
TUMAKURU : ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ತುಮಕೂರು ತಾಲೂಕು ದಂಡಾಧಿಕಾರಿಗಳ ಕಚೇರಿ ಹಸಿರು ತೋರಣ ಬಾಳೆಕಂದು ಹೂವು ಬೆರಗಿನಲ್ಲಿ ಕಂಗೊಳಿಸುತ್ತಿದ್ದು, ಅಧಿಕಾರಿಗಳೆಲ್ಲರೂ ಸೇರಿ ದಸರಾ ಹಬ್ಬ ಆಚರಣೆ ಮಾಡುತ್ತಿದ್ದಾರೆ. ಜನರು ಕೂಡ ಅತ್ಯಂತ ಸಂಭ್ರಮದಿಂದ ಪಾಲ್ಗೊಂಡಿದ್ದರು.
ಗ್ರಾಮಾಂತರ ಕ್ಷೇತ್ರದ ಪ್ರತಿ ಹೋಬಳಿಯಲ್ಲಿ ತಲಾ ಒಂದು ದಿವಸ ಪೂಜೆ ಕಾರ್ಯಕ್ರಮವನ್ನು ತಾಲೂಕು ಕಚೇರಿಯಲ್ಲಿ ಹಮ್ಮಿಕೊಂಡಿದ್ದು, ಇಂದು ಮೂರನೇ ದಿವಸವಾದ ಕಾರಣ ಕೋರ ಹೋಬಳಿ ಸಿಬ್ಬಂದಿ ವರ್ಗದವರಿಂದ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಕಚೇರಿಗೆ ಭೇಟಿ ನೀಡಲು ಬಂದಿದಂತಹ ಸಾರ್ವಜನಿಕರಿಗೆ ಹಾಗೂ ಸಿಬ್ಬಂದಿಗಳಿಗೆ ಊಟದ ವ್ಯವಸ್ಥೆಯನ್ನು ಸಹ ಹಮ್ಮಿಕೊಂಡಿದ್ದರು.
ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿ ರಾಜೇಶ್ವರಿ ಅವರು ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಮೈಸೂರು ದಸರಾ ಬಿಟ್ಟರೆ ತುಮಕೂರಿ ದಸರಾ ಚೆನ್ನಾಗಿರೋದು. ಕಳೆದ ಬಾರಿ ಆದ ನೂನ್ಯತೆಗಳನ್ನೆಲ್ಲ ಸರಿಪಡಿಸಿಕೊಂಡು, ಈ ವರ್ಷ ಅದ್ದೂರಿಯಾಗಿ ದಸರಾ ಆಚರಣೆಯನ್ನು ಮಾಡುತ್ತಿದ್ದೇವೆ. ವಿಶೇಷವಾಗಿ ನಮ್ಮ ತಾಲೂಕಿನ ಜನರು ಬಂದು ದಸರಾ ಹಬ್ಬದ ಸವಿಯನ್ನು ಸವಿಯಿರಿ ಎಂದು ದಸರಾಗೆ ಬರುವಂತೆ ಆಹ್ವಾನ ನೀಡಿದರು.
ತಾಲೂಕು ಆಡಳಿತದ ವತಿಯಿಂದ ನಿಮಗೆ ಬೇಕಾದ ಎಲ್ಲಾ ಅನುಕೂಲಗಳನ್ನು ಮಾಡಿ ಕೊಡುತ್ತೇವೆ. ಈಗಾಗಲೇ ವಿದ್ಯುತ್ ಅಲಂಕಾರದಿಂದ ಜಿಲ್ಲೆ ಕಂಗೊಳಿಸುತ್ತಿದೆ. ಇದನ್ನು ನಡೆಸುತ್ತಿರುವ ಗೃಹ ಸಚಿವ ಪರಮೇಶ್ವರ್. ಜಿಲ್ಲಾಧಿಕಾರಿಗಳಾದ ಶುಭ ಕಲ್ಯಾಣ್ ಹಾಗೂ ಅಧಿಕಾರಿಗಳಿಂದ ಹಿಡಿದು ಪ್ರತಿಯೊಬ್ಬರು ಸಹಕಾರ ನೀಡುತ್ತಿದ್ದು, ವಿಶೇಷವಾಗಿ ನನ್ನ ತಾಲೂಕಿನ ಪ್ರಜೆಗಳು ಉಪಯೋಗಿಸಿಕೊಳ್ಳಿ ಎಂದು ತಿಳಿಸಿದರು.





