Karnataka Budget 2026 : ಪಂಚ ಗ್ಯಾರಂಟಿಗಳಿಗೆ ಮತ್ತೆ ಭಾರೀ ಅನುದಾನ: ಬಜೆಟ್ʼನಲ್ಲಿ ₹51,286 ಕೋಟಿ ಮೀಸಲು.

Karnataka Budget 2026 : 2026–27 ಸಾಲಿನ ರಾಜ್ಯ ಬಜೆಟ್ನಲ್ಲಿ ಪಂಚ ಗ್ಯಾರಂಟಿ ಯೋಜನೆಗಳಿಗೆ ಒಟ್ಟು ₹51,286 ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ. ಇದು ರಾಜ್ಯದ ಒಟ್ಟು ರಾಜಸ್ವ ವೆಚ್ಚದ ಸುಮಾರು 16 ಶೇಕಡಾ ಪಾಲಾಗಿದ್ದು, ಈ ಯೋಜನೆಗಳ ಭಾರೀ ವೆಚ್ಚದಿಂದ ರಾಜ್ಯದ ಹಣಕಾಸು ಸಮತೋಲನದ ಮೇಲೆ ಒತ್ತಡ ಹೆಚ್ಚುತ್ತಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ಯೋಜನೆವಾರು ಅನುದಾನ
2026–27 ಸಾಲಿನ ಬಜೆಟ್ನಲ್ಲಿ ಪಂಚ ಗ್ಯಾರಂಟಿ ಯೋಜನೆಗಳಿಗೆ ಹಂಚಿಕೆ ಮಾಡಿರುವ ಅನುದಾನ ಹೀಗಿದೆ:
- ಗೃಹಲಕ್ಷ್ಮಿ ಯೋಜನೆ – ₹28,608 ಕೋಟಿ
- ಅನ್ನಭಾಗ್ಯ ಯೋಜನೆ – ₹6,200 ಕೋಟಿ
- ಗೃಹಜ್ಯೋತಿ ಯೋಜನೆ – ₹10,578 ಕೋಟಿ
- ಶಕ್ತಿ ಯೋಜನೆ – ₹5,300 ಕೋಟಿ
- ಯುವನಿಧಿ ಯೋಜನೆ – ₹600 ಕೋಟಿ
ಒಟ್ಟಾರೆ ಕಳೆದ ಸಾಲಿನಿಗಿಂತ ಸುಮಾರು ₹252 ಕೋಟಿ ಹೆಚ್ಚು ಅನುದಾನ ಈ ಬಾರಿ ಹಂಚಿಕೆ ಮಾಡಲಾಗಿದೆ.

READ THIS : 3 ದಿನದ ಹಿಂದಿನ ಸಾಂಬಾರ್ ಬಡಿಸಿದ್ದಕ್ಕೆ ಪತಿ ಕಿರಿಕ್ – ದುರಂತ ಅಂತ್ಯಕಂಡ ಪತ್ನಿ
ಹಿಂದಿನ ಸಾಲುಗಳ ಅನುದಾನ ವಿವರ
ಕಳೆದ ನಾಲ್ಕು ಸಾಲುಗಳಲ್ಲಿ ಪಂಚ ಗ್ಯಾರಂಟಿಗಳಿಗೆ ಹಂಚಿಕೆ ಮಾಡಲಾದ ಅನುದಾನ ಹೀಗಿದೆ:
- 2023–24: ₹35,410 ಕೋಟಿ
- 2024–25: ₹52,009 ಕೋಟಿ
- 2025–26: ₹51,034 ಕೋಟಿ
- 2026–27: ₹51,286 ಕೋಟಿ
ವೆಚ್ಚ ಕಡಿತಕ್ಕೆ ಸರ್ಕಾರ ಸಮ್ಮತಿಸಿಲ್ಲ
ಕಳೆದ ಎರಡು ವರ್ಷಗಳಿಂದ ಪಂಚ ಗ್ಯಾರಂಟಿ ಯೋಜನೆಗಳ ವೆಚ್ಚವನ್ನು ತರ್ಕಬದ್ಧಗೊಳಿಸುವಂತೆ ಆರ್ಥಿಕ ಇಲಾಖೆ ಸರ್ಕಾರಕ್ಕೆ ಸಲಹೆ ನೀಡುತ್ತಲೇ ಬಂದಿದೆ. ಈ ಬಾರಿ ನಡೆದ ಬಜೆಟ್ ಪೂರ್ವಭಾವಿ ಸಭೆಗಳಲ್ಲೂ ವೆಚ್ಚ ಕಡಿಮೆ ಮಾಡುವ ಬಗ್ಗೆ ಗಂಭೀರ ಚರ್ಚೆ ನಡೆದಿತ್ತು.
ಯೋಜನೆಗಳಿಗೆ ಭಾರೀ ಅನುದಾನ
ಪಂಚ ಗ್ಯಾರಂಟಿಗಳಿಂದ ರಾಜ್ಯದ ಹಣಕಾಸು ಸಮತೋಲನದ ಮೇಲೆ ಒತ್ತಡ ಹೆಚ್ಚುತ್ತಿದೆ ಎಂದು ಹೇಳಿ ಅನುದಾನ ಕಡಿತ ಮಾಡುವ ನಿರೀಕ್ಷೆಯೂ ಮೂಡಿತ್ತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಲಹೆಗಳನ್ನು ಪರಿಗಣಿಸದೇ ಯೋಜನೆಗಳಿಗೆ ಭಾರೀ ಅನುದಾನ ಮುಂದುವರಿಸಿದ್ದಾರೆ.

ಸರ್ಕಾರದ ಮೇಲಿನ ಹೊರೆ ಕಡಿಮೆ ಮಾಡುವಂತೆ ಒತ್ತಾಯ
ಇನ್ನೊಂದೆಡೆ, ಕೆಲ ಹಿರಿಯ ಸಚಿವರು ಹಾಗೂ ಆಡಳಿತಾರೂಢ ಪಕ್ಷದ ಶಾಸಕರು ಕೂಡ ಪಂಚ ಗ್ಯಾರಂಟಿ ಯೋಜನೆಗಳ ವೆಚ್ಚವನ್ನು ತರ್ಕಬದ್ಧಗೊಳಿಸಿ ಸರ್ಕಾರದ ಮೇಲಿನ ಹೊರೆ ಕಡಿಮೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ ಈ ಕುರಿತು ಇನ್ನೂ ಅಂತಿಮ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
MUST WATCH : ತುಮಕೂರು- ಕುಣಿಗಲ್ ರಸ್ತೆಯಲ್ಲಿ ಆಕ್ಸಿಡೆಂ* ಮರಕ್ಕೆ ಲಾರಿ ಡಿಕ್ಕಿ, ಇಬ್ಬರು ಸ್ಥಳದಲ್ಲೇ ಸಾ*




