ರಂದು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ಮಹಿಳೆಯರ ಸಾಧನೆಗಳನ್ನು ಸ್ಮರಿಸುವುದರ ಜೊತೆಗೆ ಲಿಂಗ ಸಮಾನತೆ ಕುರಿತು ಜಾಗೃತಿ ಮೂಡಿಸುವ ಮಹತ್ವದ ದಿನವಾಗಿದೆ. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ನೀಡಿರುವ ಕೊಡುಗೆಗಳನ್ನು ಈ ದಿನ ವಿಶೇಷವಾಗಿ ನೆನಪಿಸಲಾಗುತ್ತದೆ.
ನಿಜ ಜೀವನದಲ್ಲಿಯೂ ಸಮರ್ಪಕವಾಗಿ ಅನುಷ್ಠಾನವಾಗಬೇಕು
2026ರ ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ವಿಶ್ವಸಂಸ್ಥೆ “ಹಕ್ಕುಗಳು, ನ್ಯಾಯ ಮತ್ತುಕ್ರಿಯೆ– ಎಲ್ಲಾಮಹಿಳೆಯರು ಮತ್ತು ಹುಡುಗಿಯರಿಗಾಗಿ” ಎಂಬ ವಿಷಯವನ್ನು ಘೋಷಿಸಿದೆ. ಮಹಿಳೆಯರಿಗೆ ಕಾನೂನಿನಲ್ಲಿ ಇರುವ ಹಕ್ಕುಗಳು ನಿಜ ಜೀವನದಲ್ಲಿಯೂ ಸಮರ್ಪಕವಾಗಿ ಅನುಷ್ಠಾನವಾಗಬೇಕು ಎಂಬುದನ್ನು ಈ ಸಂದೇಶ ಒತ್ತಿಹೇಳುತ್ತದೆ. ಇನ್ನೂ ಜಗತ್ತಿನ ಹಲವು ಭಾಗಗಳಲ್ಲಿ ಮಹಿಳೆಯರು ಪುರುಷರಿಗೆ ಇರುವ ಹಕ್ಕುಗಳಿಗಿಂತ ಕಡಿಮೆ ಅವಕಾಶಗಳನ್ನು ಪಡೆಯುತ್ತಿದ್ದಾರೆ ಎಂಬುದು ಹಲವು ಅಧ್ಯಯನಗಳಿಂದ ತಿಳಿದುಬಂದಿದೆ.
READ THIS : Karnataka Budget 2026| ಗೃಹಲಕ್ಷ್ಮೀ ಯೋಜನೆಗೆ ಭರ್ಜರಿ ಅನುದಾನ

ಮಹಿಳಾ ದಿನಾಚರಣೆಯ ಇತಿಹಾಸವೇನು..?
ಮಾರ್ಚ್ 8 ದಿನಾಂಕಕ್ಕೂ ವಿಶಿಷ್ಟವಾದ ಇತಿಹಾಸವಿದೆ. 1908ರಲ್ಲಿ ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ಸಾವಿರಾರು ಮಹಿಳೆಯರು ಉತ್ತಮ ವೇತನ, ಕಡಿಮೆ ಕೆಲಸದ ಅವಧಿ ಮತ್ತು ಮತದಾನದ ಹಕ್ಕಿಗಾಗಿ ಮೆರವಣಿಗೆ ನಡೆಸಿದರು. ಈ ಹೋರಾಟ ಮಹಿಳಾ ಹಕ್ಕುಗಳ ಚಳವಳಿಗೆ ಪ್ರಮುಖ ತಿರುವು ನೀಡಿತು.
ನಂತರ 1910ರಲ್ಲಿ ಡೆನ್ಮಾರ್ಕ್ನ ಕೋಪನ್ಹೇಗನ್ ನಗರದಲ್ಲಿ ನಡೆದ ಅಂತರರಾಷ್ಟ್ರೀಯ ಮಹಿಳಾ ಸಮ್ಮೇಳನದಲ್ಲಿ ಮಹಿಳಾ ದಿನವನ್ನು ಆಚರಿಸುವ ಕಲ್ಪನೆಗೆ ಬಲ ಸಿಕ್ಕಿತು. 1917ರಲ್ಲಿ ರಷ್ಯಾದಲ್ಲಿ ಮಹಿಳೆಯರು “ಬ್ರೆಡ್ ಮತ್ತು ಶಾಂತಿ”ಗಾಗಿ ನಡೆಸಿದ ಪ್ರತಿಭಟನೆ ಕೂಡ ಮಹಿಳಾ ದಿನಾಚರಣೆಯ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿದೆ.
ಭಾರತದಲ್ಲಿಯೂ ಆಚರಣೆ
ಭಾರತದಲ್ಲಿಯೂ ಮಹಿಳಾ ದಿನವನ್ನು ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ. ಸರ್ಕಾರ ಹಾಗೂ ವಿವಿಧ ಸಾಮಾಜಿಕ ಸಂಸ್ಥೆಗಳು ಮಹಿಳೆಯರ ಶಿಕ್ಷಣ, ಆರೋಗ್ಯ ಮತ್ತು ಸುರಕ್ಷತೆ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತವೆ. ಕೆಲವು ನಗರಗಳಲ್ಲಿ ಮಹಿಳೆಯರ ಆರೋಗ್ಯ ಮತ್ತು ಸಬಲೀಕರಣವನ್ನು ಉತ್ತೇಜಿಸಲು ವಿಶೇಷ ಓಟಗಳು ಹಾಗೂ ಸಾರ್ವಜನಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಅನೇಕ ಕ್ಷೇತ್ರಗಳಲ್ಲಿ ಸಾಧನೆ
ಇಂದಿನ ಸಮಾಜದಲ್ಲಿ ಮಹಿಳೆಯರು ಶಿಕ್ಷಣ, ವಿಜ್ಞಾನ, ರಾಜಕೀಯ, ಕ್ರೀಡೆ ಮತ್ತು ವ್ಯಾಪಾರ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಆದರೆ ಇನ್ನೂ ಸಮಾನ ಅವಕಾಶ ಮತ್ತು ಸುರಕ್ಷತೆಗಾಗಿ ಹೋರಾಟ ಮುಂದುವರಿಯುತ್ತಿದೆ. ಆದ್ದರಿಂದ ಮಹಿಳಾ ದಿನವು ಕೇವಲ ಆಚರಣೆಯ ದಿನವಲ್ಲ, ಮಹಿಳೆಯರ ಸಮಾನತೆ ಮತ್ತು ಗೌರವಕ್ಕಾಗಿ ಸಮಾಜ ಒಟ್ಟಾಗಿ ಕೆಲಸ ಮಾಡುವ ಸಂಕಲ್ಪದ ದಿನವಾಗಿದೆ.
MUST WATCH : 73 ಗ್ರಾ.ಪಂಚಾಯ್ತಿಗಳಿಂದ ಅತಿದೊಡ್ಡ ಭ್ರಷ್ಟಾಚಾರ- ಹಣ ಹೊಡೆದವರಿಗೆ CEO ನೋಟಿಸ್ ಕೊಟ್ಟು ವಾರ್ನಿಂಗ್




