
TUMAKURU : ಯಾವಾಗಲೂ ಹೋದಲ್ಲಿ ಬಂದಲ್ಲಿ ಸರ್ಕಾರವನ್ನು ಕಟುವಾಗಿ ಟೀಕಿಸುವ ಶಾಸಕ ಸುರೇಶ್ ಗೌಡ ಅವರು ಮೂರು ಬಾರಿ ಶಾಸಕರಾದ್ರು, ತಮ್ಮ ಕ್ಷೇತ್ರಕ್ಕೆ ಏನು ಕೊಟ್ಟಿದ್ದಾರೆ ಅಂತಾ ನಾವಲ್ಲ ಸ್ವತಃ ಅವರ ಕ್ಷೇತ್ರದ ಜನರೇ ಕೇಳುತ್ತಿದ್ದಾರೆ. ಶಾಸಕ ಸುರೇಶ್ ಗೌಡ ಅವರ ಕಣ್ಣಿಗೆ ನಗರ- ಹೋಬಳಿಗಳ ರಸ್ತೆಗಳು ಮಾತ್ರ ಕಾಣಿಸೋದು ಅಂತಾ ಕಾಣುತ್ತೆ. ವೋಟ್ ಕೇಳುವಾಗ ಪ್ರತಿ ಹಳ್ಳಿ- ಹಳ್ಳಿಗೂ ಭೇಟಿ ಕೊಡ್ತೀರಲ್ವಾ, ಗೆದ್ದ ಮೇಲೆ ಆ ರಸ್ತೆಯನ್ನ ಸರಿ ಮಾಡಬೇಕು ಅಂತಾ ಅನಿಸ್ತಿಲ್ಲ. ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಆಗಿದ್ರು ತುಮಕೂರು ಗ್ರಾಮಾಂತರ ಕ್ಷೇತ್ರದ ಅದೆಷ್ಟೋ ಗ್ರಾಮಗಳ ರಸ್ತೆಗಳು ಟಾರ್ ಭಾಗ್ಯವನ್ನೇ ಕಂಡಿಲ್ವಂತೆ. ಇನ್ನು ತುಮಕೂರು ಗ್ರಾಮಾಂತರ ಕ್ಷೇತ್ರದ ಗ್ರಾಮಗಳ ರಸ್ತೆಯ ದುಸ್ಥಿತಿಯನ್ನು ಪ್ರಜಾಶಕ್ತಿ ಟಿವಿಯ ಬಯಲಿಗೆಳೆಯುವ ಕೆಲಸ ಮಾಡ್ತಿದೆ.
ತುಮಕೂರು ನಗರದಿಂದ ಕೇವಲ 10 ಕಿಲೋ ಮೀಟರ್ ದೂರದಲ್ಲಿರೋ ಹೆತ್ತೇನಹಳ್ಳಿ ಗ್ರಾಮ ಪಂಚಾಯ್ತುಗೆ ಸೇರಿರುವ ಲಕ್ಷಣಸಂದ್ರ ಗ್ರಾಮ, ಮಾನ್ಯ ಸುರೇಶ್ ಗೌಡ ಅವರ ಕ್ಷೇತ್ರಕ್ಕೆ ಸೇರಲಿದ್ದು ಈವರೆಗೂ ಯಾವುದೇ ಅಭಿವೃದ್ಧಿ ಕಂಡಿಲ್ಲ. ಈ ಗ್ರಾಮದ ರಸ್ತೆ ಸಂಪೂರ್ಣ ಗುಂಡಿಮಯವಾಗಿದ್ದು, ಈವರೆಗೂ ಟಾರ್ ಭಾಗ್ಯವನ್ನೇ ಕಂಡಿಲ್ವಂತೆ. ಮಳೆ ಬಂದ್ರೆ ಸಾಕು ಸಂಪೂರ್ಣ ಕೆಸರು ಗದ್ದೆ ಆಗುವ ಈ ರಸ್ತೆ, ಬೇಸಿಗೆಯಲ್ಲಿ ಸಂಪೂರ್ಣ ಧೂಳುಮಯವಾಗಲಿದೆ. ಸಂಪೂರ್ಣ ಕೆಸರು ಗದ್ದೆಯಾದ ಈ ರಸ್ತೆಯಲ್ಲಿ ದಿನ ಇಲ್ಲಿನ ಜನರು ಓಡಾಡೋದೇ ದೊಡ್ಡ ಸವಾಲಿನ ಕೆಲಸವಾಗಿದೆ. ಅಲ್ದೇ ಈ ರಸ್ತೆಯಲ್ಲಿ ಬಿದ್ದು ಅದೆಷ್ಟೋ ಮಂದಿ ಆಸ್ಪತ್ರೆ ಪಾಲಾಗಿದ್ದಾರೆ.
ಇನ್ನು ಲಕ್ಷ್ಮಣಸಂದ್ರ ಗ್ರಾಮದ ಜನರು ತಮ್ಮ ಗ್ರಾಮಕ್ಕೆ ರಸ್ತೆ ಬೇಕೆಂದು ಈ ಹಿಂದೆ ಶಾಸಕರಾಗಿದ್ದ ಗೌರಿ ಶಂಕರ್ ಹಾಗೂ ಈಗ ಶಾಸಕರಾಗಿರೋ ಸುರೇಶ್ ಗೌಡ ಅವರನ್ನು ಹಲವು ಬಾರಿ ಮನವಿ ಮಾಡಿದ್ರು ಯಾರು ಕೇರ್ ಮಾಡ್ತಾ ಇಲ್ಲ. ಸಿಟಿಗೆ ಹೋದ್ರೆ ಬರಲು ಬಸ್ಗಳು ಇಲ್ಲ, ಆಟೋಗೆ 500 ರೂಪಾಯಿ ಕೇಳ್ತಾರೆ. ಅಷ್ಟು ದುಡ್ಡು ಕೊಟ್ಟರು ಕೆಲವರು ಬರಲ್ಲ. ಈ ರಸ್ತೆಯಲ್ಲಿ ಓಡಾಡಿದ್ರೆ ಆಟೋಗಳು ರಿಪೇರಿಗೆ ಬರ್ತಾವೆ ಅದಕ್ಕೆ ನಾವು ಬರಲ್ಲ ಅಂತಾರೇ. ವೋಟ್ ಹಾಕಿಸಿಕೊಂಡು ಹೋದವರು ಆರಾಮಾಗಿ ಹೆಂಡ್ತಿ- ಮಕ್ಕಳ ಜೊತೆ ಇರ್ತಾರೆ.. ಆದ್ರೆ ನಾವು ಮಾತ್ರ ದಿನ ಸಾಯ್ತಾ ಇದ್ದೀವಿ ಅಂತಾ ಮಾನ್ಯ ಶಾಸಕ ಸುರೇಶ್ ಗೌಡ ವಿರುದ್ಧ ಆಕ್ರೋಶ ಹೊರ ಹಾಕಿದರು.
ಇನ್ನು ಲಕ್ಷ್ಮಣಸಂದ್ರ ಗ್ರಾಮದ ರಸ್ತೆ ಹಾಳಾಗಿದ್ರು ಕೂಡ ಯಾರು ತಲೆಕೆಡಿಸಿಕೊಳ್ತಾ ಇಲ್ಲ. ಈ ರಸ್ತೆಯಲ್ಲಿ ಸ್ಕೂಲ್ ಬಸ್ಗಳು ಓಡಾಡ್ತಾವೆ.. ಸ್ಕೂಲ್ ಬಸ್ ಏನಾದ್ರು ಬಿದ್ರೆ ಅಮಾಯಕ ಮಕ್ಕಳ ಪ್ರಾಣಕ್ಕೆ ಯಾರು ಬೆಲೆ ಕಟ್ಟುತ್ತಾರೆ. ಇವರಿಗೆ ವೋಟ್ ಹಾಕೊಕೆ ಮಾತ್ರ ಜನ ಬೇಕು ಉಳಿದಂತೆ ನಾವು ಬೇಡ. ಮುಂದೆ ಬರೋ ಎಲೆಕ್ಷನ್ನನ್ನು ನಾವು ಬಾಯ್ಕಟ್ ಮಾಡ್ತೀವಿ, ನಮ್ಮ ಊರಿಗೆ ಯಾರು ವೋಟ್ ಕೇಳೊಕೆ ಬರಲು ನಾವು ಬಿಡೋದಿಲ್ಲ ಎಂದು ಗ್ರಾಮಸ್ಥರು ಕಿಡಿ ಕಾರಿದರು.
ಒಟ್ಟಿನಲ್ಲಿ ತುಮಕೂರು ನಗರದಿಂದ ಕೇವಲ ಕೆಲವೇ ಕಿಲೋ ಮೀಟರ್ ದೂರದಲ್ಲಿರೋ ಲಕ್ಷ್ಮಣ ಸಂದ್ರ ಗ್ರಾಮದ ಸ್ಥಿತಿ ಅಯೋಮಯವಾಗಿದ್ದು, ಇನ್ನಾದ್ರು ಶಾಸಕ ಸುರೇಶ್ ಗೌಡ ಅವರಾಗಲಿ, ಗ್ರಾಮ ಪಂಚಾಯ್ತಿ ಅಧಿಕಾರಿಗಳಾಗಲಿ ಎಚ್ಚೆತ್ತು ಈ ಗ್ರಾಮಕ್ಕೆ ರಸ್ತೆ ಭಾಗ್ಯ ಒದಗಿಸಿಕೊಡ್ತಾರಾ ಎಂದು ಕಾದು ನೋಡಬೇಕಿದೆ.




